ಸಾಂದರ್ಭಿಕ ಚಿತ್ರ 
ರಾಜ್ಯ

ದೋಷಯುಕ್ತ ನಂಬರ್ ಪ್ಲೇಟ್: 22 ದಿನದಲ್ಲಿ 19 ಸಾವಿರ ಕೇಸ್ ದಾಖಲಿಸಿದ ಕರ್ನಾಟಕ ಪೊಲೀಸರು!

ಸುಮಾರು ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಬೆಂಗಳೂರು ನಗರ ಪೊಲೀಸರು 9,816 ಪ್ರಕರಣಗಳನ್ನು ದಾಖಲಿಸಿದ್ದು, ಮೈಸೂರಿನಲ್ಲಿ 672 ಪ್ರಕರಣಗಳು ಮತ್ತು ಮಂಗಳೂರಿನಲ್ಲಿ 550 ಪ್ರಕರಣಗಳು, ಕೊಡಗು ಮತ್ತು ರಾಮನಗರದಲ್ಲಿ ಕ್ರಮವಾಗಿ 21 ಮತ್ತು 35 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು: ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಳವಡಿಸಿಕೊಳ್ಳುತ್ತಿದ್ದ ದೋಷಪೂರಿತ ನಂಬರ್ ಪ್ಲೇಟ್‌ಗಳ ಬಳಕೆಯನ್ನು ತಡೆಯುವ ಪ್ರಯತ್ನದಲ್ಲಿ ಕರ್ನಾಟಕ ಪೊಲೀಸರು ರಾಜ್ಯಾದ್ಯಂತ ಕಠಿಣ ಕ್ರಮ ಆರಂಭಿಸಿದ್ದಾರೆ. ಕೇವಲ 22 ದಿನಗಳಲ್ಲಿ 19,448 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಮನಾರ್ಹ ಸಂಖ್ಯೆಯ ಅಪರಾಧಗಳು ಕಂಡು ಬಂದಿವೆ, ಸುಮಾರು ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಬೆಂಗಳೂರು ನಗರ ಪೊಲೀಸರು 9,816 ಪ್ರಕರಣಗಳನ್ನು ದಾಖಲಿಸಿದ್ದು, ಮೈಸೂರಿನಲ್ಲಿ 672 ಪ್ರಕರಣಗಳು ಮತ್ತು ಮಂಗಳೂರಿನಲ್ಲಿ 550 ಪ್ರಕರಣಗಳು, ಕೊಡಗು ಮತ್ತು ರಾಮನಗರದಲ್ಲಿ ಕ್ರಮವಾಗಿ 21 ಮತ್ತು 35 ಪ್ರಕರಣಗಳು ದಾಖಲಾಗಿವೆ.

ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆ, ಸಂಚಾರ ನಿಯಮ ಉಲ್ಲಂಘನೆ ಪರಿಹರಿಸಲು ಸಂಚಾರ ಪೊಲೀಸರ ವ್ಯಾಪಕ ಕಾರ್ಯತಂತ್ರದ ಭಾಗವಾಗಿದೆ. ದೋಷಪೂರಿತ ನಂಬರ್‌ ಪ್ಲೇಟ್‌ ಇರುವ ವಾಹನಗಳನ್ನು ಗುರುತಿಸುವುದು ಮತ್ತು ಟ್ರ್ಯಾಕಿಂಗ್ ಮಾಡುವುದಕ್ಕೆ ಸವಾಲೆಸೆಯುತ್ತವೆ. ಅಷ್ಟೇ ಅಲ್ಲದೇ, ಸಂಚಾರ ನಿಯಮ ಉಲ್ಲಂಘನೆ, ಹಿಟ್ & ರನ್ ಪ್ರಕರಣಗಳು ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರಿಗೆ ರಕ್ಷಣೆಯನ್ನೂ ಒದಗಿಸುತ್ತವೆ.

ಕಾನೂನು ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೊಸ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವ ಹೆಚ್ಚಿನ ವಾಹನಗಳು ವಾಹನ ಚಾಲಕರಿಗೆ ಸೇರಿದ್ದು, ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುತ್ತಾರೆ. ಈ ಅಪರಾಧಿಗಳು ಸ್ಟಿಕ್ಕರ್‌ಗಳೊಂದಿಗೆ ನಂಬರ್ ಪ್ಲೇಟ್‌ಗಳನ್ನು ಮರೆಮಾಡುತ್ತಾರೆ, ಪ್ಲೇಟ್‌ಗಳನ್ನು ಮಡಚುತ್ತಾರೆ ಮತ್ತು ಮಡಚಬಹುದಾದ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಷಯುಕ್ತ/ಜಾರಿಯಲ್ಲಿಲ್ಲದ ನಂಬರ್ ಪ್ಲೇಟ್‌ಗಳನ್ನು ಸಂಚಾರ ಉಲ್ಲಂಘನೆ, ರಸ್ತೆ ಅಪಘಾತ ಪ್ರಕರಣಗಳಲ್ಲಿ ಮತ್ತು ಅಪರಾಧಗಳನ್ನು ಎಸಗಲು ಬಳಸಲಾಗುತ್ತದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT