ರಾಜ್ಯ

ರೈಲ್ವೇ ಇಲಾಖೆಯ ಗಮನ ಸೆಳೆದ ಮಂಗಳೂರು ಬಿಬಿಎ ವಿದ್ಯಾರ್ಥಿಯ ಛಾಯಾಚಿತ್ರಗಳು!

Shilpa D

ಮಂಗಳೂರು: ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಮೂರನೇ ವರ್ಷದ ಬಿಬಿಎ ವಿದ್ಯಾರ್ಥಿ ರೋನಕ್ ಡಿಸಾ ಅವರು ದೇಶದ ರಮಣೀಯ ಸ್ಥಳಗಳಲ್ಲಿ ತೆಗೆದ ರೈಲುಗಳ ಆಕರ್ಷಕ ಚಿತ್ರಗಳ ಮೂಲಕ ರೈಲ್ವೆ ಸಚಿವಾಲಯದ ಗಮನ ಸೆಳೆದಿದ್ದಾರೆ.

ರೋನಕ್ ತನ್ನ ಬಾಲ್ಯದ ದಿನಗಳಿಂದ ತನ್ನ ಅಜ್ಜನ ಜೊತೆ  ರೈಲು ಪ್ರಯಾಣ ಮಾಡುತ್ತಿದ್ಗಾಗಿನಿಂದಲೂ ರೈಲುಗಳತ್ತ ಆಕರ್ಷಿತರಾಗಿದ್ದರು. ಪ್ರಥಮ ಪಿಯುಸಿಯಲ್ಲಿದ್ದಾಗ ಸ್ಟಿಲ್ ಕ್ಯಾಮರಾ ಸಿಕ್ಕಿದ ಮೇಲೆ ಅವರ ಒಲವು ಉತ್ಸಾಹಕ್ಕೆ ತಿರುಗಿತು. ಅಂದಿನಿಂದ, ಕಾಡುಗಳು, ಜಲಪಾತಗಳು, ಮೋಡ, ಪರ್ವತ, ಸುರಂಗಗಳು, ಸೇತುವೆಗಳು ಮತ್ತು ಹಾದುಹೋಗುವ ರೈಲುಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಆರಂಭಿಸಿದರು. ಅವರು ದೇಶದ ರಮಣೀಯ ಸ್ಥಳಗಳಿಗೆ ಪ್ರಯಾಣಿಸಲು ಬಿಡುವಿನ ಸಮಯವನ್ನು ಬಳಸಿಕೊಳ್ಳುತ್ತಾರೆ.

ಕಳೆದ ನಾಲ್ಕು ವರ್ಷಗಳಲ್ಲಿ, ಅವರು ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ನೂರಾರು ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ,  ಸ್ಥಳೀಯ ಪರಂಪರೆ, ಸಂಸ್ಕೃತಿ, ಪಾಕಪದ್ಧತಿ ಜನ ಸಮುದಾಯದ ಕುರಿತು ತೆಗೆದ ಫೋಟೋಗಳಾಗಿವೆ.

ಕರ್ನಾಟಕದ ಪಶ್ಚಿಮ ಘಟ್ಟಗಳು, ತಮಿಳುನಾಡು, ಕೇರಳ, ಇಂಡೋ-ಪಾಕ್ ಗಡಿಯಲ್ಲಿರುವ ಜೈಸಲ್ಮೇರ್, ಪೋಕರನ್ ಮತ್ತು ಬಿಕಾನೇರ್‌ನ ಥಾರ್ ಮರುಭೂಮಿಯಲ್ಲಿ ಕೆಲವು ಅತ್ಯುತ್ತಮ ರೈಲು ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಅವರು ತಮ್ಮ ಚಿತ್ರಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆ 'railboyron' ನಲ್ಲಿ ಪೋಸ್ಟ್ ಮಾಡುತ್ತಾರೆ.

ಈ ಚಿತ್ರಗಳು ರೈಲ್ವೆ ಸಚಿವಾಲಯದ ಗಮನ ಸೆಳೆದಿದ್ದು, ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರಿಗಳು  ಅವರನ್ನು ಸಂಪರ್ಕಿಸಿದ್ದಾರೆ. ಅದರ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫೋಟೋಗಳನ್ನು ಶೇರ್ ಮಾಡಲಾಗಿದೆ.

ರೈಲ್ವೆ ಸಚಿವಾಲಯ ಇದುವರೆಗೆ ನನ್ನ 12-15 ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಹಾಲಿ ಮತ್ತು ಮಾಜಿ ರೈಲ್ವೇ ಸಚಿವರು ಕೂಡ ನನ್ನ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ  ಹಂಚಿಕೊಂಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ರೈಲ್ವೇ ನಿಯತಕಾಲಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನನ್ನ ಫೋಟೋಗಳು ಕಾಣಿಸಿಕೊಂಡವು. ಅಲ್ಲದೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಇದನ್ನು ಬಳಸಿಕೊಂಡಿವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರೋನಕ್.

ನಾಗರಕೋಯಿಲ್-ಗಾಂಧಿಧಾಮ ಎಕ್ಸ್‌ಪ್ರೆಸ್ ರೈಲು ಹೊನ್ನಾವರ ಮೂಲಕ ಹಾದು ಹೋಗುತ್ತಿರುವ ರೋನಕ್ ಅವರ ಚಿತ್ರವನ್ನು ನೈಋತ್ಯ ರೈಲ್ವೆಯು 'X' ನಲ್ಲಿ ಪೋಸ್ಟ್ ಮಾಡಿದೆ.

ಅವರ ಸೇವೆಯನ್ನು ಗುರುತಿಸಿ, ವಿಐಪಿ ಪಾಸ್‌ನೊಂದಿಗೆ ಧಾರವಾಡ-ಬೆಂಗಳೂರು ಮತ್ತು ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಫ್ಲ್ಯಾಗ್‌ಆಫ್‌ ಕಾರ್ಯಕ್ರಮಕ್ಕೆ ಅವರನ್ನು ರೈಲ್ವೆ ಇಲಾಖೆ ಆಹ್ವಾನಿಸಿತು. ಚಿತ್ರಣಗಳು ಮತ್ತು ಫೋಟೋಶಾಪ್‌ನಲ್ಲಿಯೂ ಆಸಕ್ತಿ ಹೊಂದಿರುವ ರೋನಕ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಶೈಲಿಯು ತನ್ನ ವಿನ್ಯಾಸಗಳಿಂದ ಪ್ರೇರಿತವಾಗಿದೆ ಎಂದು ಭಾವಿಸಿದ್ದಾರೆ.

ನಾನು ರೈಲ್ವೆಗೆ 30-35 ವಿನ್ಯಾಸಗಳನ್ನು ಕಳುಹಿಸಿದ್ದೇನೆ. ನನ್ನ ಆಲೋಚನೆಗಳನ್ನು ಪರಿಗಣಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ಒಂದಿಷ್ಟು ಮನ್ನಣೆ ಪಡೆಯಲು ರೈಲ್ವೇ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದೇನೆ' ಎಂದು ಹೇಳಿದರು.

SCROLL FOR NEXT