ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು ಜಲ ಬಿಕ್ಕಟ್ಟು: ಸಾರ್ವಜನಿಕ ಶೌಚಾಲಯದ ಮೇಲೂ ಪರಿಣಾಮ; 5 ರೂ. ಇದ್ದ ಶುಲ್ಕ 10ಕ್ಕೆ ಏರಿಕೆ!

ಬೆಂಗಳೂರು: ಬೆಂಗಳೂರಿನ ಜಲ ಬಿಕ್ಕಟ್ಟಿನ ಪರಿಣಾಮ ಸಾರ್ವಜನಿಕ ಶೌಚಾಲಯಗಳ ಮೇಲೂ ಬೀರಿದ್ದು, ಶೌಚಾಲಯಗಳ ಬಳಕೆ ಶುಲ್ಕವನ್ನು ರೂ.5ರಿಂದ ರೂ.10ಕ್ಕೆ ಏರಿಕೆ ಮಾಡಲಾಗಿದೆ.

ಬೆಂಗಳೂರು: ಬೆಂಗಳೂರಿನ ಜಲ ಬಿಕ್ಕಟ್ಟಿನ ಪರಿಣಾಮ ಸಾರ್ವಜನಿಕ ಶೌಚಾಲಯಗಳ ಮೇಲೂ ಬೀರಿದ್ದು, ಶೌಚಾಲಯಗಳ ಬಳಕೆ ಶುಲ್ಕವನ್ನು ರೂ.5ರಿಂದ ರೂ.10ಕ್ಕೆ ಏರಿಕೆ ಮಾಡಲಾಗಿದೆ.

ಇಲ್ಲಿಯವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರ್ವಜನಿಕ ಶೌಚಾಲಯಗಳ ನಿರ್ವಾಹಕರು ಶೌಚಾಲಯಗಳ ಬಳಕೆದಾರರಿಗೆ ಮೂತ್ರ ವಿಸರ್ಜನೆಗೆ ರೂ 2 ಮತ್ತು ಮಲವಿಸರ್ಜನೆಗೆ ರೂ 5 ವಿಧಿಸುತ್ತಿದ್ದವು. ಆದರೆ ನಗರದಲ್ಲಿ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ದರಗಳನ್ನು ಕ್ರಮವಾಗಿ 5 ಮತ್ತು 10 ರೂಗೆ ಹೆಚ್ಚಳ ಮಾಡಿದೆ.

ಶೌಚಾಲಯ ಬಳಕೆದಾರರಿಗೆ ಸಣ್ಣ ಬಕೆಟ್‌ಗಳಲ್ಲಿ ನೀರು ನೀಡಲಾಗುತ್ತಿದ್ದು, ಹೆಚ್ಚುವರಿ ನೀರಿಗೆ ಹೆಚ್ಚುವರಿ ಹಣ ವಿಧಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ನೀರಿನ ಟ್ಯಾಂಕರ್‌ಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಸಾರ್ವಜನಿಕ ಶೌಚಾಲಯಗಳ ನಿರ್ವಹಣಾ ವೆಚ್ಚ ಕೂಡ ಹೆಚ್ಚಾಗಿದೆ. ಅಂತರ್ಜಲ ಹಾಗೂ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಶೌಚಾಲಯಗಳ ಬಳಕೆಯ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಶೌಚಾಲಯಗಳ ನಿರ್ವಾಹಕರು ಹೇಳುತ್ತಿದ್ದಾರೆ.

ಶುಲ್ಕ ಹೆಚ್ಚಳ ಮಾಡಿದ್ದರೂ ಸಾರ್ವಜನಿಕ ಶೌಚಾಲಯಗಳು ಕೊಳಕು, ದುರ್ವಾಸನೆ ಮತ್ತು ಅನೈರ್ಮಲ್ಯದಿಂದ ಕೂಡಿವೆ ಎಂದು ಬಿಎಂಟಿಸಿ ಬಸ್ ಚಾಲಕರೊಬ್ಬರು ಹೇಳಿದ್ದಾರೆ.

ಕೆಲವು ಶೌಚಾಲಯಗಳು ಸ್ನಾನದ ಸೇವೆಗಳನ್ನು ನಿಲ್ಲಿಸಿವೆ. ಕೆಲವು ನೀರಿನ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಎಂದು ತಿಳಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಸಾರ್ವಜನಿಕ ಶೌಚಾಲಯ ನಡೆಸುತ್ತಿರುವ ವ್ಯಕ್ತಿಯೊಬ್ಬರು ಮಾತನಾಡಿ, “ನಮಗೆ ದಿನಕ್ಕೆ ಮೂರು ಟ್ಯಾಂಕರ್ ನೀರು ಬೇಕಾಗುತ್ತದೆಯ ಪ್ರತಿ ಟ್ಯಾಂಕರ್ ನೀರಿನ ಬೆಲೆ 5,000 ರೂ ಆಗಿದೆ. ಇದು ನಮ್ಮ ಗಳಿಕೆಯ ಮೇಲೆ ಪರಿಣಾಮ ಬೀರಿದೆ, ನಮ್ಮ ಗಳಿಕೆಯ ಬಹುತೇಕ ಹಣವನ್ನು ನೀರಿನ ವೆಚ್ಚಕ್ಕೇ ಸರಿದೂಗಿಸುವಂತಾಗಿದೆ ಎಂದು ಹೇಳಿದ್ದಾರೆ.

ಈ ಬೆಳವಣಿಕೆ ಕುರಿತು ಪ್ರತಿಕ್ರಿಯೆ ನೀಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT