ಬೂದಿದಿಬ್ಬ ನಾಶಗೊಂಡಿರುವುದು. 
ರಾಜ್ಯ

ಬಳ್ಳಾರಿ: 5,000 ವರ್ಷಗಳಷ್ಟು ಹಳೆಯ ನವಶಿಲಾಯುಗದ 'ಬೂದಿ ದಿಬ್ಬ' ನಾಶ...!

ಬಳ್ಳಾರಿ ತಾಲ್ಲೂಕಿನ ಮೋಕಾ ಹೋಬಳಿಯ ಸಿರಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸರ್ವೆ ಸಂಖ್ಯೆ 160(ಬಿ)ರ ಭೂಮಿಯಲ್ಲಿ ಬೂದಿದಿಬ್ಬ ಇತ್ತು.

ಬಳ್ಳಾರಿ: ಬಳ್ಳಾರಿ ನಗರದ ಹೊರವಲಯದ ಸಂಗನಕಲ್ಲು ಗ್ರಾಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಂರಕ್ಷಿತ, ಸುಮಾರು 5,000 ವರ್ಷಗಳಷ್ಟು ಹಳೆಯದಾದ ನವಶಿಲಾಯುಗದ 'ಬೂದಿ ದಿಬ್ಬ' ಬಹುತೇಕ ನಾಶಗೊಂಡಿದೆ.

ಬಳ್ಳಾರಿ ತಾಲ್ಲೂಕಿನ ಮೋಕಾ ಹೋಬಳಿಯ ಸಿರಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸರ್ವೆ ಸಂಖ್ಯೆ 160(ಬಿ)ರ ಭೂಮಿಯಲ್ಲಿ ಬೂದಿದಿಬ್ಬ ಇತ್ತು.

ಈ ಪಟ್ಟಾ ಭೂಮಿಯು ವೆಂಕಟೇಶ್ವರಲು ಮತ್ತು ವೆಂಕಟರಾಯುಡು ಎಂಬುವವರ ಜಂಟಿ ಒಡೆತನದಲ್ಲಿದೆ. ಜಮೀನಿನಲ್ಲಿದ್ದ ಗುಂಡಿಯನ್ನು ಮುಚ್ಚಿ ಜಮೀನು ಸಮತಟ್ಟು ಮಾಡಲು ದಿಬ್ಬವನ್ನು ನಾಶ ಮಾಡಲಾಗಿದೆ. ಈ ಸಂಬಂಧ ಇದೀಗ ಸ್ಥಳೀಯರು ಖಾಸಗಿ ಡೆವಲಪರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ದಿಬ್ಬವನ್ನು ಹಾಳು ಮಾಡಿರುವ ಖಾಸಗಿ ಡೆವಲಪರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಸಂಗನಕಲ್ಲು ಬೂದಿದಿಬ್ಬ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಜಿಲ್ಲಾಡಳಿತವು ಈ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿತ್ತು. ಆದರೂ, 12,000 ಚದರ ಅಡಿ ಪ್ರದೇಶವನ್ನು ನಾಶಪಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ಇದರ ಬೆನ್ನಲ್ಲೇ ಜಿಲ್ಲಾಡಳಿತ ಆಡಳಿಯು ಸ್ಥಳ ಪರಿಶೀಲನೆಗೆ ತಂಡವನ್ನು ಕಳುಹಿಸಿದ್ದು, ಘಟನೆಯ ಹಿಂದಿರುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ.

ಬಳ್ಳಾರಿಯ ವನ್ಯಜೀವಿ ತಜ್ಞ ಸಂತೋಷ್ ಮಾರ್ಟಿನ್ ಅವರಪು ಮಾತನಾಡಿ, 12,000 ಚದರ ಅಡಿ ಜಾಗ ನಾಶವಾಗಿರುವುದು ಆಘಾತಕಾರಿ ವಿಚಾರವಾಗಿದೆ. ಭೂ ದಾಖಲೆಗಳು ಖಾಸಗಿಯವರ ಹೆಸರಿನಲ್ಲಿದ್ದರೂ, ಭೂಮಿಯನ್ನು ರಾಜ್ಯ ಎಎಸ್ಐ ಮತ್ತು ಜಿಲ್ಲಾಡಳಿತ ನಿರ್ವಹಿಸುತ್ತಿತ್ತು. ಖಾಸಗಿ ವ್ಯಕ್ತಿಗಳ ದುರಾಸೆಯಿಂದಾಗಿ ಬೂದಿದಿಬ್ಬ ನಾಶವಾಗಿದೆ ಎಂದು ಹೇಳಿದ್ದಾರೆ.

ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬೂದಿದಿಬ್ಬ ಸ್ಥಳದ ಮಹತ್ವ ತಿಳಿಸುವ ಫಲಕಗಳ ಹಾಕುವಂತೆ ಹಾಗೂ ಈ ಪ್ರದೇಶವನ್ನು ಸಂರಕ್ಷಿಸಲು ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಘಟನೆಗೆ ಕಾರಣರಾದವರ ವಿರುದ್ಧ ದೂರು ದಾಖಲಿಸುವಂತೆ ಸ್ಥಳೀಯ ತಹಶೀಲ್ದಾರ್‌'ಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT