ರಾಜ್ಯ

ರಾಜ್ಯದಲ್ಲಿ 6 ಕಾಲರಾ ರೋಗ ಪ್ರಕರಣ ಪತ್ತೆ: ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್​ ಮಾಹಿತಿ; ಮಾರ್ಗಸೂಚಿ ಪ್ರಕಟ

ಏಪ್ರಿಲ್ ತಿಂಗಳು ಕಾಲಿಡುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ ಕಂಗೆಟ್ಟು ಹೋಗಿದ್ದಾರೆ. ಬೆಂಗಳೂರು ಸಹ ಇದಕ್ಕೆ ಹೊರತಾಗಿಲ್ಲ, ಬಿಸಿಲಿನ ಜೊತೆಗೆ ಶಂಕಿತ ಕಾಲರಾ (Cholera) ಕಾಲಿಡುತ್ತಿದೆ. ಬಿಸಿಗಾಳಿ ಹಿನ್ನೆಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಬೆಂಗಳೂರು: ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದಲ್ಲಿ ಒಟ್ಟು ಆರು ಕಾಲರಾ ರೋಗ ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.

ಏಪ್ರಿಲ್ ತಿಂಗಳು ಕಾಲಿಡುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ ಕಂಗೆಟ್ಟು ಹೋಗಿದ್ದಾರೆ. ಬೆಂಗಳೂರು ಸಹ ಇದಕ್ಕೆ ಹೊರತಾಗಿಲ್ಲ, ಬಿಸಿಲಿನ ಜೊತೆಗೆ ಶಂಕಿತ ಕಾಲರಾ (Cholera) ಕಾಲಿಡುತ್ತಿದೆ. ಬಿಸಿಗಾಳಿ ಹಿನ್ನೆಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಸಿಲಿನ ತಾಪ, ಬಿಸಿಗಾಳಿ, ಕಾಲರಾ ಬಗ್ಗೆ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದ್ದು, ಸಾಂಕ್ರಾಮಿಕ ರೋಗಿಗಳ ಅಂಕಿಅಂಶ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇಬ್ಬರು ಸಾವು: ಕಲಬುರಗಿ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದು, ಬಿಸಿಲಿನ ತಾಪದಿಂದ ಮೃತಪಟ್ಟಿಲ್ಲ ಎಂಬ ಮಾಹಿತಿ ಬಂದಿದೆ. ಇತರೆ ರೋಗಗಳಿಂದ ಬಳಲುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಬಿಸಿಲಿ ತಾಪವೂ ಇದಕ್ಕೆ ಕಾರಣವೇ ಎಂಬ ಬಗ್ಗೆ ಪರೀಕ್ಷೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಬಿಸಿಲಿನ ತಾಪ ಸಂಬಂಧ 341, ಹೀಟ್​ ಕ್ರಾಂಪ್​ನಿಂದ ಈವರೆಗೂ 212, ಹೀಟ್ ಎಕ್ಸ್ ಹಾಷನ್ 58 ಪ್ರಕರಣಗಳು ವರದಿ ಆಗಿದೆ. ಒಟ್ಟು 521 ರಾಜ್ಯದಲ್ಲಿ ಪತ್ತೆಯಾಗಿವೆ. ಬಿಸಿಲಿನ ತಾಪದಿಂದ ಯಾವುದೇ ಸಾವು ಸಂಭವಿಸಿಲ್ಲ. ಬೇಕಾಗಿರುವ ಔಷಧಿಗಳನ್ನು ಸಂಗ್ರಹಿಸಿಡಲು ತಿಳಿಸಿದ್ದೇವೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೇವಲ ವಾಂತಿ‌-ಭೇದಿಯನ್ನು‌ ಕಾಲರಾ ಎಂದು ತಿಳಿಯಲು ಸಾಧ್ಯವಿಲ್ಲ. ಶುದ್ದ ನೀರಿನ ಕೊರತೆಯಿಂದಾಗಿ ಕಾಲರಾ ಬರುತ್ತಿದೆ. ಕಳಪೆ ಗುಣಮಟ್ಟದ ಆಹಾರ ಮತ್ತು ನೀರು ಕುಡಿಯುವುದರಿಂದ ಕಾಲರಾ ಬರುವ ಸಾಧ್ಯತೆ ಇದೆ. ಎಂದರು,

ಕಾಲರಾದ ಬಗ್ಗೆ ಸುಳ್ಳು ಮಾಹಿತಿಗಳು‌ ಹರಿದಾಡುತ್ತಿದೆ. ಶೇಕಡಾ 50ರಷ್ಟು ಕಾಲರಾ ಏರಿಕೆ ಆಗಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಬೆಂಗಳೂರು ನಗರದಲ್ಲಿ ಮೂರು ತಿಂಗಳುಗಳಲ್ಲಿ 2 ಪ್ರಕರಣ, ರಾಮನಗರ ಜಿಲ್ಲೆಗಳಲ್ಲಿ 1, ಒಟ್ಟು 6 ಪ್ರಕರಣಗಳು ವರದಿಯಾಗಿದೆ. ಕಾಲರಾ ನಿಯಂತ್ರಣ ಮೀರಿ ಹೋಗಿಲ್ಲ. ಎಲ್ಲೂ‌ ಕೂಡ ಒಂದೇ ಪ್ರದೇಶದಲ್ಲಿ ಹೆಚ್ಚು ಕೇಸ್ ಪ್ರಕರಣಗಳು ಬಂದಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ‌ ಮಾತ್ರ ಕಾಲರಾ ಪ್ರಕರಣ ವರದಿಯಾಗಿದೆ ಎಂದರು.

ಆ ವ್ಯಕ್ತಿಗೆ ಕಾಲರಾ ಪತ್ತೆಯಾಗಿಲ್ಲ: ಮಲ್ಲೇಶ್ವರಂ ನಿವಾಸಿಗೆ ಕಾಲರಾ ಪತ್ತೆ‌ ವಿಚಾರವಾಗಿ ಮಾತನಾಡಿದ್ದು, ಆ ವ್ಯಕ್ತಿಗೆ ಕಲಾರಾ ಪತ್ತೆಯಾಗಿಲ್ಲ. ಚಿಕಿತ್ಸೆ ಸ್ಪಂದಿಸಿ ಗುಣಮುಖರಾಗಿ ತಮ್ಮ ಊರು ಸಿರಾಗೆ ತೆರಳಿದ್ದಾರೆ. ಹೀಗಾಗಿ ಯಾವುದೇ ಕಾರಣ ಪ್ರಕರಣಗಳು ಪತ್ತೆಯಾಗಿಲ್ಲ. ಇನ್ನೂ ಪಿಜಿಯಲ್ಲಿ 32 ಮಹಿಳೆಯರು ವಾಸವಿದ್ದು, ಯಾರಿಗೂ ಇಂತಹ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಲರಾಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ

  • ಕೈ ಶುದ್ದವಾಗಿರಬೇಕು

  • ಕೈ ಸ್ವಚ್ಚಗೊಳಿಸಿ ಆಹಾರ ಸೇವಿಸಬೇಕು

  • ಶುದ್ದ ಕುಡಿಯುವ ನೀರು ಬಳಸಬೇಕು

  • ಚರಂಡಿ ನೀರು ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು

  • ಹೊರಗಿನ ಬೀದಿ ಬದಿ ಆಹಾರ ಸೇವಿಸುವುದರಿಂದ ದೂರವುಳಿಯಿರಿ

ರಾಜ್ಯದಲ್ಲಿ ದೃಢವಾದ ಕಾಲರಾ ಪ್ರಕರಣಗಳು

2019- 02

2020- 40

2021- 20

2022- 42

2023- 108

2024- 06

2024 ರಲ್ಲಿ ದೃಢಪಟ್ಟ ಕಾಲರಾ ಪ್ರಕರಣಗಳು

ಮಾರ್ಚ ತಿಂಗಳಲ್ಲಿ ಬೆಂಗಳೂರು ನಗರ – 02

ಬಿಬಿಎಂಪಿ ವ್ಯಾಪ್ತಿ – 03

ರಾಮನಗರ – 01

ಒಟ್ಟು – 06

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ, ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಉಪ್ಪಾರ ಸಮುದಾಯ STಗೆ ಸೇರ್ಪಡೆ: ಶೀಘ್ರದಲ್ಲೇ ಕೇಂದ್ರಕ್ಕೆ ಶಿಫಾರಸು - ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

SCROLL FOR NEXT