ಬಾಗಲಕೋಟೆ: ಸಿಟಿ ರವಿ ಅವರನ್ನು ಪೊಲೀಸರು ಫೇಕ್ ಎನ್ಕೌಂಟರ್ ಮಾಡುವ ವಿಚಾರ ಹೊಂದಿದ್ದರು ಎಂದೆನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಅವಕಾಶ ಸಿಕ್ಕರೆ ಸಿ.ಟಿ.ರವಿ ಮುಗಿಸಬೇಕೆಂಬ ಉದ್ದೇಶವಿತ್ತು ಅನಿಸುತ್ತೆ. ಆದರೆ, ಸರಿಯಾದ ಅವಕಾಶ ಸಿಕ್ಕಿಲ್ಲ. ನಮ್ಮ ಎಂಎಲ್ಸಿ ಕೇಶವ ಪ್ರಸಾದ್ ಕೂಡ ಅವರ ಹಿಂದೆ ಇದ್ದರು. ನಮಗೆ ಸಿ.ಟಿ.ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು. ಕೆಲವು ಮಾಧ್ಯಮದವರು ಕೂಡ ಬೆನ್ನುಹತ್ತಿದ್ರು, ಧನ್ಯವಾದಗಳು ಎಂದು ಹೇಳಿದರು.
ಅಂತಹ ರಾತ್ರಿಯೊಳಗೆ ಬೆಳಗಾವಿ ಮಾಧ್ಯಮದವರು ಪೊಲೀಸರ ಬೆನ್ನು ಹತ್ತಿದ್ದರು. ವಿಡಿಯೋ ಮಾಡುತ್ತಿದ್ದರು ಲೊಕೇಶನ್ ಹಾಕುತ್ತಿದ್ದರು. ಇಲ್ಲದೆ ಹೋಗಿದ್ದರೆ ಸಿಟಿ ಅವರನ್ನು ಫೇಕ್ ಎನ್ಕೌಂಟರ್ ಮಾಡುವಂತ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಎಂದಿಸುತ್ತದೆ ಎಂದು ತಿಳಿಸಿದರು.
ಸಿಟಿ ರವಿ ಅವರ ಮೇಲೆ ಕಾನೂನು ವಿರೋಧಿಯಾಗಿ ಯಾವುದೇ ರೀತಿಯ ಪ್ರೋಸಿಜರ್ ಪಾಲೋ ಮಾಡದೇ ದೂರಿನಲ್ಲಿ ಸಹಿ ಮಾಡದೇ ಅತ್ಯಂತ ಕ್ಷುಲಕ್ಕವಾಗಿ ವರ್ತಿಸಿ ಅವರ ಹಲ್ಲೆ ಮಾಡಿದ್ದಾರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಸರ್ಕಾರದ ಕೈಗೊಂಬೆಗಳಾಗಿ ವರ್ತಿಸಿದ ಅಧಿಕಾರಿಗಳ ಮೇಲೆ ತಕ್ಕದಾದ ಪಾಠ ಕಲಿಸಲು ನ್ಯಾಯಾಲಯದ ಮೊರೆ ಹೋಗುತ್ತೇವೆ. ಶಾಸಕ ರವಿ ಅವರು ಆ ರೀತಿಯ ಪದ ಬಳಸಿದ್ದಾರೋ ಇಲ್ಲವೋ ಎಂಬುದನ್ನು ಸಭಾಪತಿಗಳು ತಿರ್ಮಾನಿಸುತ್ತಾರೆ. ಸಭಾಪತಿಗಳ ತಿರ್ಮಾನಕ್ಕೆ ಎಲ್ಲರೂ ಬದ್ದರಿರಬೇಕು ಎಂದರು.
ಯಾವುದೋ ಒಂದು ರಿಕಾರ್ಡ ತೋರಿಸಿ ದೂರು ದಾಖಲಿಸಿದ್ದಾರೆ. ಇಂತಹ ಪ್ರಕರಣಗಳ ಕುರಿತಾಗಿ ಸುಪ್ರೀ ಕೋರ್ಟ್ ತೀರ್ಪುಗಳಿವೆ. ಕೌನ್ಸಿಲ್ ಹಾಲ್‌ನಲ್ಲಿ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ. ಸ್ಪೀಕರ್ ಅನುಮತಿ ಇಲ್ಲದೇ ಶಾಸಕರನ್ನು ಬಂಧಿಸಲು ಬರುವುದಿಲ್ಲ. ಇದೆಲ್ಲ ಇದ್ದರೂ ಕೂಡ ಗುಂಡಾರಾಜ್ಯವನ್ನಾಗಿ ಮಾಡಿ ಸಿಟಿ ರವಿ ಅವರನ್ನ ಬಂಧಿಸಿ ಅವರ ಮೇಲೆ ಹಲ್ಲೆ ಮಾಡುವಂತಹ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಅವರನ್ನ ಏಕಾಂತ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇದರ ಹಿಂದೆ ಒಂದು ದುರುದ್ದೇಶ ಇದೆ ಎಂದು ಆರೋಪಿಸಿದರು.