ರಾಯಚೂರು: ಅತ್ಯಾಚಾರಕ್ಕೆ ನಿರಾಕರಿಸಿದ ಸೊಸೆಯನ್ನೇ ಕಾಮುಕ ಮಾವ ಕೊಂದು ಹಾಕಿರುವ ಘಟನೆ ರಾಯಚೂರಿನಲ್ಲಿ ವರದಿಯಾಗಿದೆ.
ರಾಯಚೂರಿನ ಜುಲಮಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 27 ವರ್ಷದ ದುಳಮ್ಮ ಎಂದು ಗುರುತಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಮಾವನನ್ನು ಸಂತುಳ್ಳ ರಾಮಲಿಂಗಯ್ಯ ಕುಂಡಫಾಲಯ್ಯ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಮಾವ ರಾಮಲಿಂಗಯ್ಯನಿಗೆ ಮೊದಲಿನಿಂದಲೂ ಸೊಸೆ ಮೇಲೆ ಕಣ್ಣಿತ್ತು. ಈ ಹಿಂದೆ ಎರಡ್ಮೂರು ಬಾರಿ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವಿಚಾರ ಕುಟುಂಬಸ್ಥರಿಗೆ ಮತ್ತು ಗ್ರಾಮಸ್ಥರಿಗೆ ತಿಳಿದು ಗ್ರಾಮದ ಹಿರಿಯರು, ಕುಟುಂಬಸ್ಥರು ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು.
ಆಗ ಸುಮ್ಮನ್ನಿದ್ದ ರಾಮಲಿಂಗಯ್ಯ ಸಮಯಕ್ಕಾಗಿ ಕಾಯುತ್ತಿದ್ದ. ಹಿಂದಿನ ಘಟನೆಯಿಂದ ಬುದ್ಧಿ ಕಲಿಯದ ಕಾಮುಕ ಮಾವ ರಾಮಲಿಂಗಯ್ಯ, ಮನೆಯಲ್ಲಿ ಯಾರು ಇಲ್ಲದ ವೇಳೆ ಮತ್ತೆ ಸೊಸೆ ದುಳ್ಳಮ್ಮನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಇದಕ್ಕೆ ಸೊಸೆ ದುಳಮ್ಮ ನಿರಾಕರಿಸಿದಾಗ ಆಕೆಯ ತಲೆಗೆ ಸಲಾಕೆಯಿಂದ ಬಲವಾಗಿ ಹೊಡೆದು ಆಕೆ ಸತ್ತ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಕುರಿಕಾಯಲು ಹೋಗಿದ್ದ ಪತಿ
ಬೆಳಿಗ್ಗೆ ಮಹಿಳೆ ದುಳಮ್ಮ ಪತಿ ಕುರಿ ಕಾಯಲು ಹೋದಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವ ಸಂತುಳ್ಳ ರಾಮಲಿಂಗಯ್ಯ ಕುಂಡಫಾಲಯ್ಯ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಒಪ್ಪದ ಕಾರಣಕ್ಕೆ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೃತ ಮಹಿಳೆಗೆ ಒಂದು ಹೆಣ್ಣು ,ಗಂಡು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ(ಡಿಸೆಂಬರ್ 14) ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ವೇಳೆ ಧುಳಮ್ಮನ ಮೇಲೆ ರಾಮಲಿಂಗಯ್ಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೊಸೆ ಮಾವನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಹೋಗಿ ಸಲಿಕೆಯಿಂದ ತಲೆಗೆ ಒಡೆದು ಪರಾರಿಯಾಗಿದ್ದಾನೆ. ಪರಿಣಾಮ ಸೊಸೆ ಧೂಳಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯರಗೇರಾ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು,ಇದೀಗ ನಾಪತ್ತೆಯಾಗಿರುವ ಆರೋಪಿ ರಾಮಲಿಂಗಯ್ಯ ಪತ್ತೆಗೆ ಬಲೆ ಬೀಸಿದ್ದಾರೆ.