ರಾಜ್ಯ

Loksabha Election 2024: ರಾಜ್ಯದಲ್ಲಿ ಶೇ.69.23 ರಷ್ಟು ಮತದಾನ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ಇಂದು ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 69.23 ರಷ್ಟು ಮತದಾನ ನಡೆದಿದೆ.

ಬೆಂಗಳೂರು ಕ್ಷೇತ್ರಗಳಲ್ಲಿ ಮಾತ್ರ ಯಥಾ ಪ್ರಕಾರ ಕಡಿಮೆ ಮತದಾನವಾಗಿದೆ.

ಮಂಡ್ಯದಲ್ಲಿ ದಾಖಲೆಯ ಶೇ.81.48 ರಷ್ಟು ಮತದಾನವಾಗಿದ್ದು, ಬೆಂಗಳೂರು ಕೇಂದ್ರದಲ್ಲಿ ಶೇ.52.81 ರಷ್ಟು ಮತದಾನವಾಗಿದ್ದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಆಯೋಗದ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ.76.06, ಹಾಸನದಲ್ಲಿ ಶೇ.77.51, ದಕ್ಷಿಣ ಕನ್ನಡದಲ್ಲಿ 77.43, ಚಿತ್ರದುರ್ಗದಲ್ಲಿ ಶೇ.73.11 ರಷ್ಟು, ತುಮಕೂರಿನಲ್ಲಿ ಶೇ.77.70, ಮಂಡ್ಯದಲ್ಲಿ ಶೇ.81.48, ಮೈಸೂರಿನಲ್ಲಿ ಶೇ.70.45 ರಷ್ಟು, ಚಾಮರಾಜನಗರದಲ್ಲಿ ಶೇ.76.59 ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ.67.29 ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.54.42, ಬೆಂಗಳೂರು ಕೇಂದ್ರ ಶೇ.52.81, ಬೆಂಗಳೂರು ದಕ್ಷಿಣ ಶೇ.53.15, ಚಿಕ್ಕಬಳ್ಳಾಪುರ ಶೇ.76.82, ಕೋಲಾರದಲ್ಲಿ ಶೇ.78.07 ರಷ್ಟು ಮತದಾನ ನಡೆದಿದೆ.

ಕೆಲವೆಡೆ ಗೊಂದಲ ನಿರ್ಮಾಣವಾಗಿ, ಚಾಮರಾಜನಗರದಲ್ಲಿ ಗ್ರಾಮವೊಂದರಲ್ಲಿ ಮೂಲಸೌಕರ್ಯ ನೀಡದೇ ಇದ್ದುದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಹೊರತುಪಡಿಸಿದರೆ ರಾಜ್ಯದಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.

SCROLL FOR NEXT