ಓಯೋ ರೂಮ್
ಓಯೋ ರೂಮ್ online desk
ರಾಜ್ಯ

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು OYO Room ಮೊರೆ ಹೋದ ವ್ಯಕ್ತಿ!: ಸಂಸ್ಥೆಯ ಪ್ರತಿಕ್ರಿಯೆ ಹೀಗಿದೆ...

Srinivas Rao BV

ಬೆಂಗಳೂರು: ಭಾರತದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಗರದಲ್ಲಿ ವಾಸಿಸುತ್ತಿರುವ ವ್ಯಕ್ತಿಯೋರ್ವ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ OYO Room ಮೊರೆ ಹೋಗಿದ್ದಾರೆ.

ರಿಷಭ್ ಶ್ರೀವಾಸ್ತವ ಬೆಂಗಳೂರಿನ ಪರಿಸ್ಥಿತಿಯನ್ನು ಚಿಲ್ ನಿಂದ ಗ್ರಿಲ್ ಗೆ ಬದಲಾಗಿರುವುದನ್ನು ಹೋಲಿಕೆ ಮಾಡಿದ್ದಾರೆ. ನಗರದಲ್ಲಿ ಬಿಸಿಲಿನ ತಾಪಮಾನದಿಂದ ಹೊರಬರಲು ರಿಷಭ್ ಶ್ರೀವಾಸ್ತವ OYO Room ಗೆ ತೆರಳಿದ್ದಾರೆ. ಹವಾನಿಯಂತ್ರಿತ ವ್ಯವಸ್ಥೆ ಇಲ್ಲದೇ ನಗರದಲ್ಲಿ ಜೀವಿಸುವುದು ಅಸಾಧ್ಯವಾಗುತ್ತಿದೆ ಆದ್ದರಿಂದ OYO Room ಗೆ ಬಂದಿರುವುದಾಗಿ ರಿಷಭ್ ಶ್ರೀವಾಸ್ತವ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ರಿಷಭ್ ಶ್ರೀವಾಸ್ತವ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ OYO Rooms ಅಧಿಕೃತ ಖಾತೆ, ಬೆಂಗಳೂರಿಗೆ ಸ್ವಾಭಾವಿಕ ಹವಾನಿಯಂತ್ರಿತ ನಗರ ಎಂಬ ಹೆಸರಿತ್ತು, ಸ್ವಾಭಾವಿಕವಾಗಿ ವಾತಾವರಣವನ್ನು ತಂಪಾಗಿಡುವ ಕೆಲಸವಾಗುತ್ತಿತ್ತು. ಆದರೆ ಈಗ ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಲಘುಧಾಟಿಯಲ್ಲಿ ನಗರದ ವಾತಾವರಣ ಬದಲಾವಣೆಯ ಬಗ್ಗೆ ಹೇಳಿದೆ.

OYO ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ರಿತೇಶ್ ಅಗರ್ವಾಲ್ ಕೂಡ ಕಂಪನಿಯ ಅಧಿಕೃತ ಖಾತೆಯ ನಿಲುವನ್ನು ಬೆಂಬಲಿಸಿದ್ದಾರೆ ಮತ್ತು ಪೋಸ್ಟ್ ನ್ನು ಮರುಹಂಚಿಕೊಂಡಿದ್ದಾರೆ.

SCROLL FOR NEXT