ರಾಮನಗರ: ಲೋಕಸಭೆ ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಮಾಗಡಿ ತಾಲೂಕಿನ ಕುದೂರು ಜಿಪಿಯುಸಿ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅಮಾನತುಗೊಳಿಸಿದ್ದಾರೆ.
ಕುದೂರು ಜಿಪಿಯುಸಿ ಕಾಲೇಜಿನ ಉಪನ್ಯಾಸಕ ಕುಮಾರ್ ಅಮಾನತುಗೊಂಡವರು. ಇವರನ್ನು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಇಂದು ಅಮಾನತುಗೊಳಿಸಿದ್ದಾರೆ.
ಅಂಚೆ ಮತ ಪತ್ರ ಸಂಗ್ರಹ ಕರ್ತವ್ಯಕ್ಕೆ ಮೇಲ್ವಿಚಾರಣ ಸಿಬ್ಬಂದಿಯಾಗಿ ಕುಮಾರ್ ಅವರನ್ನು ನಿಯೋಜಿಸಲಾಗಿತ್ತು. ಆದರೆ ಅವರು ಕರ್ತವ್ಯಕ್ಕೆಹಾಜರಾಗಿರಲಿಲ್ಲ. ತಾಲೂಕು ಕಚೇರಿಯಲ್ಲಿ ನಡೆದ ಸಭೆಗೂ ಗೈರು ಹಾಜರಾಗಿದ್ದರು. ಹಾಗಾಗಿ, ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.