ಎಸ್ ಆರ್ ಶ್ರೀನಿವಾಸ್
ಎಸ್ ಆರ್ ಶ್ರೀನಿವಾಸ್  
ರಾಜ್ಯ

2019ರ ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿಯಿಂದ ಪುಲ್ವಾಮಾ ದಾಳಿ: ಶಾಸಕ ಎಸ್.ಆರ್. ಶ್ರೀನಿವಾಸ್

Shilpa D

ತುಮಕೂರು: 2019 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿ ನಡೆಸಿತ್ತು ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷರೂ ಆಗಿರುವ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮುದ್ದ ಹನುಮೇಗೌಡ ಅವರ ಪರ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, ಕಳೆದ ಚುನಾವಣೆಯ ಸಮಯದಲ್ಲಿ, ಅವರು (ಬಿಜೆಪಿ) ಪುಲ್ವಾಮಾ ದಾಳಿಯನ್ನು ಸಂಘಟಿಸಿದರು ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂಬ ಭಯವನ್ನು ಮತದಾರರಲ್ಲಿ ಸೃಷ್ಟಿಸಿ ಚುನಾವಣೆಯಲ್ಲಿ ಗೆದ್ದರು. ಈ ಬಾರಿ ಅವರು ರಾಮನ ಹೆಸರಿನಲ್ಲಿ ಮತ ಗಳಿಸಲು ಸಂಚು ರೂಪಿಸಿದ್ದಾರೆ.

ಹಳ್ಳಿಗಳಲ್ಲಿ ಯುವಕರನ್ನು ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಪ್ರಚೋದಿಸುತ್ತಿದ್ದಾರೆ, ಪುಲ್ವಾಮಾ ದಾಳಿಯಲ್ಲಿ ಯಾರನ್ನೂ ಹಿಡಿದು ಶಿಕ್ಷಿಸಲಾಗುತ್ತಿಲ್ಲ ಎಂದು ಬಿಜೆಪಿಯವರೇ ಹೇಳಿದ್ದಾರೆ. ಬಿಜೆಪಿಯು ಮತಕ್ಕಾಗಿ ಮುಸ್ಲಿಮರು ಮತ್ತು ಪಾಕಿಸ್ತಾನದ ಮೊರೆ ಹೋಗಿದ್ದಾರೆ ಎಂದು ಅವರು ಆರೋಪಿಸಿದರು. ಭಗವಾನ್ ರಾಮನನ್ನು ಜನರು ಪೂಜಿಸುವುದನ್ನು ನಾನು ವಿರೋಧಿಸುವುದಿಲ್ಲ, ಆದರೆ "ಜೈ ಶ್ರೀ ರಾಮ್" ಎಂದು ಜಪಿಸುವುದರಿಂದ ಖಾಲಿ ಹೊಟ್ಟೆ ತುಂಬಿಸಲು ಆಗದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳು ಮಹಿಳೆಯರು ಮತ್ತು ಯುವಕರು ಸೇರಿದಂತೆ ನಿರ್ಗತಿಕರಿಗೆ ಸಹಾಯ ಮಾಡುತ್ತಿವೆ ಎಂದು ಅವರು ಸಲಹೆ ನೀಡಿದರು.

SCROLL FOR NEXT