ಕೊಡಗಿನ ಲೈಬ್ರರಿಯಲ್ಲಿ ಭವಾನಿ 
ರಾಜ್ಯ

ಕೊಡಗಿನ ಸ್ವಚ್ಛತಾ ಸಿಬ್ಬಂದಿಗೆ ಹೊಸ ಭರವಸೆ ಮೂಡಿಸಿದ ಡಿಜಿಟಲ್ ಲೈಬ್ರರಿ!

ಕೊಡಗಿನ ಗ್ರಾಮೀಣ ಭಾಗದಲ್ಲಿರುವ ಡಿಜಿಟಲ್ ಲೈಬ್ರರಿಯು ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗೆ ಹೊಸ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿದೆ.

ಮಡಿಕೇರಿ: ಕೊಡಗಿನ ಗ್ರಾಮೀಣ ಭಾಗದಲ್ಲಿರುವ ಡಿಜಿಟಲ್ ಲೈಬ್ರರಿಯು ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗೆ ಹೊಸ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿದೆ. ಭವಾನಿ ಎಚ್‌ಡಿ (48) ಅವರು ಎಂದಿಗೂ ಶಾಲೆಗೆ ಸರಿಯಾಗಿ ಹಾಜರಾಗಿರಲಿಲ್ಲ. ಇದೀಗ ಅವರು  ಡಿಜಿಟಲ್ ಲೈಬ್ರರಿಯ ಸಹಾಯ ಪಡೆದು 10 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ತಮ್ಮ 12 ವರ್ಷದ ವೃತ್ತಿ ಜೀವನದಲ್ಲಿ ಬಡ್ತಿಯ ನಿರೀಕ್ಷೆಯಲ್ಲಿದ್ದಾರೆ. 

ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ನಿವಾಸಿ ಭವಾನಿ ಬಡ ಕುಟುಂಬದಿಂದ ಬಂದವರು. ತನ್ನ ಬಾಲ್ಯದಲ್ಲಿ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ದಿನಗೂಲಿಯಾಗಿ ಕೆಲಸ ಮಾಡುವ ಮೂಲಕ ಸಂಪಾದಿಸಲು ಪ್ರಾರಂಭಿಸಿದರು. ನಂತರ ಮಾಲ್ದಾರೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿ ಕಳೆದ 12 ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಅವರನ್ನು ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಪೌರಕಾರ್ಮಿಕರಾಗಿ ನಿಯೋಜಿಸಲಾಗುತ್ತಿದೆ.

ಆದರೆ, ಟ್ಯೂಬಲ್ ಲಿಗೇಶನ್, ಗರ್ಭಾಶಯ, ಪೈಲ್ಸ್, ಅಪೆಂಡಿಕ್ಸ್ ಮತ್ತು ಕಾಲಿನ ಶಸ್ತ್ರಚಿಕಿತ್ಸೆ ಸೇರಿದಂತೆ ಐದು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭವಾನಿಗೆ ಅವರಿಗೆ ಭಾರವನ್ನು ಎತ್ತಲು ಸಾಧ್ಯವಾಗುವುದಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೇರೆ ಕೆಲಸದ ವಿವರ ನೀಡುವಂತೆ ಮನವಿ ಮಾಡಿದ್ದು, 10ನೇ ತರಗತಿ ಪಾಸಾಗಿದ್ದರೆ ಪಂಚಾಯಿತಿಗೆ ಅಟೆಂಡರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಿತ್ತು ಎಂದು ಅಂದಿನ ಪಿಡಿಒ ಹೇಳಿದ್ದಾರೆ. ನಂತರ 10ನೇ ತರಗತಿ ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದು, ಅಂಟೆಂಡರ್ ಹುದ್ದೆ ಪಡೆಯುವ ಕನಸಿನಲ್ಲಿ ಡಿಜಿಟಲ್ ಲೈಬ್ರರಿಗೆ ಹೋಗಿ  ಗ್ರಂಥಾಲಯದ ಮೇಲ್ವಿಚಾರಕಿ ಸುಜಿತಾ ಅವರಿಂದ ಬೆಂಬಲ ದೊರಕಿದ್ದಾಗಿ ಭವಾನಿ ಹೇಳಿಕೊಂಡರು. 

ಗ್ರಾಮಾ ಡಿಜಿ ವಿಕಾಸ್ ಪೋರ್ಟಲ್‌ನಿಂದ ಅಧ್ಯಯನ ಸಾಮಗ್ರಿಗಳನ್ನು ಡೌನ್‌ಲೋಡ್ ಮಾಡಿಕೊಟ್ಟೆ. ಅಧ್ಯಯನ ಸಾಮಗ್ರಿಗಳು ವಿಡಿಯೋ ರೂಪದಲ್ಲಿದ್ದು, ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಭವಾನಿ ಪ್ರತಿದಿನ ಗ್ರಂಥಾಲಯಕ್ಕೆ ಭೇಟಿ ನೀಡಿ ಬೋರ್ಡ್ ಪರೀಕ್ಷೆಗೆ ಓದುತ್ತಿದ್ದರು ಎಂದು ಗ್ರಂಥಾಲಯ ಮೇಲ್ವಿಚಾರಕಿ ಕೆ.ವಿ. ಸುಜಿತಾ ತಿಳಿಸಿದರು.

ಮೂರು ತಿಂಗಳ ಕಾಲ ಪ್ರತಿದಿನ ಕೆಲವು ಗಂಟೆಗಳ ಕಾಲ ಗ್ರಂಥಾಲಯದಲ್ಲಿ ಓದುತ್ತಿದ್ದ ಭವಾನಿ, ಕಳೆದ ವರ್ಷ ಮಾರ್ಚ್‌ನಲ್ಲಿ ಬೋರ್ಡ್ ಪರೀಕ್ಷೆ ಬರೆದಿದ್ದರು. ಆದರೆ ಅದರಲ್ಲಿ ಕನ್ನಡದಲ್ಲಿ ಮಾತ್ರ ತೇರ್ಗಡೆಯಾದರು. ಆದರೆ, ಪೂರಕ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ತೇರ್ಗಡೆಯಾಗಿದ್ದಾರೆ. ಈ ಯಶಸ್ಸಿನ ನಂತರ ಭವಾನಿ ಈಗ ಅಟೆಂಡರ್ ಹುದ್ದೆಯನ್ನು ಪಡೆಯುವ ವಿಶ್ವಾಸದಲ್ಲಿದ್ದಾರೆ. 

ಆದಾಗ್ಯೂ, ಪಂಚಾಯತ್‌ನಲ್ಲಿ ತನ್ನ ಕನಸಿನ ಹುದ್ದೆ ಪಡೆಯಲು ಅವರು ಹೋರಾಟ ಮಾಡಬೇಕಾಗಿದೆ. ಏಕೆಂದರೆ ಹಲವಾರು ಪಂಚಾಯತ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಅಟೆಂಡರ್ ಹುದ್ದೆಗೆ ಪುರುಷ ಅಭ್ಯರ್ಥಿಯನ್ನು ಒತ್ತಾಯಿಸುತ್ತಿದ್ದಾರೆ. ಆಕೆಯ ಕಠಿಣ ಪರಿಶ್ರಮವು 10 ನೇ ತರಗತಿ ಪೂರ್ಣಗೊಳಿಸಲು ಕಾರಣವಾಗಿದೆ. ಆದರೆ ಪಂಚಾಯತ್‌ನಲ್ಲಿನ ಬೆಳವಣಿಗೆಗಳಿಂದ ಅದು ಇನ್ನೂ ಫಲ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT