ಅತ್ಯಾಚಾರ ಮಾಡಿ ಕೊಲೆ 
ರಾಜ್ಯ

Rape And Murder: ಯುವತಿ ಶವ ಪತ್ತೆ ಪ್ರಕರಣಕ್ಕೆ ತಿರುವು: ಆಟೋ ಚಾರ್ಜ್ ವಿಚಾರಕ್ಕೆ ಗಲಾಟೆ; ಅತ್ಯಾಚಾರ ಮಾಡಿ ಕೊಲೆಗೈದ ಚಾಲಕ!

ಕಳೆದ ಮೂರು ದಿನಗಳ ಹಿಂದೆ ಸಂಪಂಗಿರಾಮ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರ ಸಮೀಪ ದೊರೆತಿದ್ದ ಅಪರಿಚಿತ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಆಕೆಯನ್ನು ಆಟೋ ಚಾಲಕನೋರ್ವ ಅತ್ಯಾಚಾರ ಮಾಡಿ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ.

ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಸಂಪಂಗಿರಾಮ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರ ಸಮೀಪ ದೊರೆತಿದ್ದ ಅಪರಿಚಿತ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಆಕೆಯನ್ನು ಆಟೋ ಚಾಲಕನೋರ್ವ ಅತ್ಯಾಚಾರ ಮಾಡಿ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ.

ಯುವತಿ ಪತ್ತೆ ಪ್ರಕರಣವನ್ನು ಭೇಧಿಸಿದ ಪೊಲೀಸರು ಇದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಪತ್ತೆ ಮಾಡಿದ್ದಾರೆ. ಆಟೋ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿ ಜೊತೆ ಕಿರಿಕ್ ಮಾಡಿಕೊಂಡಿದ್ದ ಆಟೋ ಚಾಲಕ ಬಳಿಕ ಆಕೆಯನ್ನು ಅಪಹರಣ ಮಾಡಿ ನಿರ್ಮಾಣ ಹಂತದ ಕಟ್ಟಡದಲ್ಲಿ ಅತ್ಯಾಚಾರ ಮಾಡಿ ಕೊಲೆಗೈದಿದ್ದ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಆಟೋಗಾಗಿ ಕಾಯುತ್ತಿದ್ದ ಯುವತಿಯನ್ನು ಪಿಕ್ ಮಾಡಿದ್ದ ಆಟೋ ಚಾಲಕನೇ ನಿರ್ಮಾಣ ಹಂತದ ಕಟ್ಟದೊಳಗೆ ಎತ್ತಿಕೊಂಡು ಹೋಗಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಆರೋಪಿಯನ್ನು ಮುಬಾರಕ್ ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ಸುಲ್ತಾನ್ ಪಾಳ್ಯದ ನಿವಾಸಿ ಎಂದು ತಿಳಿದುಬಂದಿದೆ. ಮುಬಾರಕ್ ಹಗಲಿನಲ್ಲಿ ಎಳನೀರು ವ್ಯಾಪಾರ ಮಾಡಿದರೆ ರಾತ್ರಿ ವೇಳೆ ಆಟೋ ಓಡಿಸುತ್ತಿದ್ದನು. ಆದರೆ, ಫೆ.18ರಂದು ಮಧ್ಯಾಹ್ನ ರಾಯನ್ ಸರ್ಕಲ್ ಬಳಿ ಯುವತಿಯನ್ನು ತನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾನೆ. ಉರ್ದುವಿನಲ್ಲೇ ಮಾತನಾಡುತ್ತಿದ್ದ ಯುವತಿ ತನ್ನನ್ನು ದರ್ಗಾ ಬಳಿ ಬಿಡುವಂತೆ ಹೇಳಿದ್ದಳು. ಆರೋಪಿ ಕಾಟನ್ ಪೇಟೆ ದರ್ಗಾ ಸಮೀಪ ಬಿಟ್ಟಿದ್ದಾನೆ. ಆಗ ಯುವತಿ ಈ ದರ್ಗಾ ಅಲ್ಲ, ಮತ್ತೊಂದು ದರ್ಗಾ ಎಂದು ಹೇಳಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಸಂಪಗಿ ರಾಮನಗರದಲ್ಲಿರುವ ದರ್ಗಾಗಳ ಬಳಿ ಡ್ರಾಪ್ ತೆಗೆದುಕೊಂಡರೂ ತಾನು ಇಳಿಯುವ ಸ್ಥಳ ಇದಲ್ಲ ಎಂದಿದ್ದಳು. ನಂತರ, ಶಾಂತಿನಗರದ ಸಿಗ್ನಲ್ ಸಮೀಪ ಬರುವಾಗ ಏಕಾಏಕಿ ಆಟೊದಿಂದ ಕೆಳಗಿಳಿದು ಹಣ ನೀಡದೇ ವಂಚಿಸಿದ್ದಳು ಎನ್ನಲಾಗಿದೆ.

ಇದೇ ಯುವತಿ ಫೆ.19ರಂದು ರಾತ್ರಿ ಕೆ.ಆರ್.ಮಾರ್ಕೆಟ್ ಸಮೀಪ ಮತ್ತೆ ಆಟೋ ಚಾಲಕ ಮುಬಾರಕ್‌ಗೆ ಸಿಕ್ಕಿದ್ದಾಳೆ. ಆಗಲೂ ಯುವತಿ ತಾನು ದರ್ಗಾದ ಕಡೆ ಹೋಗಬೇಕು ಎಂದಿದ್ದಕ್ಕೆ ಆತ ಒಲ್ಲೆ ಎಂದಿದ್ದಾನೆ. ಆಗ, ಈತನೇ ಈಕೆ ಹಣ ಕೊಡದೇ ವಂಚನೆ ಮಾಡಿದ್ದಾಳೆ ಎಂದು ಅಲ್ಲಿದ್ದ ಎಲ್ಲ ಆಟೋ ಚಾಲಕರಿಗೆ ತಿಳಿಸಿದ್ದನು. ಇದರಿಂದ ಬೇರೆ ಯಾವುದೇ ಆಟೋ ಚಾಲಕರು ಈಕೆಯನ್ನು ಹತ್ತಿಸಿಕೊಳ್ಳಲು ಹಿಂಜರಿದಿದ್ದರು. ಕೆಲ ಹೊತ್ತಿನ ಬಳಿಕ ಆರೋಪಿ ಮುಬಾರಕ್‌ ಆಕೆಯನ್ನು ಪಿಕ್‌ ಮಾಡಿಕೊಂಡಿದ್ದಾನೆ. ಕೆ.ಆರ್. ಮಾರುಕಟ್ಟೆ ಬಳಿ ರಾತ್ರಿ 11.30ಕ್ಕೆ ಯುವತಿಯನ್ನು ಆಟೋಗೆ ಹತ್ತಿಸಿಕೊಂಡು ಬೆಳಗಿನ ಜಾವ 3 ಗಂಟೆವರೆಗೆ ಸುತ್ತಾಡಿಸಿದ್ದನು.

ನಿರ್ಮಾಣ ಹಂತದ ಕಡಕ್ಕೆ ಕರೆದೊಯ್ದು ಅತ್ಯಾಚಾರ ಕೊಲೆ

ನಿದ್ರೆ ಮಂಪರಿನಲ್ಲಿದ್ದ ಯುವತಿಯನ್ನು ಶಾಂತಿನಗರದ ಡಬಲ್ ರೋಡ್‌ನ ನಿರ್ಮಾಣ ಹಂತದ ಕಟ್ಟಡಕ್ಕೆ ಎತ್ತಿಕೊಂಡು ಹೋಗಿದ್ದಾನೆ. ಅಲ್ಲಿ ಮೊದಲ ಮಹಡಿಯಲ್ಲಿ ಯುವತಿ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಬಿಡದೇ ಅತ್ಯಾಚಾರವೆಸಗಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ನಂತರ, ಯುವತಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರಿಂದ ಆತಂಕಗೊಂಡು ಆಕೆಯನ್ನು ಕಟ್ಟಡದ ಮೇಲಂತಿಸ್ತಿಗೆ ಕರೆದೊಯ್ದು ತಳ್ಳಿ ಸಾಯಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಂಪಂಗಿರಾಮ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ ನಿಗೂಢವಾಗಿ ಉಳಿದಿದ್ದ ಯುವತಿ ಸಾವು ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT