ದಿನೇಶ್ ಗುಂಡೂರಾವ್  
ರಾಜ್ಯ

ನಗರದಲ್ಲಿ ಡೆಂಗ್ಯೂ ಹೆಚ್ಚಳ: ಸೊಳ್ಳೆಗಳ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಸಾಧನಗಳ ಅಳವಡಿಕೆ

ಓವಿ ಟ್ರ್ಯಾಪ್ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಚಾಲನೆ ನೀಡಿದರು.

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಜನವರಿಯಿಂದ 10,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಓವಿ ಟ್ರ್ಯಾಪ್ ಅಳವಡಿಕೆಗೆ ಮುಂದಾಗಿದೆ.

ಓವಿ ಟ್ರ್ಯಾಪ್ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಓವಿ ಟ್ರ್ಯಾಪ್ ಸಾಧನವು ಸೊಳ್ಳೆಗಳು, ಸೊಳ್ಳೆಗಳ ಮೊಟ್ಟೆ ನಾಶಪಡಿಸಲಿದೆ. ಪ್ರಾಯೋಗಿಕವಾಗಿ ಬಿನ್ನಿಪೇಟೆ ವಾರ್ಡ್‌ನ ಗೋಪಾಲಪುರದಲ್ಲಿ 120 ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದೆ. ಇದು ಕೆಲಸ ಮಾಡಿದ್ದೇ ಆದರೆ, ಡೆಂಗ್ಯೂ, ಮಲೇರಿಯಾ, ಝೀಕಾದಂತಹ ಸಾಂಕ್ರಾಂಮಿಕ ರೋಗಗಳನ್ನೂ ನಿಯಂತ್ರಣಕ್ಕೆ ತರಬಹುದು ಎಂದು ಹೇಳಿದರು.

ಮುಂಬೈನ ಧಾರವಿ ಕೊಳಗೇರಿ ಪ್ರದೇಶದಲ್ಲೂ ಈ ಪ್ರಯೋಗ ನಡೆಯುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲೂ ಪ್ರಯೋಗ ಆರಂಭಿಸಲಾಗಿದೆ. ಉತ್ತಮ ಫಲಿತಾಂಶ ದೊರೆತರೆ ರಾಜ್ಯದಾದ್ಯಂತ ಓವಿ ಟ್ರ್ಯಾಪ್ ಸಾಧನಗಳನ್ನ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಬಜೆಟ್ ನಲ್ಲೂ ಹಣವನ್ನು ಮೀಸಲಿಡಲಾಗುವುದು. ಸಿಎಸ್ಆರ್ ಅಡಿಯಲ್ಲಿ ಹಣ ಕ್ರೋಢೀಕರಿಸುವ ಕುರಿತಂತೆಯೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಈ ನಡುವೆ ಪ್ರತಿ ಬಯೋ ಟ್ರ್ಯಾಪ್‌ಗೆ 300 ರಿಂದ 400 ರೂ. ವೆಚ್ಚವಾಗುತ್ತದೆ ಎಂದು ಬಿಬಿಎಂಪ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಯೋ ಟ್ರ್ಯಾಪ್ ಸಾಧನ ಎಂದರೇನು?

ಇದೊಂದು ಮಡಿಕೆ ಆಕಾರದ ಸಾಧನವಾಗಿದ್ದು, ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಬೆರಸಲಾಗುತ್ತದೆ. ಈ ರಾಸಾಯನಿಕ ಮಿಶ್ರಣವು ಸೊಳ್ಳೆಗಳನ್ನ ಆಕರ್ಷಿಸಿ ಸಾಯಿಸುತ್ತದೆ. ಅಲ್ಲದೆ, ಈಡಿಸ್ ಸೊಳ್ಳೆಗಳು ಹಾಗೂ ಸೊಳ್ಳೆಗಳ ಮೊಟ್ಟೆಗಳನ್ನೂ ನಾಶಪಡಿಸುತ್ತದೆ. ಬಯೋ ಟ್ರ್ಯಾಪ್ ಬಳಕೆಯಿಂದ ಶೇ.60 ರಷ್ಟು ಸೊಳ್ಳೆಗಳ ನಿಯಂತ್ರಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಕ್ರಮ ನಡೆದರೆ ಮಧ್ಯಪ್ರವೇಶಿಸುತ್ತೇವೆ- ಸುಪ್ರೀಂ ಕೋರ್ಟ್: ಬಿಹಾರ SIR ವಿರುದ್ಧದ ಅರ್ಜಿಗಳ ಅಂತಿಮ ವಿಚಾರಣೆ ಅಕ್ಟೋಬರ್ 7ಕ್ಕೆ ನಿಗದಿ

ಜಾರ್ಖಂಡ್‌: ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಸೇರಿ ಮೂವರ ಹತ್ಯೆ!

ದೆಹಲಿ: ಬೈಕ್​ಗೆ BMW ಕಾರು ಡಿಕ್ಕಿ; ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಸಾವು, ಪತ್ನಿಗೆ ಗಾಯ

Waqf Amendment Act: ಕೆಲವೊಂದು ಅಂಶಗಳಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ 'ಮಧ್ಯಂತರ ಆದೇಶ' ಪ್ರಕಟ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: PIL ವಜಾಗೊಳಿಸಿದ ಹೈಕೋರ್ಟ್; ಪ್ರತಾಪ್ ಸಿಂಹಗೆ ಭಾರಿ ಹಿನ್ನಡೆ!

SCROLL FOR NEXT