ಸುಧಾಮೂರ್ತಿ 
ರಾಜ್ಯ

ಮನೆಯಲ್ಲೇ ಕುಳಿತುಕೊಳ್ಳಬೇಡಿ, ನಿಮ್ಮ ನಾಯಕನನ್ನು ಆಯ್ಕೆ ಮಾಡಿ: ಮತದಾರರಿಗೆ ಸುಧಾ ಮೂರ್ತಿ ಕರೆ

ನಾನು ಎಲ್ಲರಿಗೂ ಹೇಳಲು ಬಯಸುವುದೆನೆಂದರೆ ಅರ್ಹ ಮತದಾರರೆಲ್ಲರೂ ಮನೆಯಲ್ಲೇ ಕುಳಿತುಕೊಳ್ಳಬೇಡಿ. ಮತಗಟ್ಟೆಗೆ ಬಂದು ಮತ ಚಲಾಯಿಸಿ.

ಬೆಂಗಳೂರು: ನಾನು ಎಲ್ಲರಿಗೂ ಹೇಳಲು ಬಯಸುವುದೆನೆಂದರೆ ಅರ್ಹ ಮತದಾರರೆಲ್ಲರೂ ಮನೆಯಲ್ಲೇ ಕುಳಿತುಕೊಳ್ಳಬೇಡಿ. ಮತಗಟ್ಟೆಗೆ ಬಂದು ಮತ ಚಲಾಯಿಸಿ. ಇದು ನಿಮ್ಮ ಹಕ್ಕು, ನಿಮ್ಮ ನಾಯಕನನ್ನು ಆಯ್ಕೆ ಮಾಡಿ ಎಂದು ಲೇಖಕಿ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ.

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಹಾಗೂ ರಾಜ್ಯಸಭಾ ಸದಸ್ಯೆ, ಲೇಖಕಿ ಸುಧಾಮೂರ್ತಿ ಅವರು ಬೆಂಗಳೂರಿನ ಬಿಇಎಸ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರವಾಸಿಗಳು ಕಡಿಮೆ ಮತ ಚಲಾಯಿಸುತ್ತಾರೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸುವ ಅವಕಾಶವೇ ಮತದಾನ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇದು ಸುಸಂದರ್ಭ. ಇಂದು ಬಹಳ ಸಂತೋಷದ ದಿನ. ನಾವೆಲ್ಲರೂ ನಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಇರಬೇಕಾದ ದಿನ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video

'ಸ್ವಂತ ಕೆಲಸದ ಮೇಲೆ ನಂಬಿಕೆ ಇಲ್ಲವೇ?': ಸಚಿವರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ?; CJP ಸಂಸ್ಥಾಪಕ ಅಭಿಜಿತ್ ದೀಪ್ಕೆ