ಪ್ರಾತಿನಿಧಿಕ ಚಿತ್ರ 
ರಾಜ್ಯ

ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ವಾಟ್ಸಾಪ್ ಮೂಲಕ ಹಣ ವಸೂಲಿ; ಆಂಧ್ರ ಪ್ರದೇಶದಲ್ಲಿ ವ್ಯಕ್ತಿಯ ಬಂಧನ

ಲೋಕಾಯುಕ್ತ ಅಧಿಕಾರಿಯೆಂದು ಬಿಂಬಿಸಿ ವಾಟ್ಸಾಪ್ ಮೂಲಕ ಹಣ ವಸೂಲಿಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಲೋಕಾಯುಕ್ತ ಅಧಿಕಾರಿಯೆಂದು ಬಿಂಬಿಸಿ ವಾಟ್ಸಾಪ್ ಮೂಲಕ ಹಣ ವಸೂಲಿಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನ ಪೊಲೀಸ್ ಆಯುಕ್ತರ ಪತ್ರಿಕಾ ಪ್ರಕಟಣೆ ಪ್ರಕಾರ, ಧನಂಜಯ ರೆಡ್ಡಿ ತೋಟ (31) ಎಂಬಾತ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಪಂಚಾಯಿತಿ ಅಧಿಕಾರಿ ಪುರುಷೋತ್ತಮ್ ಅವರಿಗೆ ಕರೆ ಮಾಡಿದ್ದಾನೆ. ಆಪಾದಿತ ಭ್ರಷ್ಟಾಚಾರ ಪ್ರಕರಣವನ್ನು ಪರಿಹರಿಸಲು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ.

ಈ ಬಗ್ಗೆ ಅನುಮಾನಗೊಂಡ ಪುರುಷೋತ್ತಮ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರೆ ಮಾಡಿದ್ದನ್ನು ಪತ್ತೆಹಚ್ಚಿದ ಪೊಲೀಸರು, ಆಂಧ್ರ ಪ್ರದೇಶಕ್ಕೆ ತೆರಳಿ ಅಲ್ಲಿ ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಲೋಕಾಯುಕ್ತ ಸಂಸ್ಥೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕಾನೂನು ಕ್ರಮ ಕೈಗೊಳ್ಳುವುದಾಗಿ ಹೆದರಿಸಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ತೋಟ ಬೇರೆ ಕಡೆಯೂ ಇದೇ ರೀತಿ ವಂಚನೆ ನಡೆಸಿದ್ದಾನಾ ಎಂಬ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ತೋಟ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

Mysuru Dasara: 'ಯುವ ದಸರಾ' ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

India without Politics: 'ಹನುಮಾನ್ ಅಂಶ್' ನೋಡಲು ಚಪ್ಪಲಿ ಬಿಚ್ಚಿ ಕುಳಿತ ಮುಸ್ಲಿಂ ವ್ಯಕ್ತಿ; video ವೈರಲ್

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; 'ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ': ತಜ್ಞ Arnold Dix

'ಭಾರತ ಕೂಡ ಸೋತಿದೆ' ಎಂದ PCB: ಮೊಹ್ಸಿನ್ ನಕ್ವಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ Iceland Cricket Board