ಕರ್ನಾಟಕ ಹೈಕೋರ್ಟ್ 
ರಾಜ್ಯ

ಹಣ ದುರುಪಯೋಗ: ಎಫ್ಐಆರ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಮಂತ್ರಿ ಡೆವಲಪರ್ಸ್‌‌ಗೆ ಬಿಗ್ ರಿಲೀಫ್

ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಿಯಲ್ ಎಸ್ಟೇಟ್ ದೈತ್ಯ ಮಂತ್ರಿ ಡೆವಲಪರ್ಸ್‌ ಕಂಪನಿ ಮತ್ತು ಅದರ ಸ್ಥಾಪಕ ಸದಸ್ಯರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಕಂಪನಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 

ಬೆಂಗಳೂರು: ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಿಯಲ್ ಎಸ್ಟೇಟ್ ದೈತ್ಯ ಮಂತ್ರಿ ಡೆವಲಪರ್ಸ್‌ ಕಂಪನಿ ಮತ್ತು ಅದರ ಸ್ಥಾಪಕ ಸದಸ್ಯರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಕಂಪನಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. 

ತಮ್ಮ ವಿರುದ್ಧದ ದೂರನ್ನು ಅನೂರ್ಜಿತಗೊಳಿಸುವಂತೆ ಸುಶೀಲ್ ಪಾಂಡುರಂಗ ಮಂತ್ರಿ, ಪ್ರತೀಕ್ ಸುಶೀಲ್ ಮಂತ್ರಿ ಮತ್ತು ಸ್ನೇಹಲ್ ಸುಶೀಲ್ ಮಂತ್ರಿ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನಂತರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಅರ್ಜಿದಾರರ ಪರವಾಗಿ ತೀರ್ಪು ನೀಡಿದರು. ಅಕ್ಟೋಬರ್ 17ರಂದು ಸಾರ್ವಜನಿಕಗೊಳಿಸಿದ ತೀರ್ಪಿನಲ್ಲಿ, ಒಪ್ಪಂದದ ವಿವಾದಗಳಲ್ಲಿ ನಾಗರಿಕ ಮತ್ತು ಕ್ರಿಮಿನಲ್ ಪ್ರಕರಣಗಳ ನಡುವಿನ ಗಡಿ ಬಗ್ಗೆ ಸ್ಪಷ್ಟಪಡಿಸುತ್ತದೆ.

ಎಫ್‌ಐಆರ್‌ನಲ್ಲಿ, ದೂರುದಾರರು ಯೋಜನೆಯಲ್ಲಿ 69 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ ಮತ್ತು ಮಂತ್ರಿ ಡೆವಲಪರ್ಸ್ ಕಡೆಯಿಂದ ವಿತರಣೆ ವಿಳಂಬವಾಗಿದೆ. ಹೀಗಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 154ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದೆ. 

'ಒಪ್ಪಂದದ ಉಲ್ಲಂಘನೆಗಳು ವಿವಿಧ ಪ್ರಕಾರಗಳಲ್ಲಿ ಅಥವಾ ರೂಪಗಳಲ್ಲಿ ಇರಬಹುದು. ಪ್ರತಿ ಉಲ್ಲಂಘನೆಯನ್ನು ಆರಂಭದಲ್ಲಿ ಸ್ವಯಂಚಾಲಿತವಾಗಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಆದರೆ, ಉಲ್ಲಂಘನೆಯ ಹಿಂದೆ ಮೋಸ ಮಾಡುವ ಉದ್ದೇಶದ ಪುರಾವೆಗಳಿಲ್ಲದ ಹೊರತು, ಐಪಿಸಿ ಸೆಕ್ಷನ್‌ನ 406 ಅಥವಾ 420ರ ಅಡಿಯಲ್ಲಿ ಅಪರಾಧ ಎನ್ನಲಾಗುವುದಿಲ್ಲ. ಈ ಪ್ರಕರಣದಲ್ಲಿ ಅಂತಹ ಯಾವುದೇ ಮೋಸದ ಉದ್ದೇಶ ಕಾಣಿಸುತ್ತಿಲ್ಲ. ಅಲ್ಲದೆ, ಇತರೆ ಆರೋಪಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತರುವುದು ಕೂಡ ಸಮರ್ಥನೀಯವಲ್ಲ' ಎಂದು ನ್ಯಾಯಾಲಯ ಗಮನಿಸಿದೆ.

ಜಾರಿ ನಿರ್ದೇಶನಾಲಯವು ಮೂಲ ಎಫ್‌ಐಆರ್ ಆಧರಿಸಿ ತನಿಖೆಯನ್ನು ಆರಂಭಿಸಿತ್ತು ಮತ್ತು 2022ರಲ್ಲಿ ತಾತ್ಕಾಲಿಕವಾಗಿ 380 ಫ್ಲಾಟ್‌ಗಳನ್ನು ಜಪ್ತಿ ಮಾಡಿತ್ತು. ನಂತರ ತನಿಖಾ ಸಂಸ್ಥೆಯು ದುರುಪಯೋಗ ಮತ್ತು ಇತರ ಯೋಜನೆಗಳಿಗೆ ಹಣವನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪದಡಿ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.  ಆದಾಗ್ಯೂ, ಈ ತೀರ್ಪು ಆ ಕ್ರಿಯೆಗಳ ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಹೈಕೋರ್ಟ್ ತೀರ್ಪಿಗೆ ದೂರುದಾರ ಧನಂಜಯ ಪದ್ಮನಾಭಾಚಾರ್ ಬೇಸರ ವ್ಯಕ್ತಪಡಿಸಿದ್ದಾರೆ. 'ಎಫ್‌ಐಆರ್ 0163/2020 ರ ದೂರುದಾರನಾಗಿ, ನನಗೆ ಹೈಕೋರ್ಟ್‌ನಲ್ಲಿ ನ್ಯಾಯ ಸಿಗಲಿಲ್ಲ ಮತ್ತು ನಾನು ಸದ್ಯ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸುತ್ತಿದ್ದೇನೆ. ನಾನು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ' ಎಂದು ಅವರು ಟಿಎನ್‌ಐಇಗೆ ತಿಳಿಸಿದರು.

ಕಾಂಟ್ರಾಕ್ಟ್‌ಗೆ ಸಂಬಂಧಿಸಿದ ವಿವಾದಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವಿಷಯಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ತೀರ್ಪು ನಿರ್ಣಾಯಕ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಮೋಸದ ಉದ್ದೇಶದ ಕೊರತೆ ಮೇಲೆ ಕೇಂದ್ರೀಕರಿಸಿರುವ ನ್ಯಾಯಾಲಯ, ಕಾನೂನು ಪ್ರಕ್ರಿಯೆಗಳಲ್ಲಿ ನಿರ್ಣಾಯಕ ಅಂಶವಾಗಿ ಯಾವುದೇ ಅಪರಾಧದ ಹಿಂದಿನ 'ಉದ್ದೇಶ'ದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಈ ಪ್ರಕರಣವು ಇದೇ ರೀತಿಯ ಭವಿಷ್ಯದ ವಿವಾದಗಳಲ್ಲಿ ಉಲ್ಲೇಖಿಸಬಹುದಾದ ಒಂದು ಪೂರ್ವನಿದರ್ಶನವಾಗಿದೆ. ಮೂಲಭೂತವಾಗಿ ನಾಗರಿಕರಿಗೆ ಸಂಬಂಧಿಸಿದ ವಿವಾದಗಳಲ್ಲಿ ಕ್ರಿಮಿನಲ್ ಆರೋಪಗಳನ್ನು ದಾಖಲಿಸುವಾಗ ಕಾನೂನು ಸಮುದಾಯವು ಹೆಚ್ಚು ವಿವೇಚನಾಶೀಲವಾಗಿರಬೇಕು ಎಂದು ಒತ್ತಾಯಿಸುತ್ತದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT