ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಅಪರಿಚಿತ ಮಹಿಳೆ ಆತ್ಮಹತ್ಯೆ

ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿದ ನಂತರ ಕಟ್ಟಡದ ನಿವಾಸಿಯೊಬ್ಬರು ತಮ್ಮ ಫ್ಲಾಟ್‌ನಿಂದ ಹೊರಗೆ ಬಂದು ಪರಿಶೀಲಿಸಿದಾಗ ನಾಲ್ಕನೇ ಮಹಡಿಯಲ್ಲಿನ ಮೆಟ್ಟಿಲುಗಳ ಬಳಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಮಲ್ಲೇಶ್ವರ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 45 ವರ್ಷದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಆಕೆಯ ಪತ್ತೆಗಾಗಿ ನಗರದ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.

ಮಂಗಳವಾರ ಬೆಳಗ್ಗೆ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ 15ನೇ ಕ್ರಾಸ್‌ನಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಗಿದೆ. ಮಹಿಳೆ ಕಟ್ಟಡದ ನಿವಾಸಿಯಾಗಿರಲಿಲ್ಲ. ಬೆಳಿಗ್ಗೆ 7.30 ರಿಂದ 7.45 ರ ನಡುವೆ ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿದ ನಂತರ ಕಟ್ಟಡದ ನಿವಾಸಿಯೊಬ್ಬರು ತಮ್ಮ ಫ್ಲಾಟ್‌ನಿಂದ ಹೊರಗೆ ಬಂದು ಪರಿಶೀಲಿಸಿದಾಗ ನಾಲ್ಕನೇ ಮಹಡಿಯಲ್ಲಿನ ಮೆಟ್ಟಿಲುಗಳ ಬಳಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಬ್ಯಾಗ್‌ನಲ್ಲಿ ಎರಡು ಹಗ್ಗಗಳೊಂದಿಗೆ ಬಂದಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿದ ಕಟ್ಟಡ ಪ್ರವೇಶಿಸಿದ್ದಾಳೆ. ಆಕೆ ನಾಲ್ಕನೇ ಮಹಡಿಗೆ ಮೆಟ್ಟಿಲುಗಳನ್ನು ಹತ್ತಿ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ಮೃತದೇಹದಲ್ಲಿ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಕ್ಕೆ ಪ್ರಯಾಣಿಸಿರುವ ಬಸ್ ಟಿಕೆಟ್ ಪತ್ತೆಯಾಗಿದ್ದು, ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT