ಸಾಂದರ್ಭಿಕ ಚಿತ್ರ 
ರಾಜ್ಯ

ಸೆಪ್ಟೆಂಬರ್‌ 26 ಮಂಗಳವಾರ ಬೆಂಗಳೂರು ಬಂದ್ ನಿಶ್ಚಿತ, ರಾಮನಗರವೂ ಬಂದ್: ಕುರುಬೂರು ಶಾಂತಕುಮಾರ್‌

ರಾಜ್ಯದಲ್ಲಿ ಕಾವೇರಿ ನದಿ ನೀರಿನ ಕಿಚ್ಚು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಂಡ್ಯ, ರಾಮನಗರ ಮತ್ತು ಬೆಂಗಳೂರಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. 

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ನದಿ ನೀರಿನ ಕಿಚ್ಚು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಂಡ್ಯ, ರಾಮನಗರ ಮತ್ತು ಬೆಂಗಳೂರಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. 

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಸೆಪ್ಟೆಂಬರ್​ 26ರಂದು ಮಂಗಳವಾರ ಬೆಂಗಳೂರು ಬಂದ್​ಗೆ ಕರೆ ನೀಡಿರುವುದು ಬಂದ್ ನಡೆಯುವುದು ನಿಶ್ಚಿತ. 150ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್​ಗೆ ಬೆಂಬಲ ಸೂಚಿಸಿವೆ.ಮಂಗಳವಾರ ಬಂದ್‌ಗೆ ಸಾಕಷ್ಟು ಸಂಘ ಸಂಸ್ಥೆಗಳು ಬೆಂಬಲ ಕೊಟ್ಟಿವೆ ಎಂದು ಹೋರಾಟಗಾರರ ಸಭೆಯಲ್ಲಿ ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ. 

ತಮಿಳುನಾಡಿಗೆ ಕಾವೇರಿ ನದಿ ನೀರನ್ನು  ಹರಿಸುವುದನ್ನು ಖಂಡಿಸಿ ಸೆಪ್ಟೆಂಬರ್ 26 ಕ್ಕೆ ಬೆಂಗಳೂರು ನಗರ ಬಂದ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕರೆ ನೀಡಿದ್ದಾರೆ. ಎಲ್ಲ ಸಂಘ ಸಂಸ್ಥೆಗಳ ನಿರ್ಧಾರದ ಮೇರೆಗೆ ಘೋಷಣೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಬಂದ್ ಮಾಡುವ ಮೂಲಕ ಬಂದ್ ಗೆ ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.

ಬೆಂಗಳೂರು ಬಂದ್‌ಗೆ ತಮ್ಮ ಸಂಘಟನೆಯ ನೈತಿಕ ಬೆಂಬಲ ಇದೆ ಎಂದು ಬೆಂಗಳೂರಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

ರಾಮನಗರವೂ ಬಂದ್: ಕಾವೇರಿ ನದಿ ನೀರನ್ನು ನಂಬಿಕೊಂಡಿರುವ ಮೈಸೂರು-ಮದ್ದೂರು ಭಾಗದ ಜೊತೆಗೆ ರಾಮನಗರ ಜಿಲ್ಲೆಯಲ್ಲಿಯೂ ಸಹ ಸೆಪ್ಟೆಂಬರ್ 26ರಂದು ಬಂದ್ ಘೋಷಿಸಲಾಗಿದೆ.

ಅಂದು ಏನಿರಲ್ಲ?: ಹೋಟೆಲ್​ಗಳು, ಆಟೋಗಳು ಸಿಗಲ್ಲ, ಟ್ಯಾಕ್ಸಿ ಓಡಾಡಲ್ಲ, ಓಲಾ, ಉಬರ್​ ಸಿಗಲ್ಲ, ಬೀದಿಬದಿ ವ್ಯಾಪಾರ, ಪೆಟ್ರೋಲ್​ ಬಂಕ್​​, ಶಾಲಾ, ಕಾಲೇಜು, ಬಿಬಿಎಂಪಿ ನೌಕರರು, ಬಿಎಂಟಿಸಿ ಬಸ್​​​ ಸಂಶಯ. ಕೈಗಾರಿಕೆಗಳು, ವಾಣಿಜ್ಯೋದ್ಯಮ, ಚಿಕ್ಕಪೇಟೆ ಅಂಗಡಿಗಳು, ಕೆಎಸ್ ಆರ್ ಟಿಸಿ ಬಸ್​​, ಮಾರ್ಕೆಟ್​​ಗಳು ಬಂದ್ ಆಗಿರಲಿವೆ. 

ಏನಿರುತ್ತೆ..?: ಅಗತ್ಯ ವಸ್ತುಗಳಾದ ಔಷಧ, ಆಸ್ಪತ್ರೆ, ಹಾಲು, ಪೇಪರ್​ ತೆರೆದಿರುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ

3ನೇ ಟಿ20: Team India ಮಾರಕ ಬೌಲಿಂಗ್ ದಾಳಿ; 117 ರನ್‌ಗಳಿಗೆ ದಕ್ಷಿಣ ಆಫ್ರಿಕಾ ಸರ್ಪಪತನ!

ಬಿಜೆಪಿಗೆ ಬಿಹಾರದ ಸಚಿವ ಹೊಸ ರಾಷ್ಟ್ರೀಯ ಕಾರ್ಯಾಧ್ಯಕ್ಷ; ಇವರೇನಾ ಮುಂದಿನ ರಾಷ್ಟ್ರಾಧ್ಯಕ್ಷ?

"Vote chori" ವಿರುದ್ಧ ಪ್ರತಿಭಟನೆ: ಸತ್ಯವನ್ನು ಎತ್ತಿ ಹಿಡಿದು ಮೋದಿ, ಶಾ, RSS ಸರ್ಕಾರವನ್ನ ದೇಶದಿಂದ ಕಿತ್ತೂಗೆಯುತ್ತೇವೆ: ರಾಹುಲ್‌

ಚಾಕೊಲೇಟ್ ನೀಡುವ ಆಮಿಷವೊಡ್ಡಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಮುರ್ಮು!

SCROLL FOR NEXT