ಸಂಗ್ರಹ ಚಿತ್ರ 
ರಾಜ್ಯ

ಎಕ್ಸ್‌ಟ್ರಾ ಪೆಗ್ ಅಂದರೆ ಎನರ್ಜಿ ಡ್ರಿಂಕ್; ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್‌ ಕೇಸ್ ಹಾಕುವೆ: ಸಂಜಯ್ ಪಾಟೀಲ್

ಎಕ್ಸ್‌ಟ್ರಾ ಪೆಗ್ ಅಂದರೆ ಎನರ್ಜಿ ಡ್ರಿಂಕ್ ಎಂಬುದು ನನ್ನ ಅರ್ಥ. ಮದ್ಯವಲ್ಲ. ನನ್ನ ಭಾಷಣದಲ್ಲಿ ಎಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರನ್ನು ಉಲ್ಲೇಖಿಸಿಲ್ಲ. ರಾಜಕೀಯ ಲಾಭಕ್ಕಾಗಿ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಹೇಳಿದ್ದಾರೆ.

ಬೆಳಗಾವಿ: ಎಕ್ಸ್‌ಟ್ರಾ ಪೆಗ್ ಅಂದರೆ ಎನರ್ಜಿ ಡ್ರಿಂಕ್ ಎಂಬುದು ನನ್ನ ಅರ್ಥ. ಮದ್ಯವಲ್ಲ. ನನ್ನ ಭಾಷಣದಲ್ಲಿ ಎಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರನ್ನು ಉಲ್ಲೇಖಿಸಿಲ್ಲ. ರಾಜಕೀಯ ಲಾಭಕ್ಕಾಗಿ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತಪ್ಪು ಮಾಡಿದ್ರೆ ಚುನಾವಣೆ ಆಯೋಗ ಇದೆ, ಪೊಲೀಸರಿದ್ದಾರೆ. ಅಲ್ಲಿ ಹೋಗಿ ನೀವು ದೂರು ನೀಡಿ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಆದರೆ. ಮನೆಗೆ ಹೋಗಿ ರಾತ್ರಿಯಲ್ಲಿ ಪ್ರತಿಭಟನೆ ‌ಮಾಡೋದು ಎಷ್ಟು ಸರಿ. ನಾನು ಹಾರ್ಟ್ ಪೇಷಂಟ್ ಇದ್ದೇನೆ. ಬೈ ಪಾಸ್ ಸರ್ಜರಿ ಸಹ ಆಗಿದೆ. ಹಾರ್ಟ್ ವೀಕ್ ಇದ್ದರೆ ಗತಿ ಏನು? ಅವರು ಹೀಗೆ ಮಾಡೋದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.

ಪೃಥ್ವಿ ಸಿಂಗ್ ಮೇಲೆ ಹಲ್ಲೆ ಆಯ್ತು. ಅಂಗನವಾಡಿ ಟೀಚರ್ಸ್ ಮೇಲೆ ಹಲ್ಲೆ ಆಯ್ತು. ಆಗ ಎನೂ ಆಗಲಿಲ್ಲ. ಸಚಿವೆ ತಮ್ಮ ಸ್ವಾರ್ಥಕ್ಕಾಗಿ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮೋದಿ ಚೌಕಿದಾರ್ ಅಲ್ಲ ಚೋರ್ ಅಂತಾರೆ ಸಿದ್ದರಾಮಯ್ಯ ಬಿಜೆಪಿಯವರು ನಾಲಾಯಕರು ಅಂತಾರೆ. ನನ್ನ ಮಾತನ್ನೂ ಕಾಂಗ್ರೆಸ್ ‌ನಾಯಕರು ಸ್ಪೋಟಿವ್ ಆಗಿ ತೆಗೆದುಕೊಳ್ಳಬೇಕು. ಇದು ಚುನಾವಣೆ ನೀವು ಮಾತಾಡ್ತಿರಿ, ನಾವು ಮಾತಾಡ್ತಿವಿ. ಬೈ ಮಿಸ್ಟೇಕ್ ಎನಾದ್ರು ಆಗಿರಬಹುದು. ಹೋರಾಟಕ್ಕೆ ಒಂದು ಪ್ರೊಸಿಜರ್ ಇದೆ. ಅದನ್ನು ಬಿಟ್ಟು ಮನೆ‌ಬಾಗಿಲಿಗೆ ಬಂದು ಕೂರೋದು ಎಷ್ಟು ಸರಿ?

ನಾನು ಅವರ ಹೆಸರು ತೆಗೆದುಕೊಂಡಿದ್ದಿನಾ ಹೆಸರು ತೆಗೆದುಕೊಂಡಿದ್ದರೆ ನೀವೆ ಇಲ್ಲೆ ಶಿಕ್ಷೆ ಕೊಡಿ. ಯಾರಿಗೂ ನಾನು ಅಪಮಾನ ಮಾಡಿಲ್ಲ‌. ಅವರದೆ ಸರ್ಕಾರ ಇದೆ ಸಿಬಿಐ ತನಿಖೆ ಮಾಡಲಿ. ನಾನು ಅವರ ಬಗ್ಗೆ ಮಾತಾಡಿಲ್ಲ ನಮ್ಮ‌ ಮನೆಯಲ್ಲಿರುವರ ಬಗ್ಗೆ ನಾನು ಮಾತಾಡಿರುವೆ. ವಿಡಿಯೋ ಪೂರ್ತಿ ಪರಿಶೀಲನೆ ಮಾಡಿ, ಬಿಜೆಪಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಅವರು ತಡೆಯುತ್ತಿದ್ದಾರೆ ಅಂತ ಹೇಳಿದ್ದೇನೆ. ಗೋ ಹತ್ಯೆ‌ ಕಾನೂನು ಹಾಗೂ ಮತಾಂತರ ನಿಷೇಧ ಕಾನೂನಿಗೆ ಸಪೋರ್ಟ್ ಮಾಡಲಿ ಎಂದು ಹೇಳಿರುವೆ. ವಾತಾವರಣ ಕೆಡಿಸುವ ಕೆಲಸ ಆಗುತ್ತಿದೆ. ಅವರ ಬಗ್ಗೆ ನಾನು ಮಾತಾಡಿಲ್ಲ. ಇದರ ಅಡ್ವಾಂಟೇಜ್ ತೆಗೆದುಕೊಳ್ಳುವ ಕೆಲಸ ಅವರು ಮಾಡುತ್ತಿದ್ದಾರೆ.

ಸಂಜಯ್ ಪಾಟೀಲ್ ಬಗ್ಗೆ ಪ್ರೀಯಾಂಕಾ ಜಾರಕಿಹೊಳಿ, ಅಂಜಲಿ ನಿಂಬಾಳ್ಕರ್ ಯಾಕೆ ಮಾತಾಡ್ತಿಲ್ಲ. ನನ್ನ ವಿರುದ್ಧ ಅವರ್ಯಾಕೆ ಮಾತಾಡ್ತಿಲ್ಲ. ಇವರು ಸ್ವಂತ ಲಾಭ ತೆಗೆದುಕೊಳ್ಳಲು ನೋಡ್ತಿದ್ದಾರೆ. ಅಂಜಲಿ ಕಾಂಗ್ರೇಸ್ ನಲ್ಲಿದ್ದರೂ ನಾನು ಆಕೆಗೆ ತಂಗಿ ಅಂತ ಕರೆಯುತ್ತೇನೆ. ಅಂಜಲಿ ಹೇಳಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡ್ತಾನೆ ಅಂತ ಹೇಳಲಿ. ಪ್ರೀಯಾಂಕಾ ಜಾರಕಿಹೊಳಿ ಮಹಿಳೆಯರಿಗೆ ಅಪಮಾನ ಮಾಡ್ತಾರೆ ಅಂತ ಹೇಳಲಿ ನೋಡೊಣ ಎಂದು ಸವಾಲು ಹಾಕಿದರು.

ಇದೇ ವೇಳೆ ಜಗತ್ತಿನಲ್ಲಿ ಒಬ್ಬರೇ ಮಹಿಳೆಯರಿದ್ದಾರಾ ಎಂದು ಪ್ರಶ್ನೆ ಮಾಡಿದ ಸಂಜಯ್ ಪಾಟೀಲ್. ನನ್ನ ತಾಯಿಗೆ 90 ವರ್ಷ. ಅವರು ಬೆಡ್ ನಲ್ಲಿದ್ದಾರೆ. ತಾಯಿಗೆ ಹೆಚ್ಚು‌ಕಮ್ಮಿ ಆದರೆ, ಯಾರು ಜವಾಬ್ದಾರಿ. ರಾಜಕೀಯ ಲಾಭ ತೆಗೆದುಕೊಳ್ಳಲು ಇದೊಂದು ಷಢ್ಯಂತ್ರ ರಚಿಸಲಾಗಿದೆ. ಹರ್ಟ್ ಆಗುವ ರೀತಿ ನಾನು ಎನೂ ಮಾತನಾಡಿಲ್ಲ. ಚುನಾವಣೆಗೆ ಇನ್ನು 20 ದಿನ ಇದೆ. ನೀವು ಮಾತಾಡ್ತಿರಿ ನಾವು ಮಾತಾಡ್ತಿವಿ ಸ್ಪೋಟಿವ್ ಆಗಿ ತೆಗೆದುಕೊಳ್ಳಿ. ನಿಮ್ಮ‌ಮನೆಯ ಮುಂದೆ ಬಂದು ಪ್ರತಿಭಟನೆ ಮಾಡಿದ್ದಕ್ಕೆ ಕಾನೂನು ಹೋರಾಟ ಮಾಡುತ್ತೀರಾ, ಕೋರ್ಟ್ ನಲ್ಲಿ ಕ್ರಿಮಿನಲ್‌ ಕೇಸ್ ಹಾಕುತ್ತೇನೆ. ನನ್ನ ಎಲ್ಲಾ ವಿಡಿಯೋ ರೆಕಾರ್ಡ್ ಇದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT