ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಆನ್‌ಲೈನ್ ವಂಚಕರಿಂದ ಉದ್ಯಮಿಗೆ 5 ಕೋಟಿ ರೂ. ವಂಚನೆ

Nagaraja AB

ಬೆಂಗಳೂರು: ನಗರದ 52 ವರ್ಷದ ಉದ್ಯಮಿಯೊಬ್ಬರು ಆನ್ ಲೈನ್ ವಂಚಕರಿಂದ 5 ಕೋಟಿ ರೂ.ಕಳೆದುಕೊಂಡಿದ್ದಾರೆ. ಷೇರುಗಳ ಮೇಲೆ ಹೆಚ್ಚಿನ ಆದಾಯದ ಆಮಿಷವೊಡ್ಡುವ ಮೂಲಕ ಅವರನ್ನು ವಂಚಿಸಲಾಗಿದೆ. ಈ ಸಂಬಂಧ ಜಯನಗರ 7ನೇ ಹಂತದ ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್‌ನಲ್ಲಿ ಲಿಂಕ್ ಬಂದಿದ್ದು, ಅದನ್ನು ನಿರ್ಲಕ್ಷಿದ್ದರೂ ನಂತರ 160 ಸದಸ್ಯರ ವಾಟ್ಸಾಪ್ ಗ್ರೂಪ್ ನೊಂದಿಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ.

“ಆರೋಪಿಗಳು ವಾಟ್ಸಾಪ್ ಕರೆ ಮೂಲಕ ಸಂಪರ್ಕ ಸಾಧಿಸಿ, ಲಿಂಕ್ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದೆಂದು ನಂಬಿಸಿದರು. ನಂತರ ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ರೂ. 5,17,57,500 ವರ್ಗಾಯಿಸಿ ಐಪಿಒ ಸೇರಿದಂತೆ ಷೇರುಗಳನ್ನು ಖರೀದಿಸಿದೆ. ಮತ್ತಷ್ಟು ಹೂಡಿಕೆ ಮಾಡಬೇಕೆಂದು ಆರೋಪಿಗಳು ಒತ್ತಾಯಿಸಿದಾಗ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಉದ್ಯಮಿಯ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

SCROLL FOR NEXT