ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಜನವರಿಯಿಂದ 9 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಕೇಸ್ ಪತ್ತೆ..!

ಜೂನ್ ತಿಂಗಳಿನಲ್ಲಿ ಪ್ರತೀನಿತ್ಯ 200 ಪಾಸಿಟಿವ್ ಕೇಸ್ ಗಳು ವರದಿಯಾಗುತ್ತಿದ್ದವು. ಆದರೆ, ಆಗಸ್ಟ್ 1 ರಿಂದ 6 ರ ನಡುವೆ 771 ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 9,035 ಡೆಂಗ್ಯೂ ಕೇಸ್ ಗಳು ವರದಿಯಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರೋಗ್ಯ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿದ ಸೊಳ್ಳೆಗಳ ಲಾರ್ವಾಗಳು ಕೊಚ್ಚಿಕೊಂಡು ಹೋಗುತ್ತಿದೆ. ಹೀಗಾಗ ದೈನಂದಿನ ಸರಾಸರಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿವೆ ಎಂದು ಹೇಳಿದ್ದಾರೆ.

ಜೂನ್ ತಿಂಗಳಿನಲ್ಲಿ ಪ್ರತೀನಿತ್ಯ 200 ಪಾಸಿಟಿವ್ ಕೇಸ್ ಗಳು ವರದಿಯಾಗುತ್ತಿದ್ದವು. ಆದರೆ, ಆಗಸ್ಟ್ 1 ರಿಂದ 6 ರ ನಡುವೆ 771 ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ದೈನಂದಿನ ಸರಾಸರಿ 130ಕ್ಕೆ ಇಳಿದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಡೆಂಗ್ಯೂ ತಡೆಯಲು ಪಾಲಿಕೆ ಹಲವು ಪ್ರಕರಣಗಳನ್ನು ಕೈಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 957 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಕಾಲೇಜುಗಳ ನರ್ಸಿಂಗ್ ವಿದ್ಯಾರ್ಥಿಗಳು ಸೇರಿ 988 ಸ್ವಯಂಸೇವಕರು ಬಿಬಿಎಂಪಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಡೆಂಗ್ಯೂ ಲಾರ್ವಾಗಳನ್ನು ನಾಶಪಡಿಸುವ ಮೂಲಕ ಹರಡುವಿಕೆಯನ್ನು ತಡೆಯಲು ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಸ್ಪ್ರೇ ಮತ್ತು ಫಾಗಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಗಸ್ಟ್ ಮೊದಲ ಆರು ದಿನಗಳಲ್ಲಿ 179 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮಹದೇವಪುರ ಡೆಂಗ್ಯೂ ಹಾಟ್‌ಸ್ಪಾಟ್ ಆಗಿಯೇ ಉಳಿದಿದೆ. ಇದೇ ಅವಧಿಯಲ್ಲಿ ದಕ್ಷಿಣ ವಲಯದಲ್ಲಿ 151 ಪ್ರಕರಣಗಳು ವರದಿಯಾಗಿದ್ದು, ಪೂರ್ವ ವಲಯದಲ್ಲಿ 139 ಪ್ರಕರಣಗಳು ವರದಿಯಾಗಿವೆ.

ನೀರು ನಿಲ್ಲುವುದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಹೀಗಾಗಿ ಕೊಳಚೆ ಪ್ರದೇಶಗಳಂತಹ ದುರ್ಬಲ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT