ಕರ್ನಾಟಕ ಹೈಕೋರ್ಟ್ 
ರಾಜ್ಯ

ಸುಳ್ಳು ದೂರು ದಾಖಲಿಸುವುದು ಬಹುದೊಡ್ಡ ಪಾಪ: ಪೋಕ್ಸೋ ಕಾಯ್ದೆ ದುರ್ಬಳಕೆ ಕುರಿತು ಪೋಷಕರಿಗೆ ಹೈಕೋರ್ಟ್ ಎಚ್ಚರಿಕೆ!

ಸಂಸಾರದಲ್ಲಿ ಉಂಟಾಗುವ ಗೊಂದಲದಿಂದ ಪೋಷಕರು ತಮ್ಮ ಸ್ವಂತ ಮಕ್ಕಳ ಮೇಳೆ ಲೈಂಗಿಕ ದೌರ್ಜನ್ಯದ ನಡೆದಿದೆ ಎಂದು ಆರೋಪಿಸಿ ಬಳಿಕ ಮರೆತು ಬಿಡುತ್ತಾರೆ. ಆದರೆ, ಈ ರೀತಿಯ ಪ್ರಕರಣಗಳು ಮಗುವಿನ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಊಹಿಸಲು ಸಾಧ್ಯವಿಲ್ಲ.

ಬೆಂಗಳೂರು: ದುರುದ್ದೇಶಪೂರಿತ ನಡುವಳಿಕೆಗಳನ್ನು ಮಕ್ಕಳ ಮೇಲೆ ಪೋಷಕರು ಪ್ರಯೋಗ ಮಾಡುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಮಗಳ ಮೇಲೆ ಮಲತಂದೆಯಿಂದ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದಾಖಲಿಸಿದ್ದ ಪ್ರಕರಣ ಮತ್ತದರ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.

ಅಪ್ರಾಪ್ತ ಮಕ್ಕಳ ಪಾಲನೆ ಪೋಷಣೆ ಪಡೆಯಲು ವಿಚ್ಚೇಧಿತ ದಂಪತಿಗಳು ಸುಳ್ಳು ಮೊಕದ್ದಮೆ ದಾಖಲಿಸುತ್ತಿರುವ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ, ಮಹಿಳೆಯ ಪತಿಯ ವಿರುದ್ಧ ಮೊದಲ ಪತಿ ದಾಖಲಿಸಿದ್ದ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸಂಸಾರದಲ್ಲಿ ಉಂಟಾಗುವ ಗೊಂದಲದಿಂದ ಪೋಷಕರು ತಮ್ಮ ಸ್ವಂತ ಮಕ್ಕಳ ಮೇಳೆ ಲೈಂಗಿಕ ದೌರ್ಜನ್ಯದ ನಡೆದಿದೆ ಎಂದು ಆರೋಪಿಸಿ ಬಳಿಕ ಮರೆತು ಬಿಡುತ್ತಾರೆ. ಆದರೆ, ಈ ರೀತಿಯ ಪ್ರಕರಣಗಳು ಮಗುವಿನ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಆರೋಪ ಮಾಡುವುದಕ್ಕೂ ಮುನ್ನ ಪೋಷಕರು ಆಲೋಚನೆ ಮತ್ತು ಆತ್ಮಾವಲೋಕನಕ್ಕೆ ಒಳಗಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಈ ರೀತಿಯ ಆರೋಪಗಳು ನಿಜವೇ ಆಗಿದ್ದರೆ, ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಮಗು ವಶಕ್ಕೆ ನೀಡದ ಉದ್ದೇಶಕ್ಕಾಗಿ ಸುಳ್ಳು ದೂರು ದಾಖಲಿಸುವಂತಹ ಬೆಳವಣಿಗೆಗಳಿಗಿಂತಲೂ ದೊಡ್ಡ ಪಾಪ ಮತ್ತೊಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮಹಿಳೆಯು ಅರ್ಜಿದಾರರನ್ನು ಮದುವೆಯಾಗಿದ್ದಕ್ಕೆ ದ್ವೇಷ ಸಾಧಿಸಲು ಕಾನೂನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸಲು ಉದ್ದೇಶಿಸಿರುವ ಪೋಕ್ಸೊ ಕಾಯ್ದೆಯನ್ನೂ ದುರ್ಬಳಕೆ ಮಾಡಿಕೊಂಡಿರುವುದು ದುರದೃಷ್ಟಕರ ಸಂಗತಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಬಾಲಕಿಯ ತಾಯಿ ಮತ್ತು ಜೈವಿಕ ತಂದೆ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ, ಬಾಲಕಿಯನ್ನು ತಾಯಿಗೆ ನೀಡಲಾಗಿತ್ತು. ತಂದೆಗೆ ಮಗುವನ್ನು ಭೇಟಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಒಪ್ಪಂದದ ಪ್ರಕಾರ, ಪೋಷಕರಲ್ಲಿ ಯಾರಾದರೂ ಒಬ್ಬರು ದೂರದ ಊರುಗಳಿಗೆ ಪ್ರಯಾಣಿಸುವಾಗ ಬಾಲಕಿ ಪ್ರಯಾಣಿಸದೇ ಮನೆಯಲ್ಲಿರುವ ಪೋಷಕರೊಂದಿಗೆ ಉಳಿಯಬೇಕಾಗಿತ್ತು.

ತಾಯಿ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಗಳನ್ನು ಮೂರನೇ ಪತಿ (ಅರ್ಜಿದಾರ) ಬಳಿ ಬಿಟ್ಟಿದ್ದರು. ಇದರಿಂದ ಕೊಪಗೊಂಡಿದ್ದ ಮೊದಲ ಪತಿ, ತನ್ನ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆಸಲಾಗಿದೆ ಎಂದು ಆರೋಪಿಸಿ ತನ್ನ ಮಾಜಿ ಪತ್ನಿಯ ಮೂರನೇ ಪತಿ ಹಾಗೂ ಸಂಬಂಧಿಯ ವಿರುದ್ಧ ದೂರು ನೀಡಿದ್ದು, ದೂರಿನ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದನ್ನು ಪ್ರಶ್ನಿಸಿದ್ದ ಮೂರನೇ ಪತಿ, ತನ್ನ ವಿರುದ್ಧ ಐಪಿಸಿಯ ವಿವಿಧ ಕಲಂಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ದಾಖಲಾದ ಪ್ರಕರಣ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇತ್ತಿಚೆಗೆ  ವಿಚ್ಛೇದಿತ ಪತಿ ಅಥವಾ ಪತ್ನಿ ತಮ್ಮ ಕಸ್ಟಡಿಯಲ್ಲಿರುವ ಮಕ್ಕಳನ್ನು ಭೇಟಿ ಮಾಡಲು ನಿರಾಕರಿಸುತ್ತಿದ್ದಾರೆ,  ಹೀಗಾಗಿ ತನ್ನ ತಂದೆ ಅಥವಾ ತಾಯಿಯೊಂದಿಗೆ ಸಂವಹನ ನಿರಾಕರಿಸಲು ನ್ಯಾಯಾಲಯದ ಆದೇಶವನ್ನು ಪಡೆಯಲು ಇದನ್ನು ಮಾಡಲಾಗುತ್ತಿದೆ, ಇದರಿಂದ ಮಗುವಿನ ಶಾಲೆ ಮತ್ತು ಮಗುವಿನ ಪಠ್ಯೇತರ ಚಟುವಟಿಕೆಗಳಲ್ಲಿ  ತೊಡಗದಂತೆ ಮಾಡಿ ವಂಚಿತಗೊಳಿಸುತ್ತಾರೆ. ಇಂತಹ ಹಲವು ವಿಷಯಗಳು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ಕೋರ್ಟ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT