ರಾಜ್ಯ

ರಾಜ್ಯದಲ್ಲಿ ಇಂದು ಕೊರೋನಾದಿಂದ ಒಬ್ಬರು ಸಾವು, 148 ಮಂದಿಗೆ ಪಾಸಿಟಿವ್!

Nagaraja AB

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 148 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,144ಕ್ಕೆ ಏರಿಕೆಯಾಗಿದೆ. 248 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 6,237 ಆರ್ ಟಿಪಿಸಿಆರ್, 1,068 Rat ಟೆಸ್ಟ್ ಸೇರಿದಂತೆ ಒಟ್ಟು 7,305 ಟೆಸ್ಟ್ ಮಾಡಲಾಗಿದೆ. ಪಾಸಿಟಿವಿಟಿ ದರ ಶೇ. 2.02 ರಷ್ಟಿದ್ದು, ಮರಣ ಪ್ರಮಾಣ ದರ ಶೇ. 0.67 ರಷ್ಟಿದೆ. 1,144 ಸಕ್ರಿಯ ಪ್ರಕರಣಗಳ ಪೈಕಿ 1,089 ಮಂದಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದರೆ, 55 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 23 ಐಸಿಯು ಮತ್ತು 32 ಮಂದಿ ಐಸೋಲೇಷನ್ ಬೆಡ್ ನಲ್ಲಿದ್ದಾರೆ. 

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 164 ಪ್ರಕರಣಗಳು ವರದಿಯಾಗಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ 8, ಬಳ್ಳಾರಿಯಲ್ಲಿ 1, ಚಾಮರಾಜನಗರದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 6, ದಕ್ಷಿಣ ಕನ್ನಡ 15, ಧಾರವಾಡ 3, ಗದಗ 4, ಹಾಸನ 10, ಹಾವೇರಿ 1, ಕೊಡಗು 1, ಕೋಲಾರ 2, ಮಂಡ್ಯ 6, ಮೈಸೂರು 17, ಶಿವಮೊಗ್ಗ 4, ಉತ್ತರ ಕನ್ನಡದಲ್ಲಿ 2 ಪ್ರಕರಣಗಳು ವರದಿಯಾಗಿದೆ.
 

SCROLL FOR NEXT