ಲುಲು ಮಾಲ್ ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ 
ರಾಜ್ಯ

Physical Abuse in Mall; ಬೆಂಗಳೂರು ಮಾಲ್‌ನಲ್ಲಿ ಯುವತಿಗೆ ಡಿಕ್ಕಿ ಹೊಡೆದು ಅಶ್ಲೀಲವಾಗಿ ವರ್ತಿಸಿದ ವ್ಯಕ್ತಿ; ವಿಡಿಯೋ ವೈರಲ್

ಬೆಂಗಳೂರಿನ ಪ್ರತಿಷ್ಠಿತ ಮಾಲ್ ವೊಂದರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಾಲ್ ವೊಂದರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನ ಲುಲು ಮಾಲ್‌ (Lulu Mall)ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, bengaluruindiablr ಎಂಬ ಇನ್ ಸ್ಟಾಗ್ರಾಮ್ ಖಾತೆದಾರರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಮಾಲ್‌ನಲ್ಲಿ ಯುವತಿಯೊಬ್ಬಳು ನಡೆದು ಬರುವಾಗ ವ್ಯಕ್ತಿಯೊಬ್ಬ ಬೇಕಂತಲೇ ಹಿಂದಿನಿಂದ ಹೋಗಿ ಆಕೆಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಆಕೆಯನ್ನು ಅಶ್ಲೀಲ (sexual abuse)ವಾಗಿ ಮುಟ್ಟಿದ್ದಾನೆ. ಬಳಿಕ ತನಗೇನೂ ತಿಳಿದಿಲ್ಲ ಎಂಬಂತೆ ಆಲ್ಲಿಂದ ಪರಾರಿಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದೆ. 

ನಗರದ ಲುಲು ಮಾಲ್‌ನಲ್ಲಿ ಭಾನುವಾರ ಅಂದರೆ ಅ. 29ರ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಕಾಣುತ್ತಿರುವ ಈ ವ್ಯಕ್ತಿ ಮಾಲ್‌ಗೆ ಬಂದ ಮಹಿಳೆಯರು ಮತ್ತು ಹುಡುಗಿಯರ ಹಿಂದೆ ಓಡಾಡುತ್ತಿದ್ದ. ಮೊದಲಿಗೆ ಅವನು ಜನನಿಬಿಡ ಪ್ರದೇಶದಲ್ಲಿ ಇದ್ದುದನ್ನು ನೋಡಿದ ನಾನು ಅನುಮಾನಗೊಂಡು ವಿಡಿಯೊ ರೆಕಾರ್ಡ್ ಮಾಡುತ್ತಾ ಹಿಂಬಾಲಿಸಿದೆ. ಈ ವೇಳೆ ಹುಡುಗಿಯೊಬ್ಬಳ ಹಿಂಭಾಗ ಮುಟ್ಟುವುದು ಮಾಡುತ್ತಿದ್ದ.

ಕೂಡಲೇ ಈ ಬಗ್ಗೆ ಸೆಕ್ಯುರಿಟಿಗೆ ಹೋಗಿ ದೂರು ನೀಡಿದ್ದು, ಆತನನ್ನು ಹುಡುಕಿಕೊಂಡು ಬಂದಾಗ ತಪ್ಪಿಸಿಕೊಂಡಿದ್ದ. ಸದ್ಯ ಮಾಲ್ ಆಡಳಿತ ಮಂಡಳಿ ಮತ್ತು ಸೆಕ್ಯೂರಿಟಿಗೆ ಮಾಹಿತಿ ನೀಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಆತ ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video