ಆದಿ ಚುಂಚನಗಿರಿ ಮಠಕ್ಕೆ ಸಿಎಂ ಭೇಟಿ
ಆದಿ ಚುಂಚನಗಿರಿ ಮಠಕ್ಕೆ ಸಿಎಂ ಭೇಟಿ 
ರಾಜ್ಯ

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ವಿಚಲಿತ: ಆದಿ ಚುಂಚನಗಿರಿ ಮಠಕ್ಕೆ ಸಿಎಂ ಭೇಟಿ; ಕಾಂಗ್ರೆಸ್ ನಾಯಕರಿಂದ ಒಕ್ಕಲಿಗ ಮಂತ್ರ ಜಪ!

Shilpa D

ಬೆಂಗಳೂರು: ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ನಾಯಕರು ಒಕ್ಕಲಿಗ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಸಜ್ಜಾಗಿದ್ದಾರೆ. ಬೆಂಗಳೂರು ಮತ್ತು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಒಕ್ಕಲಿಗ ವೋಟ್‌ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಪ್ಲಾನ್ ಮಾಡಿದೆ.

ಆದಿಚುಂಚನಗಿರಿ ಮಠಕ್ಕೆ ಕೈ ನಾಯಕರೆಲ್ಲಾ ಸಾಮೂಹಿಕವಾಗಿ ಭೇಟಿ ಕೊಟ್ಟು ಲೋಕಸಭೆ ಚುನಾವಣೆಗಾಗಿ ತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಶೇ. 90 ರಷ್ಟು ಕಾರ್ಯಕರ್ತು ಸಂತೋಷಗೊಂಡಿದ್ದಾರೆ ಮತ್ತು ಒಕ್ಕಲಿಗ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲಿ ಈ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಇದಕ್ಕಾಗಿಯೇ ಗುರುವಾರ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋಲಾರದ ಕೆ ವಿ ಗೌತಮ್ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಆದಿ ಚುಂಚನಗಿರಿ ಮಠದ ಮುಖ್ಯಸ್ಥರಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಬಳಿ ತೆರಳಿ ಆಶೀರ್ವಾದ ಪಡೆದರು. ಮೈಸೂರು-ಕೊಡಗಿನ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಒಕ್ಕಲಿಗರಾಗಿದ್ದಾರೆ. ಅವರು ಕೂಡ ಆಶೀರ್ವಾದ ಪಡೆದರು, ಸಿದ್ದರಾಮಯ್ಯನವರು ಶ್ರೀಗಳ ಜೊತೆ ಊಟ ಮಾಡಿದರು. ಶೇ. 30-35 ರಷ್ಟು ಒಕ್ಕಲಿಗರು ಲಕ್ಷ್ಮಣ್‌ಗೆ ಒಲವು ತೋರಿದರೆ, ನೆಕ್ ಟು ನೆಕ್ ಫೈಟ್ ಇರುತ್ತದೆ. ದಲಿತರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್‌ ಗೆ ಬೆಂಬಲ ನೀಡುವುದರಿಂದ ಅನಿರೀಕ್ಷಿತ ಫಲಿತಾಂಶ ಹೊರಬೀಳಲಿದೆ ಎಂದು ನಕೆಪಿಸಿಸಿ ಉಪಾಧ್ಯಕ್ಷ ಜಿ ಎನ್ ನಂಜುಂಡ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಬಹುತೇಕ ಕ್ಷೇತ್ರಗಳಲ್ಲಿ ಇದೇ ಪರಿಸ್ಥಿತಿ ಇರುವ ಕಾರಣ ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯರೆಡ್ಡಿ, ಬೆಂಗಳೂರು ಉತ್ತರ ಅಭ್ಯರ್ಥಿ ಪ್ರೊ.ರಾಜೇಗೌಡ, ತುಮಕೂರಿನ ಎಸ್‌ಪಿ ಮುದ್ದಹನುಮೇಗೌಡ ಸೇರಿದಂತೆ ಒಕ್ಕಲಿಗ ಮುಖಂಡರು ಹಾಗೂ ಅಭ್ಯರ್ಥಿಗಳು ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಎಲ್ಲೆಲ್ಲಿ ಒಕ್ಕಲಿಗರು ಗೆಲ್ಲುವ ಅವಕಾಶ ಇದೆಯೋ ಅಲ್ಲೇಲ್ಲ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಒಕ್ಕಲಿಗರು, ಬಂಟ್ಸ್ ಮತ್ತು ರೆಡ್ಡಿ ಸೇರಿದಂತೆ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಎಂಟು ಟಿಕೆಟ್ (ಅತಿ ಹೆಚ್ಚು) ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಒಕ್ಕಲಿಗರು ಅಥವಾ ಗೌಡರು ಎಂದು ಒಂದೇ ಸೂರಿನಡಿ ಒಗ್ಗೂಡಿದ ಈ ಸಮುದಾಯಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್ ಬಯಸುತ್ತಿದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ, ಸಮುದಾಯವು ಇತ್ತೀಚಿನ ದಿನಗಳಲ್ಲಿ ಎಲ್ಲಾ ಪಕ್ಷಗಳಿಗೆ ಪ್ರಜಾಸತ್ತಾತ್ಮಕವಾಗಿ ಮತ ಹಾಕಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾರಣದಿಂದ ಸಾಕಷ್ಟು ಜನ ಕಾಂಗ್ರೆಸ್‌ಗೆ ಒಲವು ತೋರಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಆದರೆ ಈ ಬಾರಿ ಮಂಡ್ಯದಿಂದ ಕಣಕ್ಕಿಳಿದಿರುವ ಸಮುದಾಯದ ಪರಮಾಪ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪುತ್ರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ನಾಯಕತ್ವ ಎಚ್ಚರಿಕೆ ವಹಿಸಿದೆ. ಇದು ವಿಶ್ಲೇಷಕರ ಪ್ರಕಾರ, ಪ್ರದೇಶದಲ್ಲಿ ಏರಿಳಿತದ ಪರಿಣಾಮವನ್ನು ಹೊಂದಲಿದೆ ಎಂದು ಹೇಳಲಾಗಿದೆ.

SCROLL FOR NEXT