ರಾಜ್ಯ

ಕೆಎಸ್ ಆರ್ ಟಿಸಿ ಸಾರಿಗೆ ಸಿಬ್ಬಂದಿಗೆ ಪರಿಹಾರ ಮೊತ್ತ ಮೂರು ಪಟ್ಟು ಹೆಚ್ಚಳ!

Nagaraja AB

ಬೆಂಗಳೂರು: ಕರ್ತವ್ಯದಲ್ಲಿರುವಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ್ದ ಸಾರಿಗೆ ಸಿಬಂದಿ ಅವಲಂಬಿತರಿಗೆ ಒಂದು ಕೋಟಿ ರೂ. ವಿಮಾ ಪರಿಹಾರ ನೀಡುವ ಕೆಎಸ್ ಆರ್ ಟಿಸಿ ಇದೀಗ ನಿಗಮದ ನೌಕರರಿಗೆ ನೀಡಲಾಗುವ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು ರೂ. 3 ಲಕ್ಷದಿಂದ ರೂ. 10 ಲಕ್ಷಕ್ಕೆ ಹೆಚ್ಚಿಸಿದೆ.

ನವೆಂಬರ್ 1 ರಿಂದಲೇ ಇದು ಅನ್ವಯ ಆಗಲಿದೆ. ಅಪಘಾತ ಹೊರತುಪಡಿಸಿ ಇತರ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್,ಪಾರ್ಶ್ವವಾಯು, ಹೃದಯಘಾತ, ಮೂತ್ರ ಪಿಂಡ ವೈಫಲ್ಯ ಮತ್ತಿತರ ಕಾರಣಗಳಿಂದ ಪ್ರತಿ ರ್ಷ 100 ನೌಕರರು ಮೃತಪಡುತ್ತಿದ್ದಾರೆ. ಇಂತಹ ನೌಕರರ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ನಿಗಮದಿಂದ ಅವರಿಗೆ ನೆರವಾಗಲು  ಈ ಮೊದಲು ನೀಡುತ್ತಿದ್ದ 3 ಲಕ್ಷ ರೂ. ಪರಿಹಾರ ಮೊತ್ತವನ್ನು ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಈ ಯೋಜನೆಗೆ ನೌಕರರು ಮಾಸಿಕ ವಂತಿಕೆಯನ್ನು ಪ್ರಸ್ತುತ ರೂ. 100 ರಿಂದ ರೂ. 200 ಗಳಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ 50 ರೂ.ಗಳ ವಂತಿಕೆಯನ್ನು ರೂ.100ಗಳಿಗೆ ಪರಿಷ್ಕರಿಸಲಾಗಿದೆ. 

SCROLL FOR NEXT