ನೇಹಾ ಪೋಷಕರೊಂದಿಗೆ ಸಾಂತ್ವನ ಹೇಳುತ್ತಿರುವ ಸುರ್ಜೇವಾಲಾ
ನೇಹಾ ಪೋಷಕರೊಂದಿಗೆ ಸಾಂತ್ವನ ಹೇಳುತ್ತಿರುವ ಸುರ್ಜೇವಾಲಾ 
ರಾಜ್ಯ

ನೇಹಾ ಹಿರೇಮಠ ನಿವಾಸಕ್ಕೆ ಸುರ್ಜೇವಾಲಾ ಭೇಟಿ: ನ್ಯಾಯ ಕೊಡಿಸುವುದಾಗಿ ವಾಗ್ದಾನ

Manjula VN

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ನಡೆದು ಹಲವು ದಿನಗಳು ಕಳೆದ ಬಳಿಕ ಕೊನೆಗೂ ಕಾಂಗ್ರೆಸ್ ಹಿರಿಯ ನಾಯಕರು ನೇಹಾ ಮನೆಗೆ ಭೇಟಿ ನೀಡಿ ನೇಹಾ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರಾದ ಹೆಚ್.ಕೆ.ಪಾಟೀಲ್, ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಹೆಚ್.ಕೋನರೆಡ್ಡಿ ಅವರು ನೇಹಾ ಮನೆಗೆ ಭೇಟಿ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುರ್ಜೇವಾಲಾ, ನೇಹಾ ಕರ್ನಾಟಕದ ಮಗಳು. ನಾವೆಲ್ಲರೂ ಆಕೆಯ ಕುಟುಂಬದ ಜೊತೆಗಿದ್ದೇವೆ. ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತೇವೆ, ಇದಕ್ಕಾಗಿ ಸರ್ಕಾರ ಈಗಾಗಲೇ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದೆ. 90 ದಿನಗಳಲ್ಲಿ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.

ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ ಎಂದು ಹರಿಹಾಯ್ದರು.

SCROLL FOR NEXT