ಕೆರೆ ಬಳಿ ಬಿಡಬ್ಲ್ಯುಎಸ್‌ಎಸ್‌ಬಿ ಸ್ಥಾಪಿಸಿರುವ ಒಳಚರಂಡಿ ಸಂಸ್ಕರಣಾ ಘಟಕ.
ಕೆರೆ ಬಳಿ ಬಿಡಬ್ಲ್ಯುಎಸ್‌ಎಸ್‌ಬಿ ಸ್ಥಾಪಿಸಿರುವ ಒಳಚರಂಡಿ ಸಂಸ್ಕರಣಾ ಘಟಕ. 
ರಾಜ್ಯ

ವಿಭೂತಿಪುರ ಕೆರೆ: STP ನಿರ್ಮಾಣ ಕಾರ್ಯ ಪೂರ್ಣಗೊಂಡರೂ ವಿದ್ಯುತ್ ಪೂರೈಸದ BESCOM, ಕಾರ್ಯಾರಂಭ ಮತ್ತಷ್ಟು ತಡ!

Manjula VN

ಬೆಂಗಳೂರು: ನಗರದ ವಿಭೂತಿಪುರ ಕೆರೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಒಳಚರಂಡಿ ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಸ್ಥಾಪಿಸಿ ಸುಮಾರು ಒಂದು ತಿಂಗಳಾದರೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಇನ್ನೂ ವಿದ್ಯುತ್ ಸಂಪರ್ಕ ನೀಡದ ಕಾರಣ ಎಸ್‌ಟಿಪಿ ಕಾರ್ಯಾರಂಭ ತಡವಾಗುತ್ತಿದೆ.

ಒಳಚರಂಡಿ ಸಂಸ್ಕರಣಾ ಘಟಕವು 1.5 ಎಂಎಲ್'ಡಿ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ವಿಭೂತಿಪುರ ಕೆರೆಯನ್ನು ತುಂಬಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಸುತ್ತಮುತ್ತಲಿನ ಬೋರೆವೆಲ್ ಗಳ ಸ್ಥಿತಿ ಕೂಡ ಸುಧಾರಿಸುತ್ತದೆ.

2017ರಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಗುತ್ತಿಗೆದಾರರು ಕೆರೆ ಪುನರುಜ್ಜೀವನ ಕಾಮಗಾರಿ ಕೈಗೆತ್ತಿಕೊಂಡು ಹೂಳು ತೆಗೆಸಿದ್ದಾರೆಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಎಸ್‌ಟಿಪಿ ಸ್ಥಾಪನೆಗೆ 2021ರ ಆಗಸ್ಟ್‌ನಲ್ಲಿ 4 ಕೋಟಿ ರೂಪಾಯಿ ಮಂಜೂರಾಗಿಗಿತ್ತು

ಉಪಕರಣಗಳು ಬಳಕೆಯಾಗದೆ ಬಿದ್ದಿದ್ದವು. 2023ರ ಜನವರಿಯಲ್ಲಿ ಬೆಸ್ಕಾಂ ವಿದ್ಯುತ್‌ ಸಂಪರ್ಕ ನೀಡಿದ ಒಂದು ತಿಂಗಳಲ್ಲಿ ಎಸ್‌ಟಿಪಿ ಕಾರ್ಯಾರಂಭ ಮಾಡಲಿದೆ ಎಂದು ಸಂಬಂಧಪಟ್ಟ ಎಂಜಿನಿಯರ್‌ ನಮಗೆ ತಿಳಿಸಿದ್ದರು. ಆದರೆ ಉಪಕರಣಗಳನ್ನು ಸರಿಪಡಿಸಲು ಅವರಿಗೆ ಒಂದು ವರ್ಷ ಕಾಲಾವಕಾಶ ಬೇಕಾಯಿತು. ಇದೀಗ ಬೆಸ್ಕಾಂ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳು ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದರೆ, ಮಾರ್ಚ್ 2024 ರೊಳಗೆ ಎಸ್‌ಟಿಪಿ ತನ್ನ ಕಾರ್ಯವನ್ನು ಆರಂಭಿಸುತ್ತಿತ್ತು ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ಈ ಮಧ್ಯೆ ಪಾಲಿಕೆಯು ಕೆರೆಯಲ್ಲಿ ಹೂಳು ತೆಗೆಯುವ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಆದಷ್ಟು ಬೇಗ ಹೂಳು ತೆಗೆಯಲಾಗುವುದು ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ಕೆರೆಗಳು) ತಿಳಿಸಿದ್ದಾರೆ.

ಒಮ್ಮೆ ಈ ಎಸ್‌ಟಿಪಿ ಕಾರ್ಯನಿರ್ವಹಿಸಲು ಆರಂಭಿಸಿದರೆ, ಕರೆ ಬತ್ತಿ ಹೋಗದೆ ಸದಾಕಾಲ ನೀರು ಇರುವಂತೆ ನೋಡಿಕೊಳ್ಳಬಹುದು ಎಂದು ಹೇಳಿದ್ದಾರೆ

SCROLL FOR NEXT