ಬಿಎಂಟಿಸಿ ಬಸ್ಸು (ಪ್ರಾತಿನಿಧಿಕ ಚಿತ್ರ) 
ರಾಜ್ಯ

25 ರಷ್ಟು ಬಿಎಂಟಿಸಿ ಬಸ್‌ಗಳಿಗೆ ‘ವಯಸ್ಸಾಗಿದೆ’: ಸಿಎಜಿ ವರದಿ

BMTC ಯ ಸುಮಾರು ಶೇ. 25 ರಷ್ಟು ಬಸ್‌ಗಳ ಅವಧಿ ಮೀರಿದ್ದು, ನಿಯಮಗಳ ಪ್ರಕಾರ ಅವು ಬಳಕೆಗೆ ಯೋಗ್ಯವಲ್ಲ ಎಂದು ಹೇಳಲಾಗಿದೆ.

ಬೆಳಗಾವಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯು ಅವಧಿ ಮೀರಿದ ಮತ್ತು ‘ವಯಸ್ಸಾದ’ ಬಸ್‌ಗಳನ್ನು ಓಡಿಸುತ್ತಿದೆ ಎಂದು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಸಿಎಜಿ) ವರದಿ ಬಹಿರಂಗಪಡಿಸಿದೆ.

BMTC ಯ ಸುಮಾರು ಶೇ. 25 ರಷ್ಟು ಬಸ್‌ಗಳ ಅವಧಿ ಮೀರಿದ್ದು, ನಿಯಮಗಳ ಪ್ರಕಾರ ಅವು ಬಳಕೆಗೆ ಯೋಗ್ಯವಲ್ಲ ಎಂದು ಹೇಳಲಾಗಿದೆ.

2017-18 ಮತ್ತು 2021-22 ರ ಅವಧಿಯಲ್ಲಿ BMTC ಬಸ್ ಗಳ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ ನಡೆಸಿ ಈ ವರದಿ ನೀಡಲಾಗಿದೆ. ಈ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಶೇ. 12.60 ರಿಂದ ಶೇ. 29.08 ರಷ್ಟು ಬಸ್ ಗಳು ಅವಧಿ ಮೀರಿದ್ದಾಗಿದ್ದವು. 841 ರಿಂದ 1,909 ಸಾಮಾನ್ಯ ಬಸ್‌ಗಳು ಅವಧಿ ಮೀರಿದೆ ಎಂದು ಸಿಎಜಿ ವರದಿ ಹೇಳಿದೆ.

ಬಿಎಂಟಿಸಿ ಘಟಕಗಳಲ್ಲಿ ಬಸ್‌ಗಳ ಸಮರ್ಪಕ ನಿರ್ವಹಣೆ ಮಾಡದ ಕಾರಣದಿಂದಾಗಿ ಬಸ್‌ಗಳ ಎಂಜಿನ್‌ಗಳು, ಬ್ಯಾಟರಿ, ಬಿಡಿಭಾಗಗಳ ಕಾರ್ಯಕ್ಷಮತೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೆಲ ಬಿಡಿಭಾಗಗಳ ಖರೀದಿ, ಎಂಜಿನ್‌ಗಳು, ಇಂಧನ ಇಂಜೆಕ್ಷನ್‌ ಪಂಪ್‌ಗಳ ಮರುಪರಿಶೀಲನೆಗಾಗಿ ಕೆಎಸ್ಸಾರ್ಟಿಸಿಯನ್ನು ಅವಲಂಬಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ವರದಿಯಲ್ಲಿ ಬಿಎಂಟಿಸಿ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳ ಕುರಿತಂತೆ ಹಲವು ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಅದರಂತೆ ನಿಗಮದ ಬಸ್‌ಗಳ ಪ್ರತಿ ಕಿಮೀಗಳಿಕೆಯು ವೆಚ್ಚಕ್ಕಿಂತ ಕಡಿಮೆಯಿದೆ. ಅದರಂತೆ 2017-18ರಲ್ಲಿ ಶೇ. 133.59ರಷ್ಟಿದ್ದ ನಿರ್ವಹಣಾ ವೆಚ್ಚದ ಅನುಪಾತ ಶೇ. 133.59 ರಿಂದ 2021-22ಕ್ಕೆ ಶೇ. 222.62 ಹೆಚ್ಚಳವಾಯಿತು. ಅದರಲ್ಲಿ ಸಿಬ್ಬಂದಿ ವೆಚ್ಚ ಶೇ. 60, ಇಂಧನ ವೆಚ್ಚ ಶೇ. 27ರಷ್ಟಾಗಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT