ಸಚಿವ ಈಶ್ವರ್ ಖಂಡ್ರೆ 
ರಾಜ್ಯ

ದೀರ್ಘಾವಧಿ ಗುತ್ತಿಗೆ ಬಾಕಿ ಉಳಿದಿರುವ ಅತಿಕ್ರಮಿತ ಅರಣ್ಯ ಭೂಮಿ ವಶಕ್ಕೆ: ಸಚಿವ ಈಶ್ವರ್ ಖಂಡ್ರೆ

ಅರಣ್ಯ ಭೂಮಿ ರಕ್ಷಣೆಗೆ ಹಲವು ಹಾಗೂ ಕಠಿಣ ಕಾನೂನುಗಳಿದ್ದರೂ ಅತಿಕ್ರಮಣ ಹಾಗೂ ದೀರ್ಘಾವಧಿ ಗುತ್ತಿಗೆ ಬಾಕಿ ಇರುವ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.

ಬೆಂಗಳೂರು: ದೀರ್ಘಾವಧಿ ಗುತ್ತಿಗೆ ಅವಧಿಗೆ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಗುತ್ತಿಗೆ ಪಾವತಿಸದ ಕಂಪನಿಗಳು ಮತ್ತು ಏಜೆನ್ಸಿಗಳ ಗುತ್ತಿಗೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಈಶ್ವರ್ ಬಿ ಖಂಡ್ರೆ ಅವರು ಶನಿವಾರ ಹೇಳಿದರು.

ನಗರದಲ್ಲಿ ನಡೆದ ‘ಮೈಫಾರೆಸ್ಟ್’ 60ನೇ ವರ್ಷದ ಸಂಭ್ರಮಾಚರಣೆ ಹಾಗೂ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ರಕ್ಷಣೆಗೆ ಹಲವು ಹಾಗೂ ಕಠಿಣ ಕಾನೂನುಗಳಿದ್ದರೂ ಅತಿಕ್ರಮಣ ಹಾಗೂ ದೀರ್ಘಾವಧಿ ಗುತ್ತಿಗೆ ಬಾಕಿ ಇರುವ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ ಎಂದು ಹೇಳಿದರು.

ನಾವು ಭೂಮಿಯ ಸ್ವರೂಪವನ್ನು ಬದಲಾಯಿಸಲಾಗುವುದಿಲ್ಲ. ಗುತ್ತಿಗೆ ಅವಧಿಯಲ್ಲಿ ಭೂ ಬಳಕೆಯನ್ನು ಬದಲಾಯಿಸಬಾರದು ಎಂಬುದು ಎಲ್ಲಾ ಗುತ್ತಿಗೆ ಒಪ್ಪಂದಗಳಲ್ಲಿನ ಇರುವ ಪ್ರಮುಖ ಷರತ್ತಾಗಿದೆ. ಅರಣ್ಯಾಧಿಕಾರಿಗಳು ಅರಣ್ಯ ಹೊದಿಕೆ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದ್ದು, ಅರಣ್ಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ, ಅರಣ್ಯ ಹೊದಿಕೆ ಹೆಚ್ಚಳಕ್ಕೆ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಬೇಕು. ಹಾಗಾದರೆ ಮಾತ್ರ ಕೆಲವೇ ವರ್ಷದಲ್ಲಿ ರಾಜ್ಯದ ಅರಣ್ಯ ಹೊದಿಕೆ ಶೇ.33ರಷ್ಟು ಹೆಚ್ಚಳವಾಗಲಿದೆ. ಸರ್ಕಾರ ಗುತ್ತಿಗೆ ಪಡೆದಿರುವ ಹಾಗೂ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಶ್ರಮಿಸುತ್ತಿದ್ದು, ಹೊಸದಾಗಿ ಒಂದು ಇಂಚು ಭೂಮಿಯನ್ನೂ ಅತಿಕ್ರಮಿಸಲು ಬಿಡುವುದಿಲ್ಲ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು., ಸುಮಾರು 7,000 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದ್ದು, ಸರ್ಕಾರಕ್ಕೆ 2000 ಕೋಟಿ ರೂ. ಹಣ ಬರಬೇಕಿದೆ. ಕಾಫಿ ಮತ್ತು ರಬ್ಬರ್ ತೋಟಗಳಿಗೆ ಕೊಡಗು ಮತ್ತು ಬಿಆರ್‌ಟಿ ಅರಣ್ಯ ವಿಭಾಗಗಳಲ್ಲಿ ದೊಡ್ಡ ಮಟ್ಟದ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಭೂಮಿಯನ್ನು ಗುತ್ತಿಗೆ ಪಡೆದಿದ್ದವರು, ಇದೀಗ ಭೂಮಿಯ ಮಾಲೀಕರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕೆಲವರು ಗುತ್ತಿಗೆ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದು, ಮರ ಮತ್ತು ಕಾಫಿ ತೋಟಗಳಲ್ಲಿ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳನ್ನು ನಿರ್ಮಾಣ ಮಾಡಿದ್ದಾರೆ. ಗುತ್ತಿಗೆ ಪಡೆದ ಭೂಮಿಯನ್ನು ಇತರರಿಗೆ ಮಾರಿದ್ದಾರೆ. ಆರ್ಥಿಕ ನಷ್ಟವನ್ನು ಉಲ್ಲೇಖಿಸಿ ಭೂಮಿಯನ್ನು ಇತರರಿಗೆ ಗುತ್ತಿಗೆ ನೀಡಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT