ಮೆಮು ರೈಲು 
ರಾಜ್ಯ

ಬೆಂಗಳೂರು: ಅಯೋಧ್ಯೆಗೆ ಮೆಮು ರೈಲು, ಕೋಲಾರಕ್ಕೆ ವಿಳಂಬ ಸಾಧ್ಯತೆ

ಪ್ರಯಾಣಿಕರ ಸತತ ಬೇಡಿಕೆ ಬಳಿಕ ಇದೀಗ ಆಯೋಧ್ಯೆಗೆ ಬೆಂಗಳೂರಿನಿಂದ ಮೆಮು ರೈಲು ಆಗಮಿಸಿದ್ದು, ಕೋಲಾರದ ಜನತೆ ಮೆಮು ರೈಲಿಗಾಗಿ ಮತ್ತಷ್ಟು ದಿನಗಳ ಕಾಯಬೇಕಾದ ಅನಿವಾರ್ಯತೆ ಇದೆ.

ಬೆಂಗಳೂರು: ಪ್ರಯಾಣಿಕರ ಸತತ ಬೇಡಿಕೆ ಬಳಿಕ ಇದೀಗ ಆಯೋಧ್ಯೆಗೆ ಬೆಂಗಳೂರಿನಿಂದ ಮೆಮು ರೈಲು ಆಗಮಿಸಿದ್ದು, ಕೋಲಾರದ ಜನತೆ ಮೆಮು ರೈಲಿಗಾಗಿ ಮತ್ತಷ್ಟು ದಿನಗಳ ಕಾಯಬೇಕಾದ ಅನಿವಾರ್ಯತೆ ಇದೆ.

ಹೌದು.. ಪ್ರಯಾಣಿಕ ಬಹುದಿನಗಳ ಬೇಡಿಕೆಯಾಗಿದ್ದ ಅಯೋದ್ಯೆಗೆ ಮೆಮು ರೈಲು ಓಡಿಸುವ ಕಾರ್ಯ ಕೊನೆಗೂ ಸಾಕಾರಗೊಂಡಿದ್ದು, ಪ್ರಯಾಣಿಕರ ವಿನಂತಿಯ ಮೇರೆಗೆ ಬೆಂಗಳೂರು ರೈಲ್ವೆ ವಿಭಾಗವು ಇತ್ತೀಚೆಗೆ ಅಯೋಧ್ಯೆಗೆ ಮೆಮು ರೈಲು ನಿಯೋಜಿಸಿದೆ. ಮಾಹಿತಿ ಹಕ್ಕು ಕಾಯ್ದೆ ಅನ್ವಯ ದೊರೆತ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಕೋಲಾರದಲ್ಲಿ ಹಳಿಗಳ ಕೊರತೆ ಮತ್ತು ಟರ್ಮಿನಲ್ ನಿರ್ಬಂಧಗಳನ್ನು ಉಲ್ಲೇಖಿಸಿ ಇಲಾಖೆಯು ಮೆಮು ರೈಲು ಓಡಾಟಕ್ಕೆ ಮತ್ತಷ್ಟು ಕಾಲಾವಕಾಶ ಬೇಕಿದೆ ಎಂದು ಹೇಳಿದೆ. 

ಏಳು ತಿಂಗಳ ಹಿಂದೆ ಕೋಲಾರ ಮೂಲಕ ಯಲಹಂಕ ಮತ್ತು ಬಂಗಾರಪೇಟೆ ನಡುವಿನ 149 ಕಿ.ಮೀ ವರೆಗೆ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡೀಸೆಲ್ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳೊಂದಿಗೆ ಬದಲಾಯಿಸಬೇಕು, ಇದರಿಂದಾಗಿ ಹೆಚ್ಚಿನ ಪ್ರಯಾಣಿಕರಿಗೆ ಸ್ಥಳಾವಕಾಶ ಮತ್ತು ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಎಂದು ಪ್ರಯಾಣಿಕರು ಒತ್ತಾಯಿಸಿದರು.

ಎಲೆಕ್ಟ್ರಿಕ್ ರೈಲುಗಳು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಚಲಿಸುತ್ತವೆ. ಆದರೆ ವಿಭಾಗವು ಸಂಪೂರ್ಣವಾಗಿ ವಿದ್ಯುದ್ದೀಕರಿಸಲ್ಪಟ್ಟಿದ್ದರೂ ಚಿಕ್ಕಬಳ್ಳಾಪುರ ಬಳಿಕ ಎಲೆಕ್ಟ್ರಿಕ್ ರೈಲುಗಳು ಸಂಚಾರ ವಿಸ್ತರಣೆಯಾಗಿಲ್ಲ.  ಒಂದು ವಿಶ್ವಾಸಾರ್ಹ ರೈಲ್ವೇ ಮೂಲದ ಪ್ರಕಾರ, “ಈ ಹೊಸ ಮಾರ್ಗದಲ್ಲಿ ಓಡಲು ನಮ್ಮಲ್ಲಿ ಸಾಕಷ್ಟು ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳು ಇಲ್ಲ. ಇದಲ್ಲದೆ, ಇತ್ತೀಚೆಗೆ ಅಯೋಧ್ಯೆಗೆ ರೇಕ್ (ಬೋಗಿಗಳ ಗುಂಪು)ಗಳನ್ನು ಕಳುಹಿಸಲಾಗಿದೆ. ನಾವು ಅದನ್ನು ಬಳಸಬಹುದಿತ್ತು ಮತ್ತು ಇದರಿಂದ  ಕನಿಷ್ಠ 2-3 ಟ್ರಿಪ್ ಗಳಾದರು ಓಡಬಹುದಿತ್ತು. ಆದರೆ ಈಗ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಇದಕ್ಕೆ ರೇಕ್ ಗಳ ಕೊರತೆಯೊಂದೇ ಕಾರಣವಲ್ಲ ಎಂದು ತಿಳಿಸಿದ ಅವರು ಸಿಬ್ಬಂದಿ ಕೊರತೆಯೂ ಕಾರಣ ಎಂದು ಹೇಳಿದ್ದಾರೆ. ನಾವು MEMU ರೈಲುಗಳನ್ನು ಪ್ರಾರಂಭಿಸಿದರೆ, ಅವುಗಳನ್ನು ನಿರ್ವಹಿಸಲು ಮತ್ತು ವಿದ್ಯುತ್ ಉಪಕರಣಗಳನ್ನು ಸಹ ರಕ್ಷಿಸಲು ಕೋಲಾರ ರೈಲು ನಿಲ್ದಾಣದಲ್ಲಿ ನಮಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಸದ್ಯಕ್ಕೆ ಯಾವುದೇ ನೇಮಕಾತಿಯೂ ನಡೆಯುತ್ತಿಲ್ಲ ಎಂದು ಹೇಳಿದರು.

ಚಿಂತಾಮಣಿ ಮೂಲದ ರೈಲ್ವೇ ಸಿಬ್ಬಂದಿ ಅಮೃತ್ ಗೌಡ ಅವರು ಮಾತನಾಡಿ ಮೆಮು ರೈಲುಗಳನ್ನು ಪರಿಚಯಿಸಲು ವಿಳಂಬಕ್ಕೆ ಕಾರಣಗಳನ್ನು ಕೋರಿ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಫೆಬ್ರವರಿ 7 ರಂದು ಎಸ್‌ಡಬ್ಲ್ಯೂಆರ್‌ನಿಂದ ಪ್ರತಿಕ್ರಿಯೆ ಬಂದಿತು. “ಮೆಮು ರೇಕ್‌ಗಳ ತೀವ್ರ ಕೊರತೆಯಿದೆ. ಕೋಲಾರದಲ್ಲಿ ಟರ್ಮಿನಲ್ ನಿರ್ಬಂಧಗಳಿವೆ. ಚಿಕ್ಕಬಳ್ಳಾಪುರ-ಕೋಲಾರ ಒಂದೇ ಸಾಲಿನ ವಿಭಾಗ. ಹೀಗಾಗಿ, ಚಿಕ್ಕಬಳ್ಳಾಪುರದಲ್ಲಿ ಕೊನೆಗೊಳ್ಳುವ ಮೆಮು ರೈಲುಗಳನ್ನು ಕೋಲಾರಕ್ಕೆ ವಿಸ್ತರಿಸುವುದು ಕಾರ್ಯಸಾಧ್ಯವಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದೆ ಎಂದರು.

ಕೋಲಾರದಿಂದ ಯಲಹಂಕಕ್ಕೆ ಪ್ರಯಾಣಿಸುವವರಲ್ಲಿ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಸೇರಿದ್ದಾರೆ. ಎಂಇಎಂಯು ಅಳವಡಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ-ಕೋಲಾರ ರೈಲು ಬಳಕೆದಾರರ ಸಂಘದ ಸದಸ್ಯ ಯು.ಯಧುಕೃಷ್ಣ ಹೇಳಿದರು.

“ನಾಲ್ಕು DEMU ರೈಲು ಜೋಡಿಗಳು ಈ ಹಾದಿಯಲ್ಲಿ ಓಡುತ್ತಿವೆ. ಅವು ಕೆಎಸ್‌ಆರ್ ಬೆಂಗಳೂರು ಅಥವಾ ಯಲಹಂಕ ಅಥವಾ ಕೋಲಾರದಲ್ಲಿ ಪ್ರಾರಂಭವಾಗುತ್ತವೆ ಮತ್ತು ಒಂದು ರೈಲು ಹಾಸನದವರೆಗೆ ಸಹ ಚಲಿಸುತ್ತದೆ. ಕೋಲಾರದಿಂದ ಬೆಂಗಳೂರಿಗೆ 3 ಗಂಟೆಗಳ ಕಾಲ ಪ್ರಯಾಣಿಸಲು ಅನೇಕ ಪ್ರಯಾಣಿಕರಿಗೆ ಆಸನದ ಸ್ಥಳವಿಲ್ಲ ಮತ್ತು ಅವರು ತಮ್ಮ ಕೆಲಸದ ಸ್ಥಳವನ್ನು ತಲುಪುವ ಹೊತ್ತಿಗೆ ದಣಿದಿರುತ್ತಾರೆ. ಒಂದು ಡಿಇಎಂಯು ಎಂಟು ಕೋಚ್‌ಗಳನ್ನು ಹೊಂದಿರುತ್ತದೆ ಮತ್ತು ಗರಿಷ್ಠ 800 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ. ಆದರೆ ತುಲನಾತ್ಮಕವಾಗಿ, 16 ಬೋಗಿಗಳ ಎಂಇಎಂಯುನಲ್ಲಿ ಸುಲಭವಾಗಿ 1,000 ಪ್ರಯಾಣಿಕರು ಕುಳಿತುಕೊಳ್ಳಬಹುದು. ಇದು ಸಾರ್ವಜನಿಕರಿಗೆ ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂದು ಯಧುಕೃಷ್ಣ ವಿವರಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT