ರಾಜ್ಯ

ಬೆಂಗಳೂರು: ವಿಜ್ಞಾನಿ ಕಾರು ಚೇಸ್ ಮಾಡಿ, ದರೋಡೆಗೆ ಯತ್ನ ಪ್ರಕರಣ; ಮೂವರ ಬಂಧನ

Shilpa D

ಬೆಂಗಳೂರು: 34 ವರ್ಷದ ವಿಜ್ಞಾನಿಯ ಕಾರನ್ನು ದರೋಡೆ ಮಾಡಲು ಬೈಕ್‌ಗಳಲ್ಲಿ ಹಿಂಬಾಲಿಸಿ ಗಾಜಿಗೆ ಹಾನಿ ಮಾಡಿದ್ದ ಐವರ ತಂಡದ ಮೂವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 24 ರಂದು ನಗರದ ಹೊರವಲಯದ ರಾವುತನಹಳ್ಳಿ ಬಳಿ ಘಟನೆ ನಡೆದಿದ್ದು, ದಾಸನಪುರದ ಸೆಂಟರ್ ಫಾರ್ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್‌ನ ಡಾ.ಅಶುತೋಷ್ ಕುಮಾರ್ ಸಿಂಗ್ ಅವರನ್ನು ದರೋಡೆಗೆ ಗ್ಯಾಂಗ್ ಯತ್ನಿಸಿತ್ತು.

ಸೋಮವಾರ ರಾತ್ರಿ ರಾವುತನಹಳ್ಳಿ ಬಳಿ ದರೋಡೆಗೆ ಯೋಜಿಸುತ್ತಿದ್ದಾಗ ಆರೋಪಿಗಳಾದ ಮೈಲಾರಿ (22), ನವೀನ್ (22) ಮತ್ತು ಶಿವರಾಜ್ (30) ಅವರನ್ನು ಬಂಧಿಸಲಾಗಿದೆ. ಶಸ್ತ್ರಾಸ್ತ್ರ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸೋಮ ಅಲಿಯಾಸ್ ಸೋನು ಮತ್ತು ಕೀರ್ತಿ ಅಲಿಯಾಸ್ ಉಮೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆಗಸ್ಟ್ 24 ರಂದು, ಸೈಂಟಿಸ್ಟ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಐವರ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರು. ಅವರು ನಿಲ್ಲಿಸದಿದ್ದಾಗ ಬೈಕ್‌ಗಳಲ್ಲಿ ಕಾರನ್ನು ಹಿಂಬಾಲಿಸಿ ಗಾಜು ಒಡೆದು ಹಾಕಿದ್ದಾರೆ. ದೂರು ದಾಖಲಿಸುವ ಮೊದಲು, ಸಿಂಗ್ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು ಮತ್ತು ತಮ್ಮ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು.

SCROLL FOR NEXT