ಹೈಕೋರ್ಟ್ 
ರಾಜ್ಯ

ಕಾವೇರಿ ಭವನದ 1.21 ಲಕ್ಷ ಚದರ ಅಡಿ ಜಾಗ ಶೀಘ್ರವೇ ಹೈಕೋರ್ಟ್ ಗೆ ಹಸ್ತಾಂತರ

ಕಾವೇರಿ ಭವನದಲ್ಲಿ ಮೂರು ಬ್ಲಾಕ್ ಗಳನ್ನು ಒಳಗೊಂಡ 1,21,210 ಚದರ ಅಡಿ ಜಾಗದಲ್ಲಿ ಬಳಕೆಗೆ ಸಿದ್ಧವಿರುವ ಕಚೇರಿಗಳು, ಬೋರ್ಡ್ ರೂಮ್ ಗಳು, ಕಾನ್ಫರೆನ್ಸ್ ಕೊಠಡಿಗಳು, ಆಡಿಟೊರಿಯಂ ಮತ್ತು ಅತಿಥಿ ಗೃಹವನ್ನು ಹೈಕೋರ್ಟ್ ಪಡೆಯಲಿದೆ

ಬೆಂಗಳೂರು: ಕೆಜಿ ರಸ್ತೆಯ ಕಾವೇರಿ ಭವನದ 1. 21 ಚದರ ಅಡಿ ವಿಸ್ತೀರ್ಣದ ಕಟ್ಟಡ ಶೀಘ್ರವೇ ಹೈಕೋರ್ಟ್ ಗೆ ಹಸ್ತಾಂತರವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ತಿಳಿಸಿದ್ದಾರೆ.

ಸ್ವಾತಂತ್ರೋತ್ಸವ ಅಂಗವಾಗಿ ಹೈಕೋರ್ಟ್ ಆವರಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾವೇರಿ ಭವನದಲ್ಲಿ ಮೂರು ಬ್ಲಾಕ್ ಗಳನ್ನು ಒಳಗೊಂಡ 1,21,210 ಚದರ ಅಡಿ ಜಾಗದಲ್ಲಿ ಬಳಕೆಗೆ ಸಿದ್ಧವಿರುವ ಕಚೇರಿಗಳು, ಬೋರ್ಡ್ ರೂಮ್ ಗಳು, ಕಾನ್ಫರೆನ್ಸ್ ಕೊಠಡಿಗಳು, ಆಡಿಟೊರಿಯಂ ಮತ್ತು ಅತಿಥಿ ಗೃಹವನ್ನು ಹೈಕೋರ್ಟ್ ಪಡೆಯಲಿದೆ ಎಂಬುದನ್ನು ಸಂತೃಪ್ತಿಯೊಂದು ಘೋಷಿಸುತ್ತೇನೆ ಎಂದು ತಿಳಿಸಿದರು.

ಕಾವೇರಿ ಭವನದಲ್ಲಿನ ಸ್ಥಳವನ್ನು ಹೈಕೋರ್ಟ್ ಗೆ ನೀಡಲು ಕೆಪಿಟಿಎಸ್ ಎಲ್ ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಇದಕ್ಕೆ ಸರ್ಕಾರದ ಪ್ರಾಧಿಕಾರಗಳು ಒಪ್ಪಿಗೆ ಸೂಚಿಸಿವೆ. ರಚನಾತ್ಮಕ ವರದಿ ಲಭ್ಯವಾದ ಕೂಡಲೇ ಔಪಚಾರಿಕವಾಗಿ ಕಾವೇರಿ ಭವನವನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೈಕೋರ್ಟ್ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಲೋಕ ಅದಾಲತ್ ನಲ್ಲಿ ಹೈಕೋರ್ಟ್ ಸಾಧನೆ ಸಮಾಧಾನಕರವಾಗಿದೆ. ಜುಲೈ 13, 2024ರಲ್ಲಿ ನಡೆದ ಲೋಕ ಅದಾಲತ್ ನಲ್ಲಿ 44, 64,209 ಕೇಸ್ ಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ 40. 02,785ಕೇಸ್ ಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ

ಇಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಟೆವೊಲ್ಡೆ Air India ನೂತನ CEO