ಸಂಗ್ರಹ ಚಿತ್ರ 
ರಾಜ್ಯ

ಎಚ್ಚರ.... ಹೀಗೂ ಆನ್ ಲೈನ್ ವಂಚನೆ ಮಾಡುವವರಿದ್ದಾರೆ!: ವರ್ಕ್ ಫ್ರಂ ಹೋಮ್‌ ಹೆಸರಲ್ಲಿ ಪ್ರೊಫೆಸರ್'ಗೆ ಮಕ್ಮಲ್ ಟೋಪಿ

ಪಾರ್ಟ್ ಟೈಂ ಜಾಬ್ ನೆಪದಲ್ಲಿ ಆನ್ ಲೈನ್ ಖದೀಮರು ಬೆಂಗಳೂರಿನ ಟೆಕಿಗಳನ್ನೇ ವಂಚಿಸಿರುವ ಘಟನೆಗಳು ಬಹಳಷ್ಟು ನಡೆದಿವೆ. ಇದೀಗ ವರ್ಕ್ ಫ್ರಂ ಹೋಮ್‌ ನೆಪದಲ್ಲಿ ಪ್ರೊಫೆಸರ್ ಒಬ್ಬರಿಗೆ 5.2 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ಪಾರ್ಟ್ ಟೈಂ ಜಾಬ್ ನೆಪದಲ್ಲಿ ಆನ್ ಲೈನ್ ಖದೀಮರು ಬೆಂಗಳೂರಿನ ಟೆಕಿಗಳನ್ನೇ ವಂಚಿಸಿರುವ ಘಟನೆಗಳು ಬಹಳಷ್ಟು ನಡೆದಿವೆ. ಇದೀಗ ವರ್ಕ್ ಫ್ರಂ ಹೋಮ್‌ ನೆಪದಲ್ಲಿ ಪ್ರೊಫೆಸರ್ ಒಬ್ಬರಿಗೆ 5.2 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಸರ್ಜಾಪುರ ರಸ್ತೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಅಮಿತ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ವರ್ಕ್​ ಫ್ರಮ್ ಹೋಮ್ ಕುರಿತ ಜಾಹೀರಾತೊಂದು ಅಮಿತ್ ಅವರ ವಾಟ್ಸಾಪ್ ಗೆ ಬಂದಿದೆ. ಜಾಹೀರಾತಿನಲ್ಲಿ ಯೂಟ್ಯೂಬ್ ಚಾನೆಲ್‌ಗಳನ್ನು ಪ್ರಚಾರ ಮಾಡುವ ಹಾಗೂ ಚಂದಾದಾರರಾಗುವ ಮೂಲಕ ದಿನಕ್ಕೆ 5,000 ರಿಂದ 7,000 ರೂಪಾಯಿಗಳ ಆದಾಯ ಗಳಿಸಬಹುದು ಎಂದು ತಿಳಿಸಲಾಗಿದೆ. ಇದರಿಂದ ಆಕರ್ಷಿತರಾದ ಅಮಿತ್ ಅವರು ಕೂಡ ಜಾಹೀರಾತು ನೀಡದ ವಂಚಕರನ್ನು ಸಂಪರ್ಕಿಸಿದ್ದಾರೆ.

ವಂಚಕರು ಇದು ಪ್ರೀಪೇಡ್ ಯೋಜನೆಯಾಗಿದ್ದು, ಟೆಲಿಗ್ರಾಂ ಗ್ರೂಪ್'ಗೆ ಸೇರ್ಪಡೆಗೊಳ್ಳುವಂತೆಯೂ ತಿಳಿಸಿ, ಲಿಂಕ್ ಕಳುಹಿಸಿದ್ದಾರೆ. ನಂತರ ವಾಟ್ಸಾಪ್ ಗ್ರೂಪ್ ನಿಂದ ಅಮಿತ್ ಅವರನ್ನು ತೆಗದುಹಾಕಿದ್ದಾರೆ.

ಈ ಜಾಹೀರಾತಿಗಳಿಗೆ ಆಕರ್ಷಿತರಾಗಿದ್ದ ಅಮಿತ್ ಅವರು, ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡು. ಟೆಲಿಗ್ರಾಮ್ ಗ್ರೂಪ್'ಗೆ ಸೇರ್ಪಡೆಗೊಂಡು, ಆರಂಭಿಕವಾಗಿ ರೂ.1,000ಗಳನ್ನು ಹೂಡಿಕೆ ಮಾಡಿದ್ದಾರೆ. ನಂತರ ರೂ.1,500 ಗಳನ್ನು ಗಳಿಸಿದ್ದಾರೆ.

ಇದರಿಂದ ಮತ್ತಷ್ಟು ಸಂತಸಗೊಂಡಿರುವ ಅಮಿತ್ ಅವರು, 10 ಲಕ್ಷಕ್ಕಿಂತ ಹೆಚ್ಚಿನ ಆದಾಯದ ನಿರೀಕ್ಷೆಯೊಂದಿಗೆ ಒಂದು ತಿಂಗಳ ಬಳಿಕ 5.22 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಹೂಡಿಕೆಯಾಗುತ್ತಿದ್ದಂತೆಯೇ ವಂಚಕರು ಅಮಿತ್ ಅವರನ್ನು ಗ್ರೂಪ್ ನಿಂದ ತೆಗೆದುಹಾಕಿದ್ದಾರೆ. ನಂತರ ಅಮಿತ್ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ತೀವ್ರ ಆಘಾತಕ್ಕೊಳಗಾದ ಅಮಿತ್ ಅವರು ಸೈಬರ್ ಕ್ರೈಮ್ ಪೊಲೀಸರ ಮೊರೆಹೋಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT