ಸಾಂದರ್ಭಿಕ ಚಿತ್ರ 
ರಾಜ್ಯ

ಸಾಪ್ಟ್ ವೇರ್ ಕಂಪನಿ ಮಹಿಳಾ ಉದ್ಯೋಗಿಗೆ 58 ಲಕ್ಷ ರೂ ವಂಚನೆ; ನಾಲ್ವರು CA ಇಂಟರ್ನ್ ಗಳು ಸೇರಿ ಆರು ಮಂದಿ ಬಂಧನ

ಆರೋಪಿಗಳು ವಾಟ್ಸಾಪ್‌ನಲ್ಲಿ ಕಂಪನಿಯ ಲೋಗೋ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು 50 ವರ್ಷದ ಹಿರಿಯ ಅಕೌಂಟೆಂಟ್ ಮಹಿಳೆಯಿಂದ ರೂ. 58 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಬೆಂಗಳೂರು: ಸಾಫ್ಟ್‌ವೇರ್ ಕಂಪನಿಯೊಂದರ ಮಹಿಳಾ ಉದ್ಯೋಗಿಯನ್ನು ವಂಚಿಸಿದ ಆರೋಪದ ಮೇಲೆ ನಾಲ್ಕು ಚಾರ್ಟರ್ಡ್ ಅಕೌಂಟೆಂಟ್ (CA) ಇಂಟರ್ನ್ ಗಳು ಸೇರಿದಂತೆ ಆರು ಜನರನ್ನು ಆಗ್ನೇಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ವಾಟ್ಸಾಪ್‌ನಲ್ಲಿ ಕಂಪನಿಯ ಲೋಗೋ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು 50 ವರ್ಷದ ಹಿರಿಯ ಅಕೌಂಟೆಂಟ್ ಮಹಿಳೆಯಿಂದ ರೂ. 58 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಆರೋಪಿಗಳನ್ನು ಗ್ರೀಷ್ಮಾ (23), ಎನ್ ದಿನೇಶ್ (24), ಹರ್ಷಿತ್ ಎಂ ಎಸ್ (23) ಮತ್ತು ಪವನ್ ಕುಮಾರ್ (24) ಎಂದು ಗುರುತಿಸಲಾಗಿದೆ. ಇವರೆಲ್ಲಾರೂ ಎಲ್ಲಾ ಸಿಎ ಇಂಟರ್ನ್ ಗಳು ಮತ್ತು ಸಹಪಾಠಿಗಳು. ಇತರ ಆರೋಪಿಗಳಾದ ಎನ್ ಸಾಯಿಕುಮಾರ್ (23) ಮತ್ತು ರವಿತೇಜ (32) ಅವರು ಹಲವಾರು ಚಲನಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಡಿಸೆಂಬರ್ 3 ರಂದು ಬಿಟಿಎಂ ಲೇಔಟ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿಯ ಅಕೌಂಟೆಂಟ್‌ಗೆ ಕಂಪನಿಯ ಲೋಗೋ ಮತ್ತು ಎಂಡಿ ಫೋಟೋವಿರುವ ನಂಬರ್‌ನಿಂದ ವಾಟ್ಸಾಪ್ ಮೇಸೆಜ್ ಬಂದಿದೆ. ಅಧರಲ್ಲಿ ಸಂತ್ರಸ್ತರಿಗೆ ಕಂಪನಿಯ ಪ್ರಾಜೆಕ್ಟ್‌ಗಾಗಿ ಮುಂಗಡ ಭದ್ರತಾ ಠೇವಣಿಯಾಗಿ 56,001,00 ರೂಗಳನ್ನು ವರ್ಗಾಯಿಸುವಂತೆ ಸೂಚಿಸಲಾಗಿದೆ. ಎಂಡಿ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಮೇಸೆಜ್ ಮಾಡಲಾಗಿದೆ. ಇದನ್ನು ನಂಬಿದ ಸಂತ್ರಸ್ತೆ

ಮೇಸೆಜ್ ನಲ್ಲಿ ನೀಡಲಾದ ಬ್ಯಾಂಕ್ ಖಾತೆ ವಿವರಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಎಂಡಿಯೊಂದಿಗೆ ಮಾತನಾಡಿದ ಬಳಿಕ ವಂಚನೆಗೊಳಗಾಗಿರುವುದು ತಿಳಿದುಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕಿತನನ್ನು ಹೈದರಬಾದಿನಲ್ಲಿ ಪೊಲೀಸರು ಬಂಧಿಸಿದ ನಂತರ ಈ ದಂಧೆಯಲ್ಲಿ ಇತರ ಐವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಹಣವನ್ನು ಹಿಂಪಡೆದು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ, ಸಂತ್ರಸ್ತೆ ಮತ್ತು ಆರೋಪಿಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಿಂಗ್‌ಪಿನ್ ಇನ್ನೂ ಪತ್ತೆಯಾಗಿಲ್ಲ.ಆರೋಪಿಗಳಿಂದ ಹೊಚ್ಚಹೊಸ ಐಷಾರಾಮಿ ಕಾರು ಹಾಗೂ 58,600 ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ಬಾರಿ 'ಮೈಸೂರು ದಸರಾ' ಯಶಸ್ವಿ: ಸಮೀಕ್ಷೆ ಬಳಿಕ ಬೆಳೆಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಪರಿಹಾರ- ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ'...ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

SCROLL FOR NEXT