ಪ್ರಕಾಶ್ ರಾಜ್ ಮತ್ತಿತರರು 
ರಾಜ್ಯ

ಮೈಸೂರು: ಅನುಷ್ ಎ ಶೆಟ್ಟಿಯವರ ‘ಸಾರಾ’ ಕಾದಂಬರಿ ಬಿಡುಗಡೆ ಮಾಡಿದ ಪ್ರಕಾಶ್ ರಾಜ್!

ಒಂದು ಶ್ರೇಷ್ಠ ಸಾಹಿತ್ಯವು ಕೇವಲ ಆನಂದವನ್ನು ನೀಡುವುದಲ್ಲದೆ ಜ್ಞಾನವನ್ನು ನೀಡುತ್ತದೆ. 'ಸಾರಾ' ಈ ಎರಡೂ ಅಂಶಗಳನ್ನು ಹೊಂದಿದೆ. ಕಥೆಯು ತುಂಬಾ ಆಕರ್ಷಕವಾಗಿದೆ.

ಮೈಸೂರು: ಹೆರಿಟೇಜ್ ಹೌಸ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಲೇಖಕ ಅನುಷ್ ಎ ಶೆಟ್ಟಿ ಅವರ ಐದನೇ ಕಾದಂಬರಿ ‘ಸಾರಾ’ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್ "ಒಂದು ಶ್ರೇಷ್ಠ ಸಾಹಿತ್ಯವು ಕೇವಲ ಆನಂದವನ್ನು ನೀಡುವುದಲ್ಲದೆ ಜ್ಞಾನವನ್ನು ನೀಡುತ್ತದೆ. 'ಸಾರಾ' ಈ ಎರಡೂ ಅಂಶಗಳನ್ನು ಹೊಂದಿದೆ. ಕಥೆಯು ತುಂಬಾ ಆಕರ್ಷಕವಾಗಿದೆ ಎಂದರು.

ಲೇಖಕನಿಗೆ ಪದಗಳ ಮೂಲಕ ಎದ್ದುಕಾಣುವ ಚಿತ್ರಣವನ್ನು ಸೃಷ್ಟಿಸುವ ಸಾಮರ್ಥ್ಯ ಇರಬೇಕು. ಈ ಕಾದಂಬರಿಯು ದೃಶ್ಯ ಆಕರ್ಷಣೆಯನ್ನು ಉಳಿಸಿಕೊಂಡು ವಾಸ್ತವದ ಸಾರವನ್ನು ಸುಂದರವಾಗಿ ಬಹಿರಂಗಪಡಿಸುತ್ತದೆ. ಇದು ಪುಸ್ತಕವನ್ನು ಮೀರಿ ಲೇಖಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಳವಾದ ಕುತೂಹಲವನ್ನು ನನ್ನಲ್ಲಿ ಹುಟ್ಟುಹಾಕಿದೆ ಎಂದು ಹೇಳಿದರು.

ವೈಯಕ್ತಿಕ ಅನುಭವವನ್ನು ಮೆಲುಕು ಹಾಕಿದ ಪ್ರಕಾಶ್ ರಾಜ್, ನಾವು ದೂರದಿಂದ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳುತ್ತೇವೆ, ಆದರೆ ನಿಜವಾಗಿ, ನಮ್ಮ ಹಾದಿಯಲ್ಲಿ ನಾವೆಲ್ಲರೂ ಚಿಕ್ಕವರು, ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ 'ಒಗ್ಗರಣೆ' ಚಿತ್ರದ ಚಿತ್ರೀಕರಣದ ವೇಳೆ ಬ್ಯಾಂಡ್ ಕಲಾವಿದ ಯುವಕನೊಬ್ಬ ಪರಿಚಯವಾಯಿತು. ನಿರ್ದಿಗಂತ ಮೂಲಕ ರಂಗಭೂಮಿಗೆ ಮರಳಿದಾಗ ಅದೇ ಯುವಕ ಅನುಷ್ ಈಗ ನನ್ನ ಪಕ್ಕದಲ್ಲಿ ನಿಂತಿದ್ದಾನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT