ರಾಜ್ಯ

ವರುಣ ದೇವ ಸಂತುಷ್ಠಗೊಳಿಸಿ ಮಳೆ ಬರಿಸಲು ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಹುಡುಗರಿಗೆ ಮದುವೆ!

Sumana Upadhyaya

ಚಿಕ್ಕಬಳ್ಳಾಪುರ: ಮಳೆ ದೇವರು ವರುಣನನ್ನು ಒಲಿಸಿಕೊಳ್ಳಲು ಹಲವರು ಹಲವು ರೀತಿಯಲ್ಲಿ ಮೊರೆ ಹೋಗುತ್ತಾರೆ.  ಬರದ ನಡುವೆಯೂ ಹಲವು ಬಾರಿ ಮೂಢನಂಬಿಕೆ ವಿಜೃಂಭಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆಯಂತಹ ಆಚರಣೆಗಳು ಸಾಮಾನ್ಯ. 

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮುಂಗಾರು ವಿಫಲವಾದ ಕಾರಣ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೇನಹಳ್ಳಿಯಲ್ಲಿ ಇಬ್ಬರು ಗಂಡುಮಕ್ಕಳಿಗೆ ಮದುವೆ ಮಾಡುವ ವಿಲಕ್ಷಣ ಪದ್ಧತಿಯನ್ನು ಜನರು ಪಾಲಿಸುತ್ತಾರೆ.

ಮೊನ್ನೆ ಗುರುವಾರ ರಾತ್ರಿ ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ವಿಧಿ ವಿಧಾನ ನೆರವೇರಿಸಲಾಯಿತು. ಸಾಮಾನ್ಯ ಮದುವೆಯಂತೆಯೇ ದಂಪತಿ ಎಲ್ಲಾ ಗ್ರಾಮಸ್ಥರಿಂದ ಆಶೀರ್ವಾದ ಪಡೆದರು, ಕೆಲವರಿಂದ ಉಡುಗೊರೆಗಳನ್ನು ಪಡೆದರು.

ನಿನ್ನೆ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಗಳಲ್ಲಿ 30 ನಿಮಿಷಗಳ ಕಾಲ ಮಳೆ ಸುರಿದು ಗ್ರಾಮಸ್ಥರಲ್ಲಿ ನಿರಾಳತೆ ಮೂಡಿಸಿದೆ. ಇಲ್ಲಿನ ನಿವಾಸಿಗಳು ಒಣಹವೆಯಿಂದ ಕಷ್ಟಪಡುತ್ತಿದ್ದು, ಮಾನ್ಸೂನ್ ವಿಫಲವಾದಾಗಲೆಲ್ಲಾ ಹೀಗೆ ಮದುವೆ ಮಾಡಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಪೋಷಕರ ಒಪ್ಪಿಗೆ ಪಡೆದು ಇಬ್ಬರು ಹುಡುಗರನ್ನು ಗುರುತಿಸಿ ಮದುವೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

SCROLL FOR NEXT