ನೌಕಾಪಡೆ ಕಾರ್ಯಾಚರಣೆ ಪುನಾರಂಭ 
ರಾಜ್ಯ

ಶಿರೂರು ಭೂಕುಸಿತ: ಭಾರತೀಯ ನೌಕಾಪಡೆ ಕಾರ್ಯಾಚರಣೆ ಪುನಾರಂಭ; ಅಪಾರ ಪ್ರಮಾಣದ ಭಗ್ನಾವಶೇಷ ಪತ್ತೆ!

ಸ್ಥಳದಲ್ಲಿ ಅಪಾರ ಪ್ರಮಾಣದ ಭಗ್ನಾವಶೇಷಗಳು, ಭಾರೀ ಬಂಡೆಗಳು, ಮರಗಳು ಇತ್ಯಾದಿಗಳಿವೆ ,ಹೀಗಾಗಿ ಹೂಳೆತ್ತುವ ಅಗತ್ಯ ಬರಬಹುದು ಎಂದು ಹೇಳಲಾಗುತ್ತಿದೆ.

ಶಿರೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡ ಎರಡನೇ ದಿನದಲ್ಲಿ ಭಾರತೀಯ ನೌಕಾಪಡೆಯು ಗಂಗವಳ್ಳಿ ನದಿಯಲ್ಲಿ ಲಾರಿಯ ಹೆಚ್ಚಿನ ಭಾಗಗಳನ್ನು ಪತ್ತೆಯಾಗಿದ್ದು ಹೂಳೆತ್ತುವ ಅಗತ್ಯವಿದೆ ಎಂದು ಹೇಳಿದೆ.

ಭಾರತೀಯ ಸೇನೆಯ ಡೈವರ್‌ಗಳು ಮತ್ತು ಈಶ್ವರ್ ಮಲ್ಪೆ ಇಬ್ಬರೂ ನಾಪತ್ತೆಯಾದ ಅರ್ಜುನ್ ಮತ್ತು ಇತರ ಇಬ್ಬರನ್ನು ಹುಡುಕಲು ಬುಧವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಟ್ರಕ್‌ನ ಒಂದು ಭಾಗ ಮಾತ್ರ ಕಂಡುಬಂದಿದ್ದರಿಂದ ಸ್ವಲ್ಪ ಭರವಸೆ ಕಂಡು ಬಂದಿದೆ. ನೌಕಾಪಡೆಯು ನದಿಯನ್ನು ಶೋಧಿಸಲು ನೀರೊಳಗಿನ ಸೋನಾರ್ ಸಂವೇದಕಗಳನ್ನು ಬಳಸಿಕೊಂಡಿದೆ.

ಕಳೆದ ತಿಂಗಳು ಶಿರೂರಿನಲ್ಲಿ ಭೂಕುಸಿತದ ಸಂದರ್ಭದಲ್ಲಿ ಕಾಣೆಯಾದ ಸಿಬ್ಬಂದಿ ಮತ್ತು ವಾಹನಗಳ ಹುಡುಕಾಟದಲ್ಲಿ, ಕಾರವಾರದ ನೌಕಾನೆಲೆಯಿಂದ ಭಾರತೀಯ ನೌಕಾಪಡೆ (ಐಎನ್) ಡೈವರ್‌ಗಳು ಇಂದು ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ಗಂಗಾವಳಿ ನದಿಯಲ್ಲಿ ಡೈವಿಂಗ್ ಕಾರ್ಯಾಚರಣೆಯನ್ನು ಕೈಗೊಂಡಿದೆ. ಕಡಿಮೆಯಾದ ನದಿಯ ಪ್ರವಾಹಗಳು ಮತ್ತು ನೀರೊಳಗಿನ ಸೋನಾರ್ ಸಂವೇದಕಗಳನ್ನು ಬಳಸಿಕೊಂಡು ವ್ಯಾಪಕವಾದ ಚಿತ್ರಣ ವಿಶ್ಲೇಷಣೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ . 14 ಆಗಸ್ಟ್ 24 ರಂದು, ನೌಕಾ ಡೈವರ್‌ಗಳು ಡೈವಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಟ್ರಕ್‌ನ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ನದಿಯಲ್ಲಿ ಅಪಾರ ಪ್ರಮಾಣದ ಅವಶೇಷಗಳಿವೆ ಎಂದು ನೌಕಾಪಡೆ ತಿಳಿಸಿದೆ. "ಸ್ಥಳದಲ್ಲಿ ಅಪಾರ ಪ್ರಮಾಣದ ಭಗ್ನಾವಶೇಷಗಳು, ಭಾರೀ ಬಂಡೆಗಳು, ಮರಗಳು ಇತ್ಯಾದಿಗಳಿವೆ ,ಹೀಗಾಗಿ ಹೂಳೆತ್ತುವ ಅಗತ್ಯ ಬರಬಹುದು ಎಂದು ಹೇಳಲಾಗುತ್ತಿದೆ.

ಭಾರತೀಯ ನೌಕಾಪಡೆಯ ಡೈವಿಂಗ್ ಮತ್ತು ಸಮೀಕ್ಷಾ ತಂಡಗಳು ಶಿರೂರಿನಲ್ಲಿ ನಿಯೋಜನೆಗೊಂಡಿದ್ದು ಜಿಲ್ಲಾಡಳಿತದೊಂದಿಗೆ ಶೋಧ ಪ್ರಯತ್ನಗಳನ್ನು ಮುಂದುವರಿಸುತ್ತಿವೆ. ನೌಕಾಪಡೆಯು ಶೋಧ ಕಾರ್ಯಗಳಿಗೆ ಬದ್ಧವಾಗಿದೆ ಎಂದು ನೌಕಾಪಡೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT