ಹೊಸಪೇಟೆ: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು 90 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿರುವುದಾಗಿ ದೂರು ನೀಡಿದ ನಂತರ ಪೊಲೀಸರು ಬಸ್ಸಿನಲ್ಲಿದ್ದ 73 ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದಾರೆ. ಬಸ್ಸಿನಲ್ಲಿ ಯಾರೋ ತನ್ನ ಚಿನ್ನದ ಸರ ಎಗರಿಸಿದ್ದು, ಪೊಲೀಸ್ ಠಾಣೆ ಬಳಿಗೆ ಬಸ್ ಚಲಾಯಿಸಿಕೊಂಡು ಹೋಗುವಂತೆ ಮಹಿಳೆ ಚಾಲಕನಿಗೆ ಹೇಳಿದ್ದಾರೆ. ಮಹಿಳೆ ಹೊಸಪೇಟೆಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಆಕೆಯ ದೂರಿನ ಮೇರೆಗೆ ಬಸ್ ಚಾಲಕ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದು, ಪೊಲೀಸರು ಎಲ್ಲಾ ಪ್ರಯಾಣಿಕರ ಸಾಮಾನುಗಳನ್ನು ಹುಡುಕಿದರೂ ಕದ್ದ ಚಿನ್ನ ಪತ್ತೆಯಾಗಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗಿದೆ ಎಂದು ಪ್ರಯಾಣಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯಾಣಿಕರನ್ನು ಸಮಾಧಾನಪಡಿಸಿ ಅದೇ ಬಸ್‌ನಲ್ಲಿ ಕೊಪ್ಪಳಕ್ಕೆ ವಾಪಸ್ ಕಳುಹಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಇಷ್ಟೊಂದು ಪ್ರಯಾಣಿಕರನ್ನು ಠಾಣೆಗೆ ಕರೆತರುತ್ತಿದ್ದುದ್ದನು ನೋಡಿ ದಿಗ್ರ್ಬಮೆಯಾಗಿತ್ತು. ಬಸ್ ಸಿಬ್ಬಂದಿ ಸೇರಿದಂತೆ ಎಲ್ಲಾ 73 ಪ್ರಯಾಣಿಕರ ಬ್ಯಾಗ್‌ಗಳನ್ನು ಹುಡುಕಲು ಪ್ರಾರಂಭಿಸಿದ್ದೇವು. ಆದರೆ ಯಾವುದೇ ಚಿನ್ನ ಕಂಡುಬರಲಿಲ್ಲ. ಹುಡುಕಾಟದ ನಂತರ, ಕೆಲವು ಪ್ರಯಾಣಿಕರು ವಿರೋಧಿಸಿದರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಅವರನ್ನು ಸಮಾಧಾನಪಡಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಬಸ್‌ಗಳಲ್ಲಿ ಪ್ರಯಾಣಿಸುವಾಗ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯದಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.