ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜ್ಯ

2019 ಲೋಕಸಭೆ ಚುನಾವಣೆ: ಕರ್ನಾಟಕದ 86 ವಿಧಾನಸಭೆ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಮತದಾನ!

Sumana Upadhyaya

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ 2024ರಲ್ಲಿ ಒಟ್ಟಾರೆ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ(ECI) ಕ್ರಮ ಕೈಗೊಳ್ಳುತ್ತಿದೆ.

2019 ರ ಲೋಕಸಭಾ ಚುನಾವಣೆಯ ECI ಅಂಕಿಅಂಶಗಳ ಪ್ರಕಾರ, ಕರ್ನಾಟಕದ 86 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ರಾಷ್ಟ್ರೀಯ ಸರಾಸರಿ ಶೇಕಡಾ 67.40ಕ್ಕಿಂತ ಕಡಿಮೆಯಾಗಿದೆ. ಚಿಕ್ಕೋಡಿ-ಸದಲ್ಗಾ, ಹಂಗಾಲ್, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಮತ್ತು ಶಿಕಾರಿಪುರದ ಆರು ಭಾಗಗಳಲ್ಲಿ ಮಾತ್ರ ಶೇಕಡಾ 80 ರಷ್ಟು ಮತದಾನವಾಗಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಶೇಕಡಾವಾರು ಮತದಾನವಾಗಿದ್ದು ಶಿವಮೊಗ್ಗ ಸಂಸದೀಯ ಕ್ಷೇತ್ರದ ಸೊರಬ ತಾಲ್ಲೂಕಿನಲ್ಲಿ ಶೇಕಡಾ 82.59ರಷ್ಟು.

ಅಲ್ಲದೆ, ಕೇವಲ ನಾಲ್ಕು ಸಂಸದೀಯ ಕ್ಷೇತ್ರಗಳು ತಮ್ಮ ಮತದಾನದ ಶೇಕಡಾವಾರು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಕಂಡಿವೆ-ಚಿಕ್ಕೋಡಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾವೇರಿ.

ಬೆಂಗಳೂರಿನಲ್ಲಿ ಕಳೆದ ಬಾರಿ ಕಡಿಮೆ ಮತದಾನವಾಗಿತ್ತು. ನಗರದ ಎಲ್ಲಾ ಮೂರು ಕ್ಷೇತ್ರಗಳು-ಬೆಂಗಳೂರು ಉತ್ತರ, ಮಧ್ಯ ಮತ್ತು ದಕ್ಷಿಣ- ಕಡಿಮೆ ಮತದಾನದ ಶೇಕಡಾವಾರು ಕಳೆದ ಲೋಕಸಭೆ ಚುನಾವಣೆಯಲ್ಲಿ ದಾಖಲಾಗಿತ್ತು. ಬೆಂಗಳೂರು ಕೇಂದ್ರ ಭಾಗದಲ್ಲಿ ಈ ಪ್ರಮಾಣವು ಶೇಕಡಾ 54.26 ಆಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇಕಡಾ 54.35 ಮತ್ತು ದಕ್ಷಿಣದಲ್ಲಿ ಶೇಕಡಾ 53.7 ಕಂಡುಬಂದಿತ್ತು. ಅಲ್ಲದೆ, ರಾಯಚೂರಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರಿನ ಮತದಾನದಂತೆಯೇ (ಮಾನ್ವಿ- 55.50%, ರಾಯಚೂರು- 55.54%, ಮತ್ತು ಯಾದಗಿರಿ- 56.20%) ಮತದಾನವಾಗಿತ್ತು. ಗುಲ್ಬರ್ಗ ಉತ್ತರದಲ್ಲಿ (56.89%) ಇದೇ ಪರಿಸ್ಥಿತಿ ಇತ್ತು. 51 ವಿಧಾನಸಭಾ ಕ್ಷೇತ್ರಗಳಲ್ಲಿ, ಮತದಾನದ ಪ್ರಮಾಣವು 70% ಅಥವಾ ಅದಕ್ಕಿಂತ ಹೆಚ್ಚಾಗಿತ್ತು. (ಹೆಚ್ಚಾಗಿ ಗುಲ್ಬರ್ಗಾ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆಯಲ್ಲಿದೆ).

ಇಸಿಐ ದಾಖಲೆಗಳ ಪ್ರಕಾರ, 2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಮತದಾನ ಶೇಕಡಾವಾರು 68.81 ಆಗಿತ್ತು. ಪುರುಷರ ಮತದಾನದ ಶೇಕಡಾವಾರು 69.55 ಆಗಿದ್ದರೆ, ಮಹಿಳೆಯರು ಶೇಕಡಾ 67.65 ರಷ್ಟು ಮತ ಚಲಾಯಿಸಿದ್ದರು. ಇದು ರಾಷ್ಟ್ರೀಯ ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿತ್ತು.

ಭಾರತದಾದ್ಯಂತ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಮತದಾನದ ಶೇಕಡಾವಾರು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 65.12%, ಗುಜರಾತ್- 64.51%, ಜಮ್ಮು ಮತ್ತು ಕಾಶ್ಮೀರ- 44.97%, ಜಾರ್ಖಂಡ್-66.8%, ಮಹಾರಾಷ್ಟ್ರ-61.02%, ಮಿಜೋರಾಂ-63.14%, ಪಂಜಾಬ್- 65.94%, ರಾಜಸ್ಥಾನ- 66.34%, ತೆಲಂಗಾಣ- 62.77%, ಮತ್ತು ಉತ್ತರ ಪ್ರದೇಶ- 59.21%ರಷ್ಟು ಮತದಾನವನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದವು.

SCROLL FOR NEXT