ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ನಕಲಿ ಕಂಪನಿ ಸೃಷ್ಟಿಸಿ 15.5 ಲಕ್ಷ ರುಪಾಯಿ ವಂಚನೆ; ಸೈಬರ್ ಕಳ್ಳನ ಬಂಧನ

ಆರೋಪಿಯು ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪೆನಿಗೆ 15.58 ಲಕ್ಷ ರೂ. ವಂಚನೆ ಮಾಡಿದ್ದ. ಮಾಹಿತಿ ಮೇರೆಗೆ ಹರಿಯಾಣದ ಗುರ್‌ಗಾವ್‌ನಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.

ಬೆಂಗಳೂರು: ಪೇಮೆಂಟ್ ಗೇಟ್ ವೇ ಪ್ಲಾಟ್‌ ಫಾರ್ಮ್ ನೀಡುವ ಕಂಪೆನಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದ ಸೈಬರ್ ಕಳ್ಳನನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಿತೀಶ್ ಯಾದವ್ (26) ಬಂಧಿತ ಆರೋಪಿ.

ಆರೋಪಿಯು ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪೆನಿಗೆ 15.58 ಲಕ್ಷ ರೂ. ವಂಚನೆ ಮಾಡಿದ್ದ. ಮಾಹಿತಿ ಮೇರೆಗೆ ಹರಿಯಾಣದ ಗುರ್‌ಗಾವ್‌ನಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿಯು ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಪೇಮೆಂಟ್ ಗೇಟ್ ವೇ ವೇದಿಕೆ ಸೃಷ್ಟಿಸಿ ಸೇವೆ ಸಲ್ಲಿಸುತ್ತಿದೆ. ಈ ಕಂಪನಿ ಜೊತೆಗೆ ಆರೋಪಿಗಳು 'ಸಿವೈಸಿಎನ್' ಎಂಬ ನಕಲಿ ಕಂಪನಿ ಹೆಸರನ್ನು ನೋಂದಣಿ ಮಾಡಿಸಿದ್ದರು. ಐಐಟಿ, ಜೆಇಇ ಮತ್ತು ನೀಟ್‌ಗೆ ಆನ್‌ಲೈನ್‌ನಲ್ಲಿ ತರಗತಿ ಮತ್ತು ಪಠ್ಯಪುಸ್ತಕ ಒದಗಿಸುವುದಾಗಿ ಹೇಳಿಕೊಂಡಿದ್ದರು.

ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಕೋಚಿಂಗ್ ಬಗ್ಗೆ ಜಾಹೀರಾತು ನೀಡಿದ್ದರು. ಮತ್ತೆ ವಿದ್ಯಾರ್ಥಿಗಳ ಹೆಸರಿನಲ್ಲಿ ಸಿವೈಸಿಎನ್‌ನಲ್ಲಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿ 2 ಲಕ್ಷ ರೂ. ಶುಲ್ಕ ತುಂಬಿದ್ದರು. ಹಣ ಪಡೆದ ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ತನಗೆ ಬಂದ ಹಣವನ್ನು ಆರೋಪಿಗಳ ಕಂಪನಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. ಇದೆ ರೀತಿಯಾಗಿ, ಆರೋಪಿಗಳೇ ನಾನಾ ಹೆಸರಿನಲ್ಲಿ ವಿದ್ಯಾರ್ಥಿಗಳೆಂದು ಸುಳ್ಳು ಹೇಳಿ ನೋಂದಣಿ ಮಾಡಿಕೊಂಡು ಹಣ ತುಂಬುತ್ತಿದ್ದರು.

ಪೇಮೆಂಟ್ ಗೇಟ್ ವೇ ಕಂಪನಿ ಒಪ್ಪಂದದ ಪ್ರಕಾರ, ಕಮಿಷನ್ ಹಿಡಿದು ವಾಪಸ್ ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿತ್ತು. ಇದಾದ ಮೇಲೆ ಆರೋಪಿಗಳು ವಿದ್ಯಾರ್ಥಿಗಳ ಹೆಸರಿನಲ್ಲಿ ದೂರು ಸಲ್ಲಿಸುತ್ತಿದ್ದರು. ಐಐಟಿ, ಜೆಇಇ ಮತ್ತು ನೀಟ್ ಸಂಬಂಧ ಯಾವುದೇ ಆನ್‌ಲೈನ್ ತರಗತಿ ನಡೆಸುತ್ತಿಲ್ಲ. ನಮಗೆ ಪಠ್ಯಪುಸ್ತಕಗಳು ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸುತ್ತಿದ್ದರು. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ನೇರ ಗ್ರಾಹಕರ (ವಿದ್ಯಾರ್ಥಿಗಳು) ಬ್ಯಾಂಕ್ ಖಾತೆಗೆ ರೀಫಂಡ್ ಮಾಡಿ ಬಳಿಕ ತಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಆರೋಪಿಗಳು, ಕಂಪನಿಗೆ ರೀಫಂಡ್ ಮಾಡುವಂತೆ ಸೂಚಿಸುತ್ತಿದ್ದರು. ಆದರೆ, ಒಪ್ಪಂದದ ಪ್ರಕಾರ ಹಣ ಕಳುಹಿಸದೆ ಆರೋಪಿಗಳು ವಂಚನೆ ಮಾಡುತ್ತಿದ್ದರು.

ಇದೇ ರೀತಿಯಾಗಿ 8 ವಿದ್ಯಾರ್ಥಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ರಿಫಂಡ್ ಮಾಡಿಕೊಂಡಿದ್ದರು. ಈ ಬಗ್ಗೆ ಅನುಮಾನ ಬಂದು ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ದೂರು ಸಲ್ಲಿಸಿತ್ತು. ಅಲ್ಲಿಯವರೆಗೆ ಕಂಪನಿ 15.5ಲಕ್ಷ ರು ಹಣ ಕಳೆದು ಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಮಾಜಿಕ-ಆರ್ಥಿಕ ಸಮೀಕ್ಷೆ ಯಾರ ವಿರುದ್ಧವೂ ಅಲ್ಲ; ಬಿಜೆಪಿಯದ್ದು ಮನುವಾದಿ ಮನಸ್ಥಿತಿ

ಪಂದ್ಯದ ಮಧ್ಯೆ ರಿಷಬ್ ಪಂತ್ ತಂತ್ರ ಬಳಸಲು ಹೋಗಿ ತಿರುಗುಬಾಣ: Pak ಕುತಂತ್ರ ಕಂಡ ತಕ್ಷಣ ರಣರಂಗಕ್ಕಿಳಿದ ಗಂಭೀರ್!

ಸಹಜ ಸ್ಥಿತಿಗೆ ಮರಳುವವರೆಗೆ ಮಾತುಕತೆ ಇಲ್ಲ; ವಾಂಗ್‌ಚುಕ್ ಬೇಷರತ್ ಬಿಡುಗಡೆಗೆ ಕೆಡಿಎ ಆಗ್ರಹ

Asia Cup final:'ತಲೆಹರಟೆ' ಪಾಕ್ ಆಟಗಾರರು, ಬ್ಯಾಟಿನಿಂದಲೇ ಸದ್ದಡಗಿಸಿದ್ದೇನೆ- ತಿಲಕ್ ವರ್ಮಾ Video!

Asia Cup 2025: ಫೈನಲ್ ಟ್ರೋಫಿ ವಿವಾದ; ICC ಟೂರ್ನಿಗಳಿಂದ 'ಭಾರತ ಅಮಾನತಿ'ಗೆ ಪಾಕ್ ಒತ್ತಾಯ

SCROLL FOR NEXT