ನಟ ದ್ವಾರಕೀಶ್  
ರಾಜ್ಯ

Actor Dwarakish Demise: ರವೀಂದ್ರ ಕಲಾಕ್ಷೇತ್ರಕ್ಕೆ ನಟ ದ್ವಾರಕೀಶ್ ಪಾರ್ಥೀವ ಶರೀರ ರವಾನೆ, ಅಂತಿಮ ದರ್ಶನಕ್ಕೆ ವ್ಯವಸ್ಥೆ

ನಿನ್ನೆ ನಿಧನರಾದ ನಟ ದ್ವಾರಕೀಶ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಟೌನ್ ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರಕ್ಕೆ ರವಾನಿಸಲಾಗಿದ್ದು, ಇಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು: ನಿನ್ನೆ ನಿಧನರಾದ ನಟ ದ್ವಾರಕೀಶ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಟೌನ್ ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರಕ್ಕೆ ರವಾನಿಸಲಾಗಿದ್ದು, ಇಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಂಗಳವಾರ (ಏಪ್ರಿಲ್ 16) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತದೇಹವನ್ನು ಇಲೆಕ್ಟ್ರಾನಿಕ್ ಸಿಟಿಯ ಗುಳಿಮಂಗಳದಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿತ್ತು. ಕನ್ನಡ ಚಿತ್ರರಂಗದ ಗಣ್ಯರು ಇಲ್ಲಿ ಅಂತಿಮ ದರ್ಶನ ಪಡೆದರು. ಇಂದು (ಏಪ್ರಿಲ್ 17) ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ದ್ವಾರಕೀಶ್ ಅಂತ್ಯಕ್ರಿಯೆ ನಡೆಯಲಿದೆ.

ರವೀಂದ್ರ ಕಲಾಕ್ಷೇತ್ರಕ್ಕೆ ನಟ ದ್ವಾರಕೀಶ್ ಪಾರ್ಥೀವ ಶರೀರ ರವಾನೆ

ಬೆಳಿಗ್ಗೆ 7:30 ನಂತರ ಬೆಂಗಳೂರಿನ ಟೌನ್​ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರಕ್ಕೆ ದ್ವಾರಕೀಶ್ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. 11:30ರವೆರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನದ ಬಳಿಕ ಬೆಂಗಳೂರಿನ ಚಾಮರಾಜಪೇಟೆ ಟಿಆರ್​ಮಿಲ್​ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಬೆಳಗಿನ ಚಿತ್ರ ಪ್ರದರ್ಶನ ರದ್ದು

ಇನ್ನು ದ್ವಾರಕೀಶ್ ನಿಧನದ ಹಿನ್ನಲೆಯಲ್ಲಿ ಅವರ ಸ್ಮರಣಾರ್ಥವಾಗಿ ಇಂದು ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರ ಮಂದಿರಗಳಲ್ಲಿ ಎಲ್ಲ ಚಿತ್ರಗಳ ಬೆಳಗಿನ ಶೋ ರದ್ದು ಪಡಿಸಲು ನಿರ್ಧರಿಸಲಾಗಿದೆ. ದ್ವಾರಕೀಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹೀಗಾಗಿ, ಅವರಿಗೆ ಗೌರವ ಸಲ್ಲಿಕೆ ಮಾಡಲಾಗುತ್ತಿದೆ.

ಇಂದು ಬೆಳಗ್ಗೆ 10.30ರ ಶೋ ಬಂದ್ ಮಾಡಲು ಪ್ರದರ್ಶಕರ ವಲಯದಿಂದ ಕರೆ ನೀಡಲಾಗಿದೆ. ಪ್ರದರ್ಶಕರ ವಲಯದ ಕರೆಗೆ ಚಿತ್ರೋದ್ಯಮ‌ ಸಾಥ್ ಕೊಟ್ಟಿದೆ. ಮದ್ಯಾಹ್ನ 1 ಘಂಟೆ ನಂತರ ಚಿತ್ರಮಂದಿರಗಳಲ್ಲಿ ಶೋ ಆರಂಭ ಆಗಲಿವೆ. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಎಲ್ಲವೂ ಒಂದು ಶೋ ಬಂದ್ ಮಾಡಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪರಿಹಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ': ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ

ಜಾತಿ ರಹಿತ ಸಮಾಜ ನಿರ್ಮಾಣವೇ ಸಂವಿಧಾನದ ಆಶಯ: ಸಿಎಂ ಸಿದ್ದರಾಮಯ್ಯ

ಸಂಚಾರ ದಂಡ ರಿಯಾಯಿತಿಯಿಂದ ಬರೋಬ್ಬರಿ 106 ಕೋಟಿ ಸಂಗ್ರಹ: 37.86 ಲಕ್ಷ ಪ್ರಕರಣ ಇತ್ಯರ್ಥ

AI ವೀಡಿಯೊ ಮೂಲಕ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ತೇಜೋವಧೆ: Congress, ಐಟಿ ಸೆಲ್ ವಿರುದ್ಧ ಎಫ್ಐಆರ್

ಯಾರೂ ಭಾರತ-ಪಾಕ್ ಪಂದ್ಯ ನೋಡಬೇಡಿ, TV ಆಫ್ ಮಾಡಿ: ಪಹಲ್ಗಾಮ್ ಬಲಿಪಶು ಶುಭಂ ದ್ವಿವೇದಿ ಪತ್ನಿ ಕರೆ

SCROLL FOR NEXT