ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಟನ್‌ ಖರೀದಿಗೆ ಜನವೋ ಜನ..!

Manjula VN

ಬೆಂಗಳೂರು: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬವನ್ನು ರಾಜ್ಯ ಜನತೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರದೊಂದಿಗೆ ಬರಮಾಡಿಕೊಂಡಿದ್ದು, ಇಂದು (ಬುಧವಾ) ಎಲ್ಲೆಡೆ ಹೊಸತೊಡಕು ಸಂಭ್ರಮ ಮನೆ ಮಾಡಿದೆ.

ಯುಗಾದಿ ಹಬ್ಬದ ಮಾರನೇ ದಿನ ಹೊಸ ತೊಡಕು ಆಚರಿಸಲಾಗುತ್ತದೆ. ಈ ಹಬ್ಬದಂದು ಜನರು ಕುಟುಂಬ ಸಮೇತರಾಗಿ ಮಾಂಸಾಹಾರ ಸೇವಿಸುವುದು ಸಂಪ್ರದಾಯವಾಗಿದೆ. ಹೊಸ ತೊಡಕು ಮತ್ತು ರಂಜಾನ್ ಹಿನ್ನೆಲೆಯಲ್ಲಿ ಮಾಂಸಕ್ಕೆ ಭಾರಿ ಬೇಡಿಕೆ ಶುರುವಾಗಿದೆ. ಇದರಂತೆ ಕುರಿ, ಮೇಕೆಗಳ ಬೆಲೆ ಹೆಚ್ಚಾಗಿದೆ.

ಪ್ರಸಿದ್ಧ ಬನ್ನೂರು ಕುರಿ ಮಾಂಸಕ್ಕೂ ಭಾರಿ ಬೇಡಿಕೆ ಬಂದಿದೆ. ವಿಶೇಷವಾಗಿ ಇಂದು, ಗುಡ್ಡೆ ಮಾಂಸ ತಿನ್ನುವುದು ವಾಡಿಕೆ. ಸಾಮಾನ್ಯವಾಗಿ, ಕುರಿ ಮತ್ತು ಮೇಕೆಗಳನ್ನು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ತಂದು ಮಾರಾಟ ಮಾಡಲಾಗುತ್ತದೆ. ಗುಡ್ಡೆ ಮಟನ್ ಮಾಂಸಕ್ಕೆ ಕೆಜಿಗೆ 800-900 ಆಗಿದ್ದು, ವರ್ಷಕ್ಕೊಮ್ಮೆ ಹಬ್ಬ ಬರುವುದರಿಂದ ಬೆಲೆ ಜಾಸ್ತಿ ಆದರೂ ಹಬ್ಬ ಮಾಡಲೇಬೇಕೆಂದು ಜನರು ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ.

SCROLL FOR NEXT