ಬೆಂಗಳೂರು: ಕಾವೇರಿ ಎಂದೆಂದಿಗೂ ನಮ್ಮದು, ತಮ್ಮ ವೈಯಕ್ತಿಕ ಸ್ನೇಹವನ್ನು ಕಾಪಾಡಿಕೊಳ್ಳಲು, ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ರಾಜಕೀಯ ಮಿತ್ರರನ್ನು ಮೆಚ್ಚಿಸಲು, I.N.D.I. ಮೈತ್ರಿಕೂಟದ ಪಾಲುದಾರ ಸ್ಟಾಲಿನ್‌ರನ್ನು ಓಲೈಸಲು ಜನರು ನೀಡಿದ ಅಧಿಕಾರವನ್ನು ಬಳಸಬೇಡಿ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ, ಸರ್ಕಾರ ಅವರ ಭಾವನೆಗಳನ್ನು ಆಲಿಸುವುದು ಬಿಟ್ಟು ಪೊಲೀಸ್ ಬಲದ ಮೂಲಕ ಹತ್ತಿಕ್ಕುತ್ತಿರುವುದು ಖಂಡನೀಯ ಎಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..!
ಕಾಂಗ್ರೆಸ್ ಬಂತು ಕಾವೇರಿ ಹೋಯ್ತು..! ಕಾಂಗ್ರೆಸ್ ಬಂತು ಅಭಿವೃದ್ಧಿ ಹೋಯ್ತು..!
ಕಾಂಗ್ರೆಸ್ ಬಂತು ಆರ್ಥಿಕತೆ ಹೋಯ್ತು..! ಕಾಂಗ್ರೆಸ್ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!
ಕಾಂಗ್ರೆಸ್ ಬಂತು ಮಹದಾಯಿ ಹೋಯ್ತು..! ಕಾಂಗ್ರೆಸ್ ಬಂತು ಭದ್ರಾ ಮೇಲ್ದಂಡೆ ಹೋಯ್ತು..!
ಕಾಂಗ್ರೆಸ್ ಬಂತು ಅನ್ನಭಾಗ್ಯ ಹೋಯ್ತು..! ಕಾಂಗ್ರೆಸ್ ಬಂತು ಕಿಸಾನ್ ಸಮ್ಮಾನ್ ಹೋಯ್ತು..!
ಕಾಂಗ್ರೆಸ್ ಬಂತು ರೈತ ಮಕ್ಕಳ ವಿದ್ಯಾನಿಧಿ ಹೋಯ್ತು..! ಕಾಂಗ್ರೆಸ್ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ..! ಎಂದು ಬಿಜೆಪಿ ಲೇವಡಿ ಮಾಡಿದೆ.