ಪೊಲೀಸ್ ಕಮಿಷನರ್ ದಯಾನಂದ
ಪೊಲೀಸ್ ಕಮಿಷನರ್ ದಯಾನಂದ PTI
ರಾಜ್ಯ

ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಬೇಟೆ; 30.92 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ, ಐವರ ಬಂಧನ

Vishwanath S

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ಭರ್ಜರಿ ಬೇಟೆಯಾಡಿದೆ. 30.92 ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

ಸಾರ್ವಜನಿಕರಿಗೆ 100 ಕೋಟಿ ಕಪ್ಪು ಹಣವಿರುವ ಬಗ್ಗೆ ನಂಬಿಸಿ ನಕಲಿ ನೋಟುಗಳನ್ನು ತೋರಿಸಿ, ಮಂಕುಬೂದಿ ಎರಚುತ್ತಿದ್ದ ಸುಧೀರ್, ಕಿಶೋರ್, ರಿಶಿ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು 40 ಲಕ್ಷ ನೀಡಿದರೆ ವಿವಿಧ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ಒಂದು ಕೋಟಿ ರೂಪಾಯಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇವರು ಟ್ರಸ್ಟ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ದಯಾನಂದ ಹೇಳಿದರು.

ಆರೋಪಿಗಳು ಒಂದು ಪಾರ್ಟಿಯ ಬಳಿ ಲಭ್ಯವಿರುವ ಕಪ್ಪು ಹಣವನ್ನು ವಿಡೀಯೊ ಕಾಲ್ ಮುಖಾಂತರ ತೋರಿಸಲು 25 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಅಲ್ಲದೆ ಒಂದು ಜಾಗಕ್ಕೆ ಕರೆಸಿಕೊಂಡು ವಿಡೀಯೊ ಕಾಲ್ ಮುಖಾಂತರ ತಮ್ಮ ಬಳಿಯಿರುವ ಕಂತೆ ಕಂತೆ ಹಣದ ಬಂಡಲ್‌ಗಳನ್ನು ತೋರಿಸಿದ್ದರು. ಆದರೆ ದೂರುದಾರರಿಗೆ ಸಂಶಯ ವ್ಯಕ್ತವಾಗಿದ್ದರಿಂದ ಪೊಲೀಸರನ್ನು ಸಂಪರ್ಕಿಸಿದ್ದರು.

ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಆಗ ವಂಚನೆ ಪ್ರಕರಣ ಬಯಲಿಗೆ ಬಂದಿದೆ. 500 ರೂ. ಮುಖಬೆಲೆಯ 1,900 ಬಂಡಲ್ಗಳು, 2000 ಮುಖಬೆಲೆಯ 1,070 ಬಂಡಲ್ಗಳು ಹಾಗೂ 2000 ಮುಖಬೆಲೆಯ 80 ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆ ಒಟ್ಟು 23,49,800 ರೂ. ಅಸಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT