ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಸೌದಿಯಲ್ಲಿ ಕಾನೂನು ಸುಳಿಯಲ್ಲಿ ಸಿಕ್ಕಿಬಿದ್ದ ಭಟ್ಕಳದ ಯುವಕ; ಭಾರತ ಸರ್ಕಾರದ ನೆರವಿಗೆ ಮನವಿ

Ramyashree GN

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬೆಳ್ನಿ ಗ್ರಾಮದ 28 ವರ್ಷದ ಯುವಕನೊಬ್ಬ ಸೌದಿ ಅರೇಬಿಯಾದ ಜೆಡ್ಡಾ ನಗರದಿಂದ 830 ಕಿಮೀ ದೂರದ ತೈಮಾ ಗ್ರಾಮದಲ್ಲಿ ಸಂಭವಿಸಿದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟದಲ್ಲಿ ಸಿಲುಕಿದ್ದು, ಭಾರತ ಸರ್ಕಾರದ ನೆರವಿಗಾಗಿ ಮನವಿ ಮಾಡಿದ್ದಾರೆ.

ಮೊಹಮ್ಮದ್ ಖಾಲಿದ್ ಎಂಬುವವರು 2016ರಲ್ಲಿ ಸೌದಿ ಅರೇಬಿಯಾಕ್ಕೆ ಚಾಲಕನಾಗಿ ಕೆಲಸ ಮಾಡಲು ಬಂದಿದ್ದರು. ಉದ್ಯಮಿಯೊಬ್ಬರ ಬಳಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ಅವರು ಚಲಾಯಿಸುತ್ತಿದ್ದ ವಾಹನವು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಎರಡೂ ಕಾರುಗಳ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನೊಂದು ವಾಹನದ ಚಾಲಕ ಸೌದಿ ಪ್ರಜೆ ಮೊಹಮ್ಮದ್ ಸಲಾಮ ಹಮದ್ ಅಲ್ ಅಂಜಿ ದೂರು ದಾಖಲಿಸಿದ ನಂತರ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು.

ಈ ಪ್ರಕರಣದ ವಿಚಾರಣೆ ನಡೆಸಿದ ಸೌದಿ ನ್ಯಾಯಾಲಯವು ಮೊಹಮ್ಮದ್ ಖಾಲಿದ್ ಅವರಿಗೆ 34,500 ರಿಯಾಲ್‌ಗಳ (ಅಂದಾಜು 7 ಲಕ್ಷ ರೂ.) ಭಾರಿ ದಂಡವನ್ನು ವಿಧಿಸಿದೆ.

'ನ್ಯಾಯಾಲಯದ ಆದೇಶ ಮತ್ತು ದಂಡ ಪಾವತಿಸಲು ಆಗದ ಆತ ಸೌದಿಯಲ್ಲಿ ಕೆಲಸವಿಲ್ಲದೆ ಅಲೆದಾಡುವಂತೆ ಮಾಡಿದೆ. ಅಲ್ಲಿ ಆತ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಕಷ್ಟಪಡುತ್ತಿದ್ದಾನೆ' ಎಂದು ಖಾಲಿದ್ ಅವರ ಚಿಕ್ಕಮ್ಮ ಶಾಯಿಸ್ತಾ ಹೇಳಿದ್ದಾರೆ.

ಟಿಎನ್ಐಇ ಜೊತೆಗೆ ಮಾತನಾಡಿದ ಖಾಲಿದ್, 'ಈಗ ಜೀವನ ನಡೆಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೇನೆ. ಪ್ರಕರಣವನ್ನು ಹಿಂಪಡೆಯುವಂತೆ ನಾನು ದೂರುದಾರರಿಗೆ ಮನವಿ ಮಾಡಿದ್ದೇನೆ. ಆದರೆ, ಅವರು ನಿರಾಕರಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ಖಾಲಿದ್ ಎಂಟು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು. 'ಐದು ವರ್ಷಗಳ ಹಿಂದೆ ಖಾಲಿದ್ ತನ್ನ ಉದ್ಯೋಗದಾತರೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಗಳು ಚಿಕ್ಕದಾಗಿದ್ದರೂ, ನ್ಯಾಯಾಲಯ ಖಾಲಿದ್‌ಗೆ ದಂಡ ವಿಧಿಸಿದೆ. ಖಾಲಿದ್‌ನ ತಂದೆ ಮೂಕರಾಗಿದ್ದು, ಆತನ ಸಹೋದರ ಈಗ ಕಾಲೇಜು ಬಿಟ್ಟಿದ್ದಾರೆ. ಅವರು ಈಗ ಇಲ್ಲಿ ಕುಟುಂಬವನ್ನು ಪೋಷಿಸಲು ಕೆಲಸ ಮಾಡುತ್ತಿದ್ದಾರೆ' ಎಂದು ಅವರ ತಾಯಿ ತಸ್ಲೀಮಾ ಭಾನು ಹೇಳಿದ್ದಾರೆ.

ಅಪಘಾತದ ನಂತರ, ಖಾಲಿದ್ ಅವರು ಕೆಲಸ ಕಳೆದುಕೊಂಡಿದ್ದು, ಸದ್ಯ ಯಾವುದೇ ಉದ್ಯೋಗವಿಲ್ಲ.

SCROLL FOR NEXT