ಚಾಲಕರಹಿತ ಮೆಟ್ರೋ ಬೋಗಿ 
ರಾಜ್ಯ

ಕೊನೆಗೂ ಬೆಂಗಳೂರಿಗೆ ಬಂತು ಚಾಲಕರಹಿತ ಮೆಟ್ರೋ ಬೋಗಿ

ಸಿಲಿಕಾನ್ ಸಿಟಿ ಬೆಂಗಳೂರಿಗೆ ಚಾಲಕರಹಿತ ಮೆಟ್ರೋ ಬೋಗಿ ಬಂದಿದ್ದು, ನಗರದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೋಗಿ ಚೀನಾದಿಂದ ಬೆಂಗಳೂರಿಗೆ ಆಗಮಿಸಿದೆ. 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಚಾಲಕರಹಿತ ಮೆಟ್ರೋ ಬೋಗಿ ಬಂದಿದ್ದು, ನಗರದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೋಗಿ ಚೀನಾದಿಂದ ಬೆಂಗಳೂರಿಗೆ ಆಗಮಿಸಿದೆ. 

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಈ ರೈಲು ಓಡಿಸಲು ಯೋಜನೆ ರೂಪಿಸಿದ್ದು, ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೋಗಿ ಚೀನಾದಿಂದ ಕಳೆದ ವಾರ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಕಸ್ಟಮ್ಸ್‌ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ರಸ್ತೆ ಮಾರ್ಗವಾಗಿ ರೈಲು ಬೋಗಿಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು. ಒಟ್ಟು ಮೂರು ಲಾರಿಗಳಲ್ಲಿ 6 ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳು ಬುಧವಾರ ಮುಂಜಾನೆ 3.30ಕ್ಕೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋ ಮಾಹಿತಿ ನೀಡಿದ್ದು ಚಿತ್ರಗಳನ್ನು ಸಹ ಪೋಸ್ಟ್ ಮಾಡಿದೆ.

ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳನ್ನು ತಯಾರು ಮಾಡಲು ಚೀನಾ ಮೂಲದ CRRC Nanjing Puzhen Co Ltd. T ಟೆಂಡರ್ ಪಡೆದಿತ್ತು. ಈ ಬೋಗಿಗಳು ತಯಾರಾದ ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಚೀನಾಕ್ಕೆ ತೆರಳಿ, ಅವುಗಳನ್ನು ಪರಿಶೀಲಿಸಿದ್ದರು. ಬಳಿಕ ಭಾರತಕ್ಕೆ ತರುವ ಪ್ರಕ್ರಿಯೆ ಆರಂಭವಾಯಿತು. 6 ಬೋಗಿಯ ಮೆಟ್ರೋ ರೈಲು ಜನವರಿ 24ರಂದು ಶಾಂಘೈ ಬಂದರಿನಿಂದ ಹೊರಟಿದ್ದವು. ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿದ್ದವು. ಅಲ್ಲಿನ ಕಸ್ಟಮ್ಸ್ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಬೃಹತ್ ಲಾರಿಗಳ ಮೂಲಕ ಅವುಗಳನ್ನು ಬೆಂಗಳೂರಿ ತರಲಾಗಿದೆ. ಈ ಮೂಲಕ ಬೆಂಗಳೂರು ನಗರಕ್ಕೆ ಚಾಲಕ ರಹಿತ ನಮ್ಮ ಮೆಟ್ರೋ ರೈಲಿನ ಆಗಮನವಾಗಿದೆ.

ಚೆನ್ನೈ ಬಂದರಿನ ಕಸ್ಟಮ್ಸ್ ಕೋಚ್‌ಗಳನ್ನು ಎತ್ತಲು ಅಗತ್ಯವಾದ ನಿರ್ಣಾಯಕ ಸಲಕರಣೆಗಳ ಕ್ಲಿಯರೆನ್ಸ್ ಅನ್ನು ವಿಳಂಬಗೊಳಿಸಿದ್ದರಿಂದ, ಬೆಂಗಳೂರಿಗೆ ಚಾಲಕ ರಹಿತ ಬೋಗಿ ಪ್ರವೇಶ ಗುರುವಾರಕ್ಕೆ ಮುಂದೂಡಿಕೆಯಾಗಿತ್ತು. ಆದಾಗ್ಯೂ, ಮಂಗಳವಾರ ರಾತ್ರಿ 8 ಗಂಟೆಗೆ ಕಸ್ಟಮ್ಸ್ ತೆರವು ಬಂದಿದ್ದು, ಇದೀಗ ಬೋಗಿ ಬೆಂಗಳೂರಿಗೆ ಆಗಮಿಸಿದೆ.

ಕೋಚ್‌ಗಳು (ಸಂವಹನ ಆಧಾರಿತ ರೈಲು ನಿಯಂತ್ರಣ) ಜನವರಿ 24 ರಂದು ಶಾಂಘೈ ಬಂದರಿನಿಂದ MV ಸ್ಪ್ರಿಂಗ್ ಮೋಟಾದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದವು. ಫೆಬ್ರವರಿ 6 ರಂದು ಚೆನ್ನೈ ತಲುಪಿ ಮತ್ತು ಫೆಬ್ರವರಿ 10 ರಂದು ಚೆನ್ನೈ ಬಂದರಿನಲ್ಲಿ ಕಸ್ಟಮ್ಸ್ ತೆರವುಗೊಳಿಸಿತ್ತು. ಪ್ರತಿಯೊಂದು 38.7 ಟನ್ ತೂಕದ ಬೋಗಿಗಳು ಅದೇ ರಾತ್ರಿ ಬೆಂಗಳೂರಿನ ಕಡೆಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದವು" ಎಂದು ಯುನಿಟ್ರಾನ್ಸ್ ಶಿಪ್ಪಿಂಗ್ ಮತ್ತು ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್‌ನ ಪ್ರತಿನಿಧಿ ಹೇಳಿದ್ದಾರೆ. ಇದು ಚೀನೀ ಕಂಪನಿ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋಗಾಗಿ ಕೆಲಸ ಮಾಡುವ ಶಿಪ್ಪಿಂಗ್ ಸಂಸ್ಥೆಯಾಗಿದೆ.

 ಹಗಲಿನ ವೇಳೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಟ್ರೈಲರ್‌ಗಳಲ್ಲಿ ಸಾಗಿಸಲಾದ ಕೋಚ್‌ಗಳು ರಾತ್ರಿಯಲ್ಲಿ ಮಾತ್ರ ಪ್ರಯಾಣಿಸಬಹುದು. ಹೀಗಾಗಿ ಕೋಚ್ ಗಳು ಹಗಲಿನ ವೇಳೆ ಕಾಂಚಿಪುರಂ, ವೆಲ್ಲೂರು ಮತ್ತು ಕೃಷ್ಣಗಿರಿಯಲ್ಲಿ ನಿಂತಿದ್ದವು. ಈ ಕುರಿತು ಮಾತನಾಡಿರುವ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು, 'ಟ್ರಾಲರ್‌ಗಳು ಗಂಟೆಗೆ ಸರಾಸರಿ 25-30 ಕಿಮೀ ವೇಗದಲ್ಲಿ ಚಲಿಸುತ್ತವೆ. ಬೆಳಗ್ಗೆ 3 ಗಂಟೆಗೆ ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.

ಅಂತೆಯೇ ಬುಧವಾರದ ಬೆಳ್ಳಂಬೆಳಗ್ಗೆ ಬೋಗಿ ಬೆಂಗಳೂರು ತಲುಪುವ ನಿರೀಕ್ಷೆಯಿದೆ" ಎಂದು ಸರಕು ಸಾಗಣೆದಾರರಾದ ಟೋಟಲ್ ಮೂವ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಚರಣೆಯ ಉಸ್ತುವಾರಿ ಕೇಶವ್ ಎಸ್ ಹೇಳಿದ್ದರು.

ಆದಾಗ್ಯೂ, ಚೀನಾದಿಂದ ಇಂಜಿನಿಯರ್‌ಗಳಿಗೆ ವೀಸಾ ನೀಡುವಲ್ಲಿ ದೀರ್ಘ ವಿಳಂಬ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಿದ ಚಾಲಕರಹಿತ ರೈಲು ಕೊನೆಗೂ ಬೆಂಗಳೂರು ತಲುಪಿದೆ.  “ಕೋಚ್‌ಗಳೊಂದಿಗೆ ಕಳುಹಿಸಲಾದ ಸ್ಪ್ರೆಡರ್ ಬೀಮ್‌ಗೆ ಚೆನ್ನೈ ಬಂದರಿನಲ್ಲಿ ಕಸ್ಟಮ್ಸ್ ಅನುಮತಿ ನೀಡಲಿಲ್ಲ. ಹೀಗಾಗಿ ಕೋಚ್ ಗಳು ಅಲ್ಲೇ ಉಳಿದಿವೆ. ಕೋಚ್ ಗಳನ್ನು ಮೇಲಕ್ಕೆತ್ತುವುದು ನಿರ್ಣಾಯಕವಾಗಿದೆ. ಸ್ಪ್ರೆಡರ್ ಬೀಮ್‌ ಗಳನ್ನು ನಿರ್ದಿಷ್ಟವಾಗಿ ಆ ಕೋಚ್‌ಗಳಿಗಾಗಿ ತಯಾರಿಸಲಾಗಿರುವುದರಿಂದ ಸ್ಥಳೀಯವಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT