ವಿದ್ಯುತ್ ದರ (ಸಾಂಕೇತಿಕ ಚಿತ್ರ) TNIE
ರಾಜ್ಯ

ರಾಜ್ಯದಲ್ಲಿ ವಿದ್ಯುತ್​ ದರ ಇಳಿಕೆ: ಪ್ರತಿ ಯುನಿಟ್​ಗೆ 1.10 ರೂ. ಕಡಿತ; ಇಂದಿನಿಂದಲೇ ಜಾರಿ

ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗ(KERC)ಎಲ್ಲ ವರ್ಗದ ವಿದ್ಯುತ್​ ಬಳಕೆದಾರರಿಗೆ ಗುಡ್​ ನ್ಯೂಸ್​ ನೀಡಿದೆ.

ಬೆಂಗಳೂರು: ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗ(KERC)ಎಲ್ಲ ವರ್ಗದ ವಿದ್ಯುತ್​ ಬಳಕೆದಾರರಿಗೆ ಗುಡ್​ ನ್ಯೂಸ್​ ನೀಡಿದೆ.

ಕೆಇಆರ್ ಸಿ ವಿದ್ಯುತ್​ ದರ ಇಳಿಕೆ ಮಾಡಿ ಸೋಮವಾರ ಆದೇಶ ಹೊರಡಿಸಿದ್ದು, 100 ಯುನಿಟ್​ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ ಮಾಡಲಾಗಿದೆ.

ಗೃಹ ಬಳಕೆಯಲ್ಲಿ 100 ಯುನಿಟ್​​ಗಿಂತ ಹೆಚ್ಚು ವಿದ್ಯುತ್​​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ ಮಾಡಲಾಗಿದೆ. ಈ ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ.

2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಇಂದಿನಿಂದಲೇ(ಏಪ್ರಿಲ್​ 01) ಜಾರಿಗೆ ಬರಲಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್​ ದರ ನಿಗದಿ ಮಾಡಿದೆ.

ಮೊದಲು 100ಕ್ಕಿಂತ ಹೆಚ್ಚು ಯುನಿಟ್​ ವಿದ್ಯುತ್​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​​ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ 7 ರೂ. ಬದಲಿಗೆ ಪ್ರತಿ ಯುನಿಟ್​ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗಿದೆ. ಇನ್ನು 100 ಯುನಿಟ್​ಗಿಂತ ಕಡಿಮೆ ವಿದ್ಯುತ್​ ಬಳಕೆ ಮಾಡುವವರು ಈಗಾಗಲೆ ಪ್ರತಿ ಯುನಿಟ್​ಗೆ 4.75 ರೂ. ಪಾವತಿಸುತ್ತಿದ್ದಾರೆ.

ಇನ್ನು ರಾಜ್ಯ ಸರ್ಕಾರ 200 ಯುನಿಟ್​ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​ ನೀಡುವುದರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ SIR ಪ್ರಯೋಗ: ಮೊದಲ ಹಂತದಲ್ಲಿ ಬಂಗಾಳ, ಕೇರಳ, ಟಿಎನ್: ನಾಳೆ ಕೇಂದ್ರ ಚುನಾವಣಾ ಆಯೋಗದ ಮಹತ್ವದ ಸುದ್ದಿಗೋಷ್ಠಿ

ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಹಾಲಿ, ಮಾಜಿ ಶಾಸಕರು ಸೇರಿ 16 ಮಂದಿಯನ್ನು ಉಚ್ಛಾಟಿಸಿದ JDU

Ranji Trophy: ಹೊರಬಿದ್ದ ಬಳಿಕ ಕರುಣ್ ನಾಯರ್ ಅಬ್ಬರದ ಶತಕ, ಮತ್ತೆ ಟೀಂ ಇಂಡಿಯಾ ರೇಸ್ ನಲ್ಲಿ ಕನ್ನಡಿಗ!

ಸರ್ಕಾರದ ನೀತಿಯೋ ಅಥವಾ ಸೇನೆಯ ಭಯವೋ? ಕಂಕೇರ್‌ನಲ್ಲಿ 13 ಮಹಿಳೆಯರು ಸೇರಿ 21 ಮಾವೋವಾದಿಗಳು ಶರಣು!

ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಪಂಚಾಯಿತಿ ಪ್ರತಿನಿಧಿಗಳಿಗೆ ಭತ್ಯೆ ಹೆಚ್ಚಳ, ಪಿಂಚಣಿ, ವಿಮೆ ಸೌಲಭ್ಯ: ತೇಜಸ್ವಿ ಯಾದವ್

SCROLL FOR NEXT