ರಿನಿಶಾ - ಬೇಬಿರಾಣಿ
ರಿನಿಶಾ - ಬೇಬಿರಾಣಿ 
ರಾಜ್ಯ

ದ್ವಿತೀಯ ಪಿಯುಸಿ ಫಲಿತಾಂಶ: ಒಟ್ಟಿಗೆ ಪರೀಕ್ಷೆ ಬರೆದಿದ್ದ ತಾಯಿ-ಮಗಳು ಪಾಸ್!

Lingaraj Badiger

ಮಡಿಕೇರಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಒಟ್ಟಿಗೆ ಪರೀಕ್ಷೆ ಬರೆದಿದ್ದ ತಾಯಿ-ಮಗಳು ಇಬ್ಬರೂ ಪಾಸ್ ಆಗುವ ಮೂಲಕ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಚೆಟ್ಟಳ್ಳಿಯ ಬೇಬಿರಾಣಿ ಮತ್ತು ಅವರ ಮಗಳು ರಿನಿಶಾ ಅವರು ಈ ವರ್ಷ ಒಟ್ಟಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕುಶಾಲನಗರದ ಬೇಬಿರಾಣಿ ಮತ್ತು ಸುರೇಂದ್ರ ದಂಪತಿಯ ಪುತ್ರಿ ರಿನಿಶಾ ಅವರು ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಸೈನ್ಸ್‌ ವಿಭಾಗದಲ್ಲಿ 600ಕ್ಕೆ 570 ಅಂಕ ಪಡೆದು ಪಾಸ್ ಆಗಿದ್ದಾರೆ.

ಇನ್ನು ತಾಯಿ ಬೇಬಿರಾಣಿ ಅವರು ಕಲಾ ವಿಭಾಗದಲ್ಲಿ 600ಕ್ಕೆ 388 ಅಂಕ ಪಡೆದು ಪಾಸ್ ಆಗಿದ್ದಾರೆ. ತಾಯಿ – ಮಗಳು ಇಬ್ಬರೂ ಬೇರೆ ಬೇರೆ ಕಾಲೇಜು ಸೇರಿದ್ದರು. ಬೇಬಿರಾಣಿ ಅವರು ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.

ತಾಯಿ ಮತ್ತು ಮಗಳು ಇಬ್ಬರೂ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ್ದು, ಕನ್ನಡದಲ್ಲಿ ಮಗಳು 96 ಅಂಕ ಪಡೆದರೆ ತಾಯಿ 93 ಅಂಕ ಗಳಿಸಿದ್ದಾರೆ.

"25 ವರ್ಷಗಳ ಹಿಂದೆ ನಾನು 10ನೇ ತರಗತಿ ಪೂರ್ಣಗೊಳಿಸಿದ ನಂತರ, ಕಳೆದ ವರ್ಷ ನನ್ನ ಮಗಳ ಒತ್ತಾಯದ ಮೇರೆಗೆ ಪಿಯುಸಿ ಪರೀಕ್ಷೆ ಬರೆದಿದ್ದೆ. ಈಗ ಪಾಸ್ ಆಗಿದ್ದು ಖುಷಿಯಾಗುತ್ತಿದೆ" ಎಂದು ಬೇಬಿರಾಣಿ ಹೇಳಿದ್ದಾರೆ.

SCROLL FOR NEXT